Electricity Bill: ಉಚಿತ ವಿದ್ಯುತ್ ಘೋಷಣೆ ಬೆನ್ನಲ್ಲೇ ಇನ್ನೊಂದು ಘೋಷಣೆ ಮಾಡಿದ ಸರ್ಕಾರ, ಬೇಸರ ಹೊರಹಾಕಿದ ಜನರು.
ಉಚಿತ ವಿದ್ಯುತ್ ನೀಡಿದ್ದ ಕರ್ನಾಟಕ ಸರ್ಕಾರ ಈಗ ಇನ್ನೊಂದು ಆದೇಶವನ್ನ ಹೊರಡಿಸಿ ಜನರ ಬೇಸರಕ್ಕೆ ಕಾರಣವಾಗಿದೆ.
Electricity Bill Hike Again In karnataka: ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರ ಪಡೆದಾಗಿನಿಂದ ಹಲವು ನಿಯಮಗಳು ಬದಲಾಗುತ್ತಿವೆ. ನಿಯಮಗಳ ಬದಲಾವಣೆಯ ಜೊತೆಗೆ ಹೊಸ ಹೊಸ ಯೋಜನೆ ಕೂಡ ಜಾರಿಯಾಗುತ್ತಿದೆ. ಸರ್ಕಾರ ಉಚಿತ ಯೋಜನೆಗಳ ಲಾಭವನ್ನು ರಾಜ್ಯದ ಜನತೆ ಪಡೆಯುತ್ತಿದ್ದಾರೆ. ಉಚಿತ ಯೋಜನೆಗಳ ಖುಷಿಯಲ್ಲಿದ್ದ ಜನರಿಗೆ ಮತ್ತೊಂದೆಡೆ ಬೆಲೆ ಏರಿಕೆ ಬಿಸಿ ಮುಟ್ಟುತ್ತಿದೆ.
ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಹಾಲು, ಮೊಸರು, ತರಕಾರಿ, ಅಡುಗೆ ಎಣ್ಣೆ, ಗ್ಯಾಸ್ ಬೆಲೆ ಸೇರಿದಂತೆ ಆದರೆ ಧಾನ್ಯಗಳ ಬೆಲೆ ಕೂಡ ಏರಿಕೆಯಾಗುತ್ತಿದೆ. ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳು ರಾಜ್ಯದ ಜನತೆಗೆ ಉಚಿತವಾಗಿ ಸಿಗುತ್ತಿದ್ದರು ಕೂಡ ಒಂದು ವಿಧದಲ್ಲಿ ಬೆಲೆ ಏರಿಕೆ ಜನರ ಹಣವನ್ನ ಇನ್ನಷ್ಟು ಖರ್ಚು ಮಾಡುತ್ತಿದೆ. ಐದು ಯೋಜನೆಗಳು ಅನುಷ್ಠಾನಗೊಂಡ ನಂತರ ಬೆಲೆ ಏರಿಕೆ ತೊಂದರೆ ಎದುರಾಗಿದೆ ಎನ್ನಬಹುದು.
ಕಾಂಗ್ರೆಸ್ ನೀಡುತ್ತಿದೆ ಉಚಿತ ಐದು ಯೋಜನೆಗಳು
ಕಾಂಗ್ರೆಸ್ ಸಾರ್ಕಾರ ವಿಧಾಸಭಾ ಚುನಾವಣಾ ವೆಲೆಯ್ಲಲಿ ಘೋಷಿಸಿರುವ ಹಾಗೆ ಈಗಾಗಲೇ ನಾಲ್ಕು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನ ಭಾಗ್ಯ, ಗೃಹ ಲಕ್ಷ್ಮಿ ಯೋಜನೆಯ ಲಭ್ಯವನ್ನು ಅರ್ಹ ಫಲಾನುಭವಿಗಳು ಪಡೆಯುತ್ತಿದ್ದಾರೆ. ಸದ್ಯದಲ್ಲೇ ನಿರುದ್ಯೋಗಿಗಳಿಗೆ ಉದ್ಯೋಗ ಭತ್ಯೆ ಕೂಡ ನೀಡಲಾಗುತ್ತದೆ.
ಉಚಿತ ವಿದ್ಯುತ್ ಬೆನ್ನಲ್ಲೇ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ
ಇನ್ನು ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ 200 ಯುನಿಟ್ ವಿದ್ಯುತ್ ನೀಡಲಾಗುತ್ತಿದೆ. 200 ಯುನಿಟ್ ಗಿಂತ ಹೆಚ್ಚಿನ ವಿದ್ಯುತ್ ಗೆ ಹಣ ಪಾವತಿಸಬೇಕಾಗಿದೆ. ಇನ್ನು ಐದು ಯೋಜನೆಗಳ ಅನುಷ್ಠಾನಕ್ಕೆ ಸರಿಸುಮಾರು ವಾರ್ಷಿಕವಾಗಿ 50 ರಿಂದ 60 ಸಾವಿರ ಕೋಟಿ ವೆಚ್ಚ ಅಗತ್ಯವಿದೆ.
ಈ ಹಣದ ಪೂರೈಕೆ ಮಾಡುವುದು ರಾಜ್ಯ ಸರ್ಕಾರಕ್ಕೆ ಹೊರೆಯಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಒಂದು ವಿದದಲ್ಲಿ ಹದೆಗೆಟ್ಟಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಬೆಲೆ ತಲೆ ಎತ್ತಿಕೊಂಡಿದೆ. ವಸ್ತುಗಳ ಬೆಲೆ ಏರಿಕೆಯ ನಡುವೆ ಇದೀಗ ವಿದ್ಯುತ್ ದರ ಏರಿಕೆಗೆ ಆದೇಶ ಹೊರಡಿಸಲಾಗಿದೆ. ಹಣದ ಹೊಂದಾಣಿಕೆಗೆ ಇಂಧನ ಮತ್ತು ವಿದ್ಯುತ್ ದರ ಏರಿಕೆ ಅನಿವಾರ್ಯ ಎನ್ನಲಾಗುತ್ತಿದೆ.
ವಿದ್ಯುತ್ ದರದ ಏರಿಕೆಯ ವಿವರ
ಈ ವಿದ್ಯುತ್ ದರದ ಏರಿಕೆ ಗೃಹ ಜ್ಯೋತಿ ಫಲಾನುಭವಿಗಳಿಗೆ ಯಾವುದೇ ತೊಂದರೆ ನೀಡುವುದಿಲ್ಲ. ಆದರೆ ಯಾರು ಗೃಹ ಜ್ಯೋತಿ ಯೋಜನೆಗೆ ಅರ್ಹಾರಲ್ಲವೋ ಅವರು ಬೆಲೆ ಏರಿಕೆಯ ಪರಿಣಾಮವನ್ನು ಎದುರಿಸಬೇಕಾಗಿದೆ. ಹಣದುಬ್ಬರದ ಜೊತೆಗೆ ಇನ್ನಷ್ಟು ಆರ್ಥಿಕ ಹೊರೆ ಹೆಚ್ಚಾಗಲಿದೆ. ಬೆಸ್ಕಾಂನಲ್ಲಿ ಪ್ರತಿ ಯುನಿಟ್ ಗೆ ರೂ. 1, ಸೆಸ್ಕಾಂನಲ್ಲಿ ಪ್ರತಿ ಯುನಿಟ್ ಗೆ 1.35 ಪೈಸೆ, ಹೆಸ್ಕಾಂನಲ್ಲಿ ಪ್ರತಿ ಯುನಿಟ್ ಗೆ 1.69 ಪಿಎಸ್, ಹಾಗೆ ಜೆಸ್ಕಾಂ ನಲ್ಲಿ ಪ್ರತಿ ಯುನಿಟ್ ಗೆ 70 ಪೈಸೆ ಹೆಚ್ಚಿಸಲಾಗಿದೆ.