Twitter Company New CEO: ಟ್ವಿಟ್ಟರ್ ಗೆ ಹೊಸ ಸಿಇಒ ನೇಮಕ, ತನ್ನ ನಾಯಿಯನ್ನು ಸಿಇಒ ಮಾಡಿದ ಎಲಾನ್ ಮಸ್ಕ್.

Elon Musk made the dog the CEO of  Twitter: ಇದೀಗ ಟ್ವಿಟ್ಟರ್ ಗೆ ಹೊಸ ಸಿಇಓ ಬಂದಿದ್ದಾರೆ. ಉದ್ಯಮಿ ಎಲಾನ್ ಮಸ್ಕ್ (Elon Musk) ಟ್ವಿಟ್ಟರ್ ಖರೀದಿಸಿದ ಬಳಿಕ ಹಲವು ನೀತಿಗಳಲ್ಲಿ ಬದಲಾವಣೆ ತಂದಿದ್ದಾರೆ.

ಮಸ್ಕ್ ಮಾಲೀಕ ಟ್ವಿಟ್ಟರ್ ಖರೀದಿಸಿದ ಬಳಿಕ ಸಿಇಒ ಪರಾಗ್ ಅಗರ್ವಾಲ್ ಅವರನ್ನು ವಜಾ ಮಾಡಿದರು. ಬಳಿಕ ಮಸ್ಕ್ ಸಿಇಒ ಜವಾಬ್ದಾರಿ ವಹಿಸಿಕೊಂಡಿದ್ದರು.

Twitter Appoints New CEO, Elon Musk Makes His Dog CEO
Image Credit: instagram

ಟ್ವಿಟ್ಟರ್ ಖಾತೆಗೆ ಹೊಸ ಸಿಇಒ
ಹಲವು ಬಾರಿ ಮಸ್ಕ್ ಟ್ವಿಟ್ಟರ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಹಲವು ಬಾರಿ ಮಸ್ಕ್ ಟ್ವಿಟ್ಟರ್ ಜವಾಬ್ದಾರಿಯನ್ನು ಸೂಕ್ತರಿಗೆ ನೀಡುವುದಾಗಿ ಹೇಳಿಕೊಂಡಿದ್ದರು. ಇಂದು ಏಕಾಏಕಿ ಟ್ವಿಟ್ಟರ್ ಸಿಇಒ ನೇಮಕ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಎಲ್ಲರೂ ತೀವ್ರ ಕುತೂಹಲದಿಂದ ಯಾರು ನೂತನ ಸಿಇಒ ಎಂದು ಕಣ್ಣಾಡಿಸಿದ್ದಾರೆ. ನಾಯಿ ಫೋಟೋಹಾಕಿ ಪೋಸ್ಟ್ ಮಾಡಿದ ಇವರು ಟ್ವಿಟ್ಟರ್ ನೂತನ ಸಿಇಒ ಎಂದು ಮಸ್ಕ್ ಹೇಳಿದ್ದಾರೆ.

Elon Musk made the dog the CEO of the Twitter company
Image Credit: instagram

ಸಿಇಒ ಜಾಗದಲ್ಲಿ ನಾಯಿ ಫೋಟೋ
ಸ್ವಂತ ನಾಯಿ ಫೋಟೋವನ್ನು ಟ್ವೀಟ್ ಮಾಡಿ ಹೊಸ ಟ್ವಿಟ್ಟರ್ ಸಿಇಒ ಕುರಿತು ಭಾರಿ ಪ್ರಚಾರ ನೀಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಹಳೆ ಟ್ವಿಟ್ಟರ್ ಸಿಇಒ ಗೆ ತಿರುಗೇಟು ನೀಡಿದ್ದಾರೆ. ಆ ವ್ಯಕ್ತಿಗಿಂತ ಇವರು ಉತ್ತಮ ಎಂದು ಟ್ವೀಟ್ ಮಾಡಿದ್ದಾರೆ.

Join Nadunudi News WhatsApp Group

ಈ ಮೂಲಕ ಹಳೆ ಸಿಇಒ ಗೆ ಟಾಂಗ್ ನೀಡಿದ್ದಾರೆ. ಇಷ್ಟಕ್ಕೆ ಮಸ್ಕ್ ಸುಮ್ಮನಾಗಲಿಲ್ಲ. ಹೊಸ ತಿಟ್ಟರ್ ಸಿಇಒ ಅಮೇಜಿಂಗ್ ಆಗಿದ್ದಾರೆ. ಇವರು ನಂಬರ್ಸ್ ನಲ್ಲಿ ಚಾಣಕ್ಯ ಎಂದಿದ್ದಾರೆ.

 

View this post on Instagram

 

A post shared by elonmusk (@elonmusk)

ಸಿಇಒ ಜಾಗದಲ್ಲಿ ಸ್ವಂತ ನಾಯಿ ಫೋಟೋ ಹಾಕಿದ ಮಸ್ಕ್
ಎಲಾನ್ ಮಸ್ಕ್ ಹೊಸ ಸಿಇಒ ಆಗಿ ನಾಯಿ ಫೋಟೋ ಹಾಕಿದ್ದಾರೆ. ಮಸ್ಕ್ ಯಾವುದೇ ನಾಯಿ ಫೋಟೋ ಹಾಕಿಲ್ಲ. ಇದು ಎಲಾನ್ ಮಸ್ಕ್ ಅವರ ಮುದ್ದಿನ ನಾಯಿ ಸಾಕು ನಾಯಿ ಶೀಬಾ ಇನು.

Elon Musk appointed his own dog as the CEO of his Twitter company
Image Credit: geo

ಕುರ್ಚಿ ಮೇಲೆ ಕುಳಿತಿರುವ ನಾಯಿ ಫೋಟೋ ಹಂಚಿಕೊಂಡು ತಾನು ವಜಾ ಮಾಡಿದ ಈ ಹಿಂದಿನ ಸಿಇಓ ಹಾಗೂ ಇತರ ಉನ್ನತ ಅಧಿಕಾರಿಗಳ ವಿರುದ್ದವೇ ಸಮರ ಸಾರಿದ್ದಾರೆ. ಎಲಾನ್ ಮಸ್ಕ್ ನೂತನ ಸಿಇಒ ಪೋಸ್ಟ್ ಬೆನ್ನಲ್ಲೇ ನೆಟ್ಟಿಗರು ಏನಾಗಿದೆ ತಲೆಕೆಟ್ಟಿದೆಯಾ ಎಂದು ಪ್ರಶ್ನಿಸಿದ್ದಾರೆ.

Join Nadunudi News WhatsApp Group