Electricity Bill: ಮನೆಯಲ್ಲಿ ವಿದ್ಯುತ್ ಬಳಸುವ ಜನರಿಗೆ ಬೇಸರದ ಸುದ್ದಿ, ವಿದ್ಯುತ್ ದರದಲ್ಲಿ ಮತ್ತೆ ಏರಿಕೆ.

ಉಚಿತ ಕರೆಂಟ್ ನಿರೀಕ್ಷೆಯ ನಡುವೆ ಬೇಸರದ ಸುದ್ದಿ, ರಾಜ್ಯದಲ್ಲಿ ವಿದ್ಯುತ್ ದರ ಮತ್ತೆ ಏರಿಕೆ.

Electricity Bill Price Hike: ಜನರು ಹೊಸ ಸರ್ಕಾರದ ನಿರೀಕ್ಷೆಯಲ್ಲಿ ಇದ್ದಾರೆ. ರಾಜ್ಯದಲ್ಲಿ ಪ್ರತಿ ತಿಂಗಳು ಹೊಸ ಹೊಸ ನಿಯಮಗಳು ಜಾರಿಗೆ ಬರುತ್ತದೆ.

ಇದೀಗ ರಾಜ್ಯದ ಜನತೆ ಮತದಾನ ಮಾಡಿ ಹೊಸ ಸರ್ಕಾರದ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ರಾಜ್ಯದ ಜನತೆಗೆ ವಿದ್ಯುತ್ ದರ (Electricity Bill) ಏರಿಕೆ ಆಗಿರುವುದು ಶಾಕ್ ನೀಡಿದೆ. ಇದೀಗ ವಿದ್ಯುತ್ ದರದಲ್ಲಿ ಏರಿಕೆ ಕಾಣುತ್ತಿರುವುದು ಜನಸಾಮಾನ್ಯರಿಗೆ ಹೊರೆ ಆಗಲಿದೆ ಎನ್ನಬಹುದು.

Electricity rates have increased again in Karnataka, which has led to people's frustration.
Image Credit: paytm

ರಾಜ್ಯದ ಜನರಿಗೆ ಹೊಸ ಸುದ್ದಿ
ಮತದಾನ ಮಾಡಿ ಹೊಸ ಸರ್ಕಾರದ ನಿರೀಕ್ಷೆಯಲ್ಲಿರುವ ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್ ನೀಡಿದೆ. ಪ್ರತಿ ಯುನಿಟ್ ಗೆ 70 ಪೈಸೆ ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಒಪ್ಪಿಗೆ ನೀಡಿದೆ.

ವಿದ್ಯುತ್ ದರದಲ್ಲಿ ಏರಿಕೆ
ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಪ್ರತಿ ಯುನಿಟ್ ಗೆ 1.46 ರೂಪಾಯಿ ಹೆಚ್ಚಳ ಮಾಡುವಂತೆ ಎಸ್ಕಾಮ್ ಗಳು ಬೇಡಿಕೆ ಇಟ್ಟಿದ್ದವು. ಆದರೆ ವಿದ್ಯುತ್ ನಿಯಂತ್ರಣ ಆಯೋಗ 70 ಪೈಸೆ ಹೆಚ್ಚಿಸಲು ಒಪ್ಪಿಗೆ ನೀಡಿದೆ. ಹೊಸ ದರ ಜಾರಿಗೆ ಹಿನ್ನಲೆಯಲ್ಲಿ ಗ್ರಾಹಕರ ಪ್ರತಿ ತಿಂಗಳ ಬಿಲ್ ನಲ್ಲಿ 8.31 ರಷ್ಟು ಹೆಚ್ಚಳವಾಗಲಿದೆ.

Electricity rates have again increased in the state and this has led to people's frustration.
Image Credit: freepik

ಕಲ್ಲಿದ್ದಲು ಮತ್ತು ಸಾಗಾಣಿಕಾ ವೆಚ್ಚ ಹೆಚ್ಚಳವಾಗುವುದರಿಂದ ವಿದ್ಯುತ್ ಖರೀದಿ ಮಾಡಲು ವ್ಯಯಿಸುವ ಹಣದ ಪ್ರಮಾಣ ಶೇಕಡಾ 13 ರಷ್ಟು ಹೆಚ್ಚಾಗಿದೆ ಎಂದು ಆಯೋಗ ತಿಳಿಸಿದೆ. ನೌಕರರ ವೇತನ ಮತ್ತು ವಿವಿಧ ಭತ್ಯೆಗಳನ್ನು ಶೇಕಡಾ 20 ರಷ್ಟು ಹೆಚ್ಚಿಸಿರುವುದು ಕೂಡ ಆರ್ಥಿಕ ಹೊರೆ ಹೆಚ್ಚಳಕ್ಕೆ ಕಾರಣವಾಗಿತ್ತು.

Join Nadunudi News WhatsApp Group

Join Nadunudi News WhatsApp Group