Elon Musk: ವಾಟ್ಸಾಪ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಮಸ್ಕ್, ವಾಟ್ಸಾಪ್ ಅನ್ನು ನಂಬಬೇಡಿ.

ವಾಟ್ಸಾಪ್ ಗ್ರಾಹಕರಿಗೆ ಮೋಸ ಮಾಡುತ್ತಿದೆ ಮತ್ತು ವಾಟ್ಸಾಪ್ ಅನ್ನು ನಂಬಬೇಡಿ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

Elon Musk About WhatsApp: ಮೆಟಾ ಮಾಲೀಕತ್ವದ ವಾಟ್ಸಾಪ್ (WhatsApp) ಇತ್ತೀಚಿಗೆ ಹೊಸ ಹೊಸ ಫೀಚರ್ ಗಳನ್ನೂ ಬಿಡುಗಡೆಗೊಳಿಸುತ್ತಿದೆ. ಅತ್ಯಾಕರ್ಷಕ ಫೀಚರ್ ಗಳೊಂದಿಗೆ ವಾಟ್ಸಾಪ್ ತನ್ನ ಬಳಕೆದಾರರನ್ನು ಸೆಳೆಯುತ್ತಿದೆ.

ಇದೀಗ ಟ್ವಿಟರ್ (Twitter) ನಲ್ಲಿ ಹೊಸ ಹೊಸ ಫೀಚರ್ ಗಳನ್ನೂ ಬಿಡುಗಡೆಗೊಳಿಸುತ್ತಿರುವ ಸಿಇಒ ಎಲಾನ್  ಮಸ್ಕ್ (CEO Elon Musk) ಇದೀಗ ಮೆಸೆಗಿಂಗ್ ಪ್ಲಾಟ್ ಫಾರ್ಮ್ ಆಗಿರುವ ವಾಟ್ಸಪ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

ವಾಟ್ಸಪ್ ವಿರುದ್ದ ಆರೋಪ ಮಾಡಿದ ಎಲಾನ್ ಮಸ್ಕ್
ದೇಶದಲ್ಲಿಯೇ ವಾಟ್ಸಾಪ್ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಹತ್ತು ಹಲವು ಫೀಚರ್ ಗಳನ್ನೂ ವಾಟ್ಸಪ್ ಪರಿಚಯಿಸಿದೆ. ಆದರೆ ಇದೀಗ ಸಿಇಒ ಎಲೊನ್ ಮಸ್ಕ್ ವಾಟ್ಸಾಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವಾಟ್ಸಪ್ ಅನ್ನು ನಂಬೇಡಿ ಎಂದು ಮಸ್ಕ್ ಎಚ್ಚರಿಕೆಯನ್ನು ನೀಡಿದ್ದಾರೆ.

Elon Musk About WhatsApp
Image Source: India Today

ವಾಟ್ಸಾಪ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಎಲಾನ್ ಮಸ್ಕ್
ಇದೀಗ ಟ್ವಿಟರ್ ಇಂಜಿನಿಯರ್ ಫೊಡ್ ಡಬೀರ್ ತನ್ನ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಸಕ್ರಿಯವಾಗಿ ಬಳಕೆ ಮಾಡೇ ಇದ್ದಾಗಲೂ ತಾವು ಮಲಗಿದ್ದ ಸಮಯದಲ್ಲಿ ನಿರಂತರವಾಗಿ ಮೈಕ್ರೊಫೋನ್ ಬ್ಯಾಕ್ ಗ್ರೌಂಡ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ ಎನ್ನುವ ಆಘಾತಕಾರಿ ವಿಷಯವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

Join Nadunudi News WhatsApp Group

ಇದಕ್ಕೆ ಸಂಬಂಧಪಟ್ಟ ಸ್ಕ್ರೀನ್ ಶಾರ್ಟ್ ಅನ್ನು ಕೂಡ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್ ಗೆ ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದು, ಯಾವುದನ್ನೂ ನಂಬಬೇಡಿ ಎಂದು ಪರೋಕ್ಷವಾಗಿ ವಾಟ್ಸಪ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಬಳಕೆದಾರರು ತಮ್ಮ ಮೈಕ್ ಸೆಟ್ಟಿಂಗ್ ಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದಾರೆ ಎಂದು ವಾಟ್ಸಾಪ್ ಮಸ್ಕ್ ಅವರ ಆರೋಪವನ್ನು ತಳ್ಳಿ ಹಾಕಿದೆ. ಈ ಆರೋಪದ ತನಿಖೆಗೆ ಗೂಗಲ್ ಅನ್ನು ಕೇಳಿಕೊಂಡಿದ್ದೇವೆ ಎಂದು ವಾಟ್ಸಾಪ್ ತಿಳಿಸಿದೆ.

Elon Musk About WhatsApp
Image Source: Times Of India

Join Nadunudi News WhatsApp Group