Royal Enfield Ev: ಕೊನೆಗೂ ಬಂತು ರಾಯಲ್ Enfield ಎಲೆಕ್ಟ್ರಿಕ್ ಬೈಕ್, ಕಡಿಮೆ ಬೆಲೆ 250 Km ಮೈಲೇಜ್.

ರಾಯಲ್ Enfield ತನ್ನ ಎಲೆಕ್ಟ್ರಿಕ್ ಮಾದರಿಯ ಬೈಕ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ತೀರ್ಮಾನವನ್ನ ಮಾಡಿದೆ.

Royal Enfield Electric Bike: ಸದ್ಯ ಮಾರುಕಟ್ಟೆಯಲ್ಲಿ ಎಲ್ಲಾ ಮಾದರಿಯ ಬೈಕ್ಗಳು ಹೆಚ್ಚಿನ ಬೇಡಿಕೆ ಪಡೆಯುತ್ತಿವೆ. ಅದರಲ್ಲೂ ರಾಯಲ್ ಏನ್ ಫೀಲ್ಡ್ ಬುಲೆಟ್ ಬೈಕ್ ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ರಾಯಲ್ ಏನ್ ಫೀಲ್ಡ್ (Royal Enfield) ಕಂಪನಿಯು ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಮಾರಟನ್ನು ಹೆಚ್ಚಿಸುತ್ತ ಹೋಗುತ್ತಿದೆ.

ಇನ್ನೂ ಮಾರುಕಟ್ಟೆಯಲ್ಲಿ ರಾಯಲ್ ಏನ್ ಫೀಲ್ಡ್ ಬೈಕ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದರೆ ತಪ್ಪಾಗಲಾರದು. ಇತ್ತೀಚೆಗಷ್ಟೇ ಕಂಪನಿಯು ರಾಯಲ್ ಏನ್ ಫೀಲ್ಡ್ ಬುಲೆಟ್ 350 , ರಾಯಲ್ ಏನ್ ಫೀಲ್ಡ್ ಹಿಮಾಲಯನ್ 450, ರಾಯಲ್ ಏನ್ ಫೀಲ್ಡ್ ಶಾರ್ಟ್ ಗನ್ 650 ಸೇರಿದಂತೆ ಇನ್ನಿತರ ನೂತನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುತ್ತಿದೆ. ಇದೀಗ ಮಾರುಕಟ್ಟೆಯಲ್ಲಿ ರೊಯಾಲ್ ಎಂಫಿಲ್ಡ್ ಕಂಪನಿ ಹೊಸ ಅಲೆ ಸೃಷ್ಟಿಸಲು ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ.

Royal Enfield Electric Bike
Image Source: Financial Express

ಎಲೆಕ್ಟ್ರಿಕ್ ಮಾದರಿಯ ಬಿಡುಗಡೆಗೆ ಸಜ್ಜಾದ ರಾಯಲ್ ಏನ್ ಫೀಲ್ಡ್
ಮಾರುಕಟ್ಟೆಯಲ್ಲಿ ಇತ್ತೀಚೆಗೆ ಕಚ್ಚಾ ತೈಲಗಳ ಬೆಲೆ ಏರಿಕೆಯಾಗುತ್ತಿದೆ. ಒಂದು ವಿಧದಲ್ಲಿ ಈ ಕಚ್ಚಾ ತೈಲಗಳ ಬೆಲೆಯ ಏರಿಕೆಯ ಪರಿಣಾಮ ವಾಹನ ಸವಾರರ ಮೇಲೆ ಬೀರುತ್ತಿದೆ. ಹೀಗಾಗಿ ಹೊಸ ವಾಹನವನ್ನು ಖರೀದಿಸಲು ಬಯಸುವವರು ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯ ಖರೀದಿಯ ಬಗ್ಗೆ ಗಮನ ಹರಿಸುತ್ತಾರೆ.

ಇನ್ನೂ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಮಾದರಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆ ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ರಾಯಲ್ ಏನ್ ಫೀಲ್ಡ್ ಇದೀಗ ತನ್ನ ಮೊದಲ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಮಾರುಕಟ್ಟೆಯಲ್ಲಿ ರಾಯಲ್ ಏನ್ ಫೀಲ್ಡ್ ಎಲೆಕ್ಟ್ರಿಕ್ ರೂಪಾಂತರದ ಬರುವಿಕೆಯ ಬಗ್ಗೆ ಕಂಪನಿಯು ಮಾಹಿತಿ ನೀಡಿದೆ.

Royal Enfield Electric Bike
Image Source: India Today

ಶೀಘ್ರದಲ್ಲೇ ರಾಯಲ್ ಏನ್ ಫೀಲ್ಡ್ ಎಲೆಕ್ಟ್ರಿಕ್ ಮಾದರಿ ಬಿಡುಗಡೆ
ರಾಯಲ್ ಏನ್ ಫೀಲ್ಡ್ ಬುಲೆಟ್ ಬೈಕ್ ಗಳು ಹೆಚ್ಚಿನ ಮೈಲೇಜ್ ನೀಡುತ್ತದೆ. ಯುವಕರು ಹೊಸ ಬೈಕ್ ಖರೀದಿಗೆ ಮನಸ್ಸು ಮಾಡಿದರೆ ಮೊದಲ ಆಯ್ಕೆ ರಾಯಲ್ ಏನ್ ಫೀಲ್ಡ್ ಆಗಿರುತ್ತದೆ. ಇತ್ತ ಎಲೆಕ್ಟ್ರಿಕ್ ಮಾದರಿಯ ಕ್ರೇಜ್ ಹೆಚ್ಚಿರುವಾ ಕಾರಣ ಕಂಪನಿಯು ಎಲೆಕ್ಟ್ರಿಕ್ ರೂಪಾಂತರದಲ್ಲಿ ತನ್ನ ನೂತನ ಮಾದರಿಯನ್ನು ಪರಿಚಯಿಸಲು ನಿರ್ಧರಿಸಿದೆ. ಹೆಚ್ಚಿನ ಮೈಲೇಜ್ ನೀಡುವ ಎಲೆಕ್ಟ್ರಿಕ್ ರೂಪಾಂತರದ ತಯಾರಿಕೆಗೆ ಕಂಪನಿ ಸಿದ್ಧತೆ ನಡೆಸುತ್ತಿದೆ.

Join Nadunudi News WhatsApp Group

ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ರಾಯಲ್ ಎಂಫಿಎಲ್ಡ್ ಎಲೆಕ್ಟ್ರಿಕ್ ಬೈಕ್ ಸುಮಾರು 250 ಕಿಲೋಮೀಟರ್ ಮೈಲೇಜ್ ಕೊಡಬಹುದು ಎಂದು ಅಂದಾಜು ಮಾಡಲಾಗಿದೆ. ಇನ್ನೂ 2025 ರ ರಾಯಲ್ ಏನ್ ಫೀಲ್ಡ್ ಎಲೆಕ್ಟ್ರಿಕ್ ರೂಪಾಂತರ ಮಾರುಕಟ್ಟೆಗೆ ಬಂದು ಸಂಚಲನ ಸೃಷ್ಟಿಸಲಿದೆ.

Join Nadunudi News WhatsApp Group