Elytra EV: 127 KM ಮೈಲೇಜ್ ಕೊಡುವ ಈ ಸ್ಕೂಟರ್ ಖರೀದಿಸಲು ಶೋ ರೂಮ್ ಮುಂದೆ ಜನರ ಕ್ಯೂ, ಸಿಕ್ಕಾಪಟ್ಟೆ ಡಿಮ್ಯಾಂಡ್.
ಭಾರತೀಯ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಡಲಿದೆ 127 KM ಮೈಲೇಜ್ ಕೊಡುವ ಎಲೆಟ್ರಾ ಇ- ಸ್ಕೂಟರ್.
Elytra Electric Scooter: ಇತ್ತೀಚಿಗೆ Electric ವಾಹನಗಳು ಮಾರುಕಟ್ಟೆಯಲ್ಲಿ ಪೆಟೋಲ್, ಡೀಸೆಲ್ ಚಾಲಿತ ವಾಹನಗಳ ಬೇಡಿಕೆಯನ್ನು ಕಡಿಮೆ ಮಾಡುತ್ತಿದೆ ಎನ್ನಬಹುದು. ಪೆಟ್ರೋಲ್, ಡೀಸೆಲ್ ಬೆಲೆಯ ಏರಿಕೆಯ ಕಾರಣ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚು ಮನಸ್ಸು ಮಾಡುತ್ತಿದ್ದಾರೆ.
ದೇಶದ ಪ್ರತಿಷ್ಠಿತ ಕಂಪನಿಗಳು ಸೇರಿದಂತೆ ವಿವಿಧ ಸ್ಟಾರ್ಟ್ ಅಪ್ (Smart Ap) ಕಂಪನಿಗಳು ಕೂಡ ನೂತನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಅನ್ನು ಪರಿಚಯಿಸುತ್ತಿದೆ. ಇದೀಗ ಮಾರುಕಟ್ಟೆಯಲ್ಲಿ Lambretta ಕಂಪನಿ ಅಗ್ಗದ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಕೂಟರ್ ಅನ್ನು ಪರಿಚಯಿಸಿದೆ. ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ನ ಫೀಚರ್ ಕೇಳಿದರೆ ಸ್ಕೂಟರ್ ಖರೀದಿಗೆ ಮನಸ್ಸು ಮಾಡುವುದಂತೂ ಖಂಡಿತ.
Elytra Electric Scooter
Lambretta ವಿಶ್ವದ ಅತಿದೊಡ್ಡ ಆಟೋ ಕಂಪನಿಗಳಲ್ಲಿ ಒಂದಾಗಿದ್ದು, ELCMA2-023 ನಲ್ಲಿ ತನ್ನ ಹೊಸ Elytra ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಇದು ಬ್ರ್ಯಾಂಡ್‌ನ EV ಮಾದರಿಯಾಗಿದೆ. ಲ್ಯಾಬ್ರೆಟಾ ಎಲೆಟ್ರಾ ಇ- ಸ್ಕೂಟರ್ ಹಿಂದಿನ ಸ್ಕೂಟರ್ ಗಿಂತ ಹೆಚ್ಚು ಗಮನಾರ್ಹವಾಗಿ. ಲ್ಯಾಂಬ್ರೆಟ್ಟಾ ಎಲೆಟ್ರಾ ಇ-ಸ್ಕೂಟರ್ ಹೆಚ್ಚಿನ ಫೀಚರ್ ನೊಂದಿಗೆ ಪರಿಚಯಿಸಲಾಗಿದೆ. ಭಾರತೀಯ ಮಾರುಕಟ್ಟೆಗೆ ಶೀಘ್ರದಲ್ಲೇ Elytra Electric ಸ್ಕೂಟರ್ ಬಿಡುಗಡೆಯಾಗಲಿದೆ.
ಎಲೆಕ್ಟ್ರಿಕ್ ಸ್ಕೂಟರ್ ನ ವಿಶೇಷತೆ
ಸ್ಕೂಟರ್ DRL ಜೊತೆಗೆ ಷಡ್ಭುಜೀಯ LED ಹೆಡ್ ಲ್ಯಾಂಪ್ ಗಳನ್ನು ಒದಗಿಸಲಾಗಿದ್ದು, ಫ್ಲಾಟ್ ಫ್ಲೋರ್ಬೋರ್ಡ್ ಸಾಕಷ್ಟು ಲೆಗ್ ರೂಮ್ ಭರವಸೆ ನೀಡುತ್ತದೆ. ಫ್ಲೋಟಿಂಗ್ ಸಿಂಗಲ್ ಸೀಟ್ ಕೂಡ ರೆಟ್ರೊ ಆಗಿ ಕಾಣುತ್ತದೆ, ಇದು ಕನ್ಸಲ್ಟ್ ನ ಸ್ಟೈಲಿಂಗ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೆಯೆ ಚಾರ್ಜಿಂಗ್ ಸಾಕೆಟ್ ಪ್ಯಾನಲ್ ನ ಬದಿಯಲ್ಲಿ ಸ್ಲೈಡರ್ ನೊಂದಿಗೆ ಕಾಣಬಹುದಾಗಿದೆ. ಹ್ಯಾಂಡಲ್ ಬಾರ್ ನಲ್ಲಿ ಪಾಪ್ ಔಟ್ ಬ್ರೇಕ್ ಲಿವರ್ ಆಯ್ಕೆಯನ್ನು ಹೊಂದಿರುವುದು ಈ ಸ್ಕೂಟರ್ ನ ವಿಶೇಷವಾಗಿದೆ.
127 KM ಮೈಲೇಜ್ ಕೊಡುವ ಈ ಸ್ಕೂಟರ್ ಗೆ ಹೆಚ್ಚಿದ ಬೇಡಿಕೆ
ಎಲಿಟ್ರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನ್ನು 12- ಇಂಚಿನ ವಾಹನದಲ್ಲಿ ಟ್ರಯಲ್ ಲಿಂಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಲಿಂಕ್ಡ್ ಮೊನೊಶಾಕ್ ನೊಂದಿಗೆ ನೀಡಲಾಗುತ್ತದೆ. Elytra Electric scooter ನ ಗರಿಷ್ಠ ವೇಗ ಗಂಟೆಗೆ 110 ಕಿ.ಮೀ. ಆಗಿದೆ. ಇನ್ನು Elytra Electric ಸ್ಕೂಟರ್ ನಲ್ಲಿ 4.6kWh ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದ್ದು, ಈ ಬ್ಯಾಟರಿ ಒಂದೇ ಚಾರ್ಜ್ ನಲ್ಲಿ 127km ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.