Electricity Scam: ಮೊಬೈಲ್ ಮೂಲಕ ಕರೆಂಟ್ ಬಿಲ್ ಕಟ್ಟುವವರಿಗೆ ಕೇಂದ್ರದ ಎಚ್ಚರಿಕೆ, ಈ ತಪ್ಪು ಮಾಡಿದರೆ ಖಾತೆ ಖಾಲಿ.
ಮೊಬೈಲ್ ಮೂಲಕ ಕರೆಂಟ್ ಬಿಲ್ ಕಟ್ಟುವವರಿಗೆ ಕೇಂದ್ರದ ಎಚ್ಚರಿಕೆ.
Electricity Spam Call Alert: ಸದ್ಯ ತಂತ್ರಜ್ಞಾನ ಬೆಳೆಯುತ್ತಿದ್ದಂತೆ Hackers ಗಳು ಕೂಡ ಹೆಚ್ಚುತ್ತಲೇ ಇದ್ದಾರೆ. ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಸಕಷ್ಟು ವಂಚನೆಯ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ವಂಚನೆಯನ್ನು ತಡೆಯಲು ಸಾಕಷ್ಟು ಕ್ರಮ ಕೈಗೊಂಡಿದೆ. ಆದರೆ ಸರ್ಕಾರದ ಯಾವುದೇ ಕ್ರಮಕ್ಕೂ ವಂಚಕರು ಹೆಚ್ಚುತ್ತಿದ್ದಾರೆ.
ಮೋಸ ಹೋಗುವವರು ಇರುವವರೆಗೂ ಮೋಸಮಾಡಲು ಕೆಲವರು ಕಾಯುತ್ತಲೇ ಇರುತ್ತಾದೆ. ಈ ಡಿಜಿಟಲ್ ದುನಿಯಾದಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರು ಅದು ಕಡಿಮೆಯೇ. Online ಮೂಲಕ ವಂಚನೆ ಹೆಚ್ಚುತ್ತಿದ್ದ ಕಾರಣ ಜನರಿಗೆ ಆನ್ಲೈನ್ ವಂಚನೆಯನ್ನು ತಪ್ಪಿಸಲು ಹೆಚ್ಚಿನ ಜಾಗ್ರತಿಯನ್ನು ಮೂಡಿಸಲಾಗಿತ್ತು.
Online ನಲ್ಲಿ ಯಾವುದೇ ನಕಲಿ ಸಂದೇಶ ಅಥವಾ ಯಾವುದೇ Link ಗಳ ಕಡೆ ಗಮನ ಕೊಡಬೇಡಿ ಎಂದು ಕೇಂದ್ರ ಸರ್ಕಾರ ಪದೇ ಪದೇ ಎಚ್ಚರಿಸಿತ್ತು. ಸದ್ಯ ಜನರು ಅನವಶ್ಯಕ ಲಿಂಕ್ ಗಳನ್ನೂ ಓಪನ್ ಮಾಡುವುದನ್ನು ಕಡಿಮೆ ಮಾಡಿದ್ದಾರೆ ಎನ್ನಬಹುದು.
ಹೊಸ ವಿಧಾನದಲ್ಲಿ ಹೆಚ್ಚುತ್ತಿದೆ ವಂಚನೆ
Link ಗಳಿಂದ ವಂಚನೆ ಮಾಡಲು ಆಗದೆ ಇದ್ದ ಕಾರಣ ವಂಚಕರು ಮತ್ತೊಂದು ಹೆಜ್ಜೆ ಮುಂದೆ ಇಟ್ಟು Pink WhatsApp Update ಹೆಸರಿನಲ್ಲಿ ವಂಚನೆ ಪ್ರಾರಂಭಿಸಿದರು. ಇನ್ನು Sim Card ವಿಚಾರವಾಗಿ, ಅಕೌಂಟ್ ಗೆ ಆಧಾರ್ ಲಿಂಕ್ ಮಾಡಿಸುವುದಾಗಿ ಹೀಗೆ ನಾನಾ ರೀತಿಯಲ್ಲಿ ಸಂದೇಶಗಳನ್ನು ಕಳುಹಿಸುವ ಮೂಲಕ ವಂಚನೆ ನಡೆದಿದ್ದವು. ಸದ್ಯ ದೇಶದಲ್ಲಿ ಹೊಸ ರೀತಿಯ ವಂಚನೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ವಿದ್ಯುತ್ ಬಿಲ್ ಪಾವತಿಯ ಹೆಸರಿನಲ್ಲಿ ನಡೆದಿದೆ ಮಹಾಮೋಸ
ಸಾಮಾನ್ಯವಾಗಿ ವಿದ್ಯುತ್ ಬಿಲ್ ಪಾವತಿಸದಿದ್ದರೆ ವಿದ್ಯುತ್ ಇಲಾಖೆ ನಿಮಗೆ ಸೂಚನೆ ನೀಡುವುದು ಸಾಮಾನ್ಯ. ಆದರೆ ಇದೀಗ ವಂಚಕರು ಈ ವಿದ್ಯುತ್ ಬಿಲ್ ಪಾವತಿಯ ಹೆಸರಿನಲ್ಲಿ ವಂಚನೆ ಮಾಡಲು ಆರಂಭಿಸಿದ್ದಾರೆ. ಪಶ್ಚಿಮ ಬಂಗಾಳದ ಓರ್ವ ಮಹಿಳೆಯೊಬ್ಬರ ಈ ಹೊಸ ರೀತಿಯ ವಂಚನೆಯಲ್ಲಿ ಬರೋಬ್ಬರಿ 1.37 ಲಕ್ಷ ಹಣ ಕಳೆದುಕೊಂಡಿದ್ದಾರೆ.
ಇಂತಹ ಕರೆ ಸ್ವೀಕರಿಸಿದರೆ ಖಾಲಿ ಆಗಲಿದೆ ನಿಮ್ಮ ಖಾತೆ
ನಿಮ್ಮ ಮನೆಯ ವಿದ್ಯುತ್ ಬಿಲ್ ಬಾಕಿ ಇದೆ. ಸದ್ಯದಲ್ಲೇ ಮನೆಯ ವಿದ್ಯುತ್ ಕಡಿತಗೊಳಿಸಲಾಗುತ್ತದೆ. ಹೀಗಾಗಿ ಆನ್ಲೈನ್ ನ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿ ನೀಡಿದರೆ ನಾವೇ ವಿದ್ಯುತ್ ಬಿಲ್ ಪಾವತಿಸುತ್ತೇವೆ ಎಂದು ಹೇಳಿ ವಂಚನೆ ಎಸೆಗಿದ್ದಾರೆ.
ಮಹಿಳೆಯು ತಮ್ಮ ಡೆಬಿಟ್ ಕಾರ್ಡ್ ನ ಸಂಪೂರ್ಣ ಮಾಹಿತಿ ನೀಡಿದ ಕಾರಣ ಹೆಚ್ಚಿನ ಮೊತ್ತವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ನೀವು ಎಚ್ಚರದಿಂದ ಇರುವುದು ಅಗತ್ಯ. ವಿದ್ಯುತ್ ಬಿಲ್ ಪಾವತಿಯ ಹೆಸರಿನಲ್ಲಿ ಯಾರೇ ಆಗಲಿ ನಿಮ್ಮಗೆ ಕರೆ ಮಾಡಿದರೆ ಅದನ್ನು ನೀವು ನಿರ್ಲಕ್ಷಿಸುವುದು ಉತ್ತಮ. ಇಲ್ಲವಾದರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ.