Emergency Alert: ಎಲ್ಲಾ ಮೊಬೈಲ್ ಗಳಿಗೆ ಭಾರತ ಸರ್ಕಾರದಿಂದ ತುರ್ತು ಸಂದೇಶ, ನಿಮ್ಮ ಮೊಬೈಲ್ ಗೂ ಬಂದಿದೆ ಚೆಕ್ ಮಾಡಿ.
ಭಾರತ ಸರ್ಕಾರ ದೇಶದ ಜನರಿಗೆ ತುರ್ತು ಎಚ್ಚರಿಕೆ ಎನ್ನವ ಸಂದೇಶವನ್ನು ಕಳುಹಿಸುತ್ತಿದೆ.
Emergency Alert Message: ದೇಶದಲ್ಲಿ ತಂತ್ರಜ್ಞಾನ ಹೆಚ್ಚು ಬೆಳವಣಿಗೆ ಕಾಣುತ್ತಿದ್ದು ಅದೇ ರೀತಿ Cyber Crime ಕೂಡಾ ಹೆಚ್ಚುತ್ತಿದೆ. ಕೇಂದ್ರ ಸರ್ಕಾರ ದೇಶದಲ್ಲಿ ಹೆಚ್ಚುತ್ತಿರುವ ಈ ಸೈಬರ್ ವಂಚನೆಯನ್ನು ತಡೆಯಲು ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದೆ.
Cyber Crime ಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಜನರಿಗೆ ಆಗಾಗಲೇ ಸಾಕಷ್ಟು ಎಚ್ಚರಿಕೆ ನೀಡುತ್ತಿದೆ. ವಂಚನೆಯಿಂದ ಜನರು ಎಚ್ಚೆತ್ತುಕೊಳ್ಳಬೇಕಿದೆ. ಇದೀಗ ವಂಚನೆಯನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ. ದೇಶದ ಜನತೆಗೆ ಎಚ್ಚರಿಕೆಯ ಸಂದೇಶವನ್ನು ಕಳುಹಿಸಲು ಸರ್ಕಾರ ಮುಂದಾಗಿದೆ.
ಎಲ್ಲಾ ಮೊಬೈಲ್ ಗಳಿಗೆ ಭಾರತ ಸರ್ಕಾರದಿಂದ ತುರ್ತು ಸಂದೇಶ
ಭಾರತ ಸರ್ಕಾರ ದೇಶದ ಜನರಿಗೆ ತುರ್ತು ಎಚ್ಚರಿಕೆ ಎನ್ನವ ಸಂದೇಶವನ್ನು ಕಳುಹಿಸುತ್ತಿದೆ. ಈಗಾಗಲೇ ದೇಶದ ಸಾಕಷ್ಟು ಜನರ ಮೊಬೈಲ್ ಗೆ ಈ ಸಂದೇಶ ತಲುಪಿದೆ. ದೊಡ್ಡ ಶಬ್ದದೊಂದಿಗೆ ಭಾರತ ಸರ್ಕಾರ ಈ ಸಂದೇಶ ಜನರನ್ನು ಎಚ್ಚರಿಸಲಿದೆ. ಈ ಮೂಲಕ ದೇಶದಲ್ಲಿ ಹೆಚ್ಚುತ್ತಿರುವ ವಂಚನೆಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.
ಈಗಾಗಲೇ ನಿಮ್ಮ ಫೋನ್ ಗೆ ಈ ಸಂದೇಶ ಬಂದಿದ್ದರೆ ಭಯ ಪಡುವ ಅಗತ್ಯ ಇಲ್ಲ. ಈ ಸಂದೇಶ ನಿಮ್ಮನ್ನು ಮೋಸಗೊಳಿಸುವ ಉದ್ದೇಶ ಹೊಂದಿಲ್ಲ, ಬದಲಾಗಿ ನಿಮನ್ನು ಮೋಸದಿಂದ ಪಾರು ಮಾಡುವ ಗುರಿಯನ್ನು ಹೊಂದಿದೆ.
ಈ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ ಫೋನ್ ಬಳಕೆ ಹೆಚ್ಚುತ್ತಿರುವ ಹಿನ್ನಲೆ ಕೇಂದ್ರ ಸರ್ಕಾರ ಸ್ಮಾರ್ಟ್ ಫೋನ್ ಗಳಿಗೆ ಸಂದೇಶ ನೀಡುವ ಕಳುಹಿಸುವ ಮೂಲಕ ಜನರಲ್ಲಿ ಜಾಗ್ರತಿ ಮೂಡಿಸಲಿದೆ. ಇದೀಗ ಭಾರತ ಸರ್ಕಾರ ಕಳುಹಿಸುವ ಸಂದೇಶ ಯಾವ ಸಂದೇಶದೊಂದಿಗೆ ಜನರಿಗೆ ತಲುಪುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ಭಾರತ ಸರ್ಕಾರದ Emergency Alert Message
ಭಾರತ ಸರ್ಕಾರದ ತುರ್ತು ಎಚ್ಚರಿಕೆ ಈ ರೀತಿಯ ಸಂದೇಶವನ್ನು ಒಳಗೊಂಡಿದೆ. “ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಿರುವ ಮಾದರಿ ಪರೀಕ್ಷಾ ಸಂದೇಶವಾಗಿದೆ. ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ಏಕೆಂದರೆ ಇದಕ್ಕೆ ನಿಮ್ಮ ಕಡೆಯಿಂದ ಯಾವುದೇ ಪ್ರತಿಕ್ರಿಯೆಯ ಅಗತ್ಯವಿಲ್ಲ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅನುಷ್ಠಾನಗೊಳಿಸುತ್ತಿರುವ ಅಖಿಲ ಭಾರತ ವಿಪತ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರಿಶೀಲಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ. ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವುದು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ” ಎನ್ನುವ ಸಂದೇಶ ಎಲ್ಲರಿಗು ತಲುಪಲಿದೆ.