EMotorad Electric Bicycle: ಸಿಂಗಲ್ ಚಾರ್ಜ್ ನಲ್ಲಿ 50 Km ಮೈಲೇಜ್, ಈ ಅಗ್ಗದ ಸೈಕಲ್ ಖರೀದಿಗೆ ಮುಗಿಬಿದ್ದ ಜನರು

ಸಿಂಗಲ್ ಚಾರ್ಜ್ ನಲ್ಲಿ 50km ಮೈಲೇಜ್ ನೀಡಲಿದೆ ಈ ಎಲೆಕ್ಟ್ರಿಕ್ ಬೈಸಿಕಲ್

EMotorad T-Rex Air Electric Bicycle: ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಪಾರುಪತ್ಯ ಸಾಧಿಸಿವೆ ಎನ್ನಬಹುದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುತ್ತಿದ್ದಾರೆ.

ಸದ್ಯ ಎಲೆಕ್ಟ್ರಿಕ್ ಕಾರ್, ಬೈಕ್, ಸ್ಕೂಟರ್ ಗಳಂತೆ Electric Bicycle ಕೂಡ ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಸದ್ಯ ಇ-ಸೈಕಲ್ ವಿಭಾಗದಲ್ಲಿ ಮುಂಚೂಣಿಯಲ್ಲಿರುವ EMotorad ತನ್ನ ಜನಪ್ರಿಯ T-Rex Air ಮಾದರಿಯಾದ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಪರಿಚಯಿಸಿದೆ. ಈ ನೂತನ ವೈಸಿಕಲ್ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಿದ್ದು, ಹೆಚ್ಚಿನ ಮೈಲೇಜ್ ಅನ್ನು ಕೂಡ ನೀಡುತ್ತದೆ. ಈ ಎಲೆಕ್ಟ್ರಿಕ್ ಬೈಸಿಕಲ್ ನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

EMotorad T-Rex Air Electric Bicycle
Image Credit: Original Source

ಅತ್ಯಾಕರ್ಷಕ ಬಣ್ಣದಲ್ಲಿ ಲಾಂಚ್ ಆಯ್ತು T-Rex Air ಬೈಸಿಕಲ್
ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ T-Rex Air ಬೈಸಿಕಲ್ ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿದೆ. ಆರೆಂಜ್ ಮತ್ತು ಗ್ರೀನ್‌ ನಲ್ಲಿ ಹೊಸ T-ರೆಕ್ಸ್ ಏರ್ ಈಗ Amazon, Flipkart, ಡೀಲರ್‌ ಶಿಪ್‌ ಗಳು ಮತ್ತು ಅಧಿಕೃತ EMotorad ವೆಬ್‌ ಸೈಟ್‌ ನಲ್ಲಿ ಲಭ್ಯವಿದೆ. ಮಹೇಂದ್ರ ಸಿಂಗ್ ಧೋನಿ ಒಳಗೊಂಡ ವೈರಲ್ ‘ಬೋಲೆ ಜೋ ಕೋಯಲ್’ ಜಾಹೀರಾತಿನಿಂದ “ಧೋನಿಯ ಸೈಕಲ್” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇ-ಸೈಕಲ್ ಹೆಮ್ಮೆಯ ‘ಮೇಕ್ ಇನ್ ಇಂಡಿಯಾ’ ಉತ್ಪನ್ನವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

EMotorad T-Rex Air Electric Bicycle Price
Image Credit: Financialexpress

ಸಿಂಗಲ್ ಚಾರ್ಜ್ ನಲ್ಲಿ 50km ಮೈಲೇಜ್
ಹೊಸ ಟಿ-ರೆಕ್ಸ್ ಏರ್ ಅನ್ನು ಉನ್ನತ ಸ್ಥಿರತೆ ಮತ್ತು ವಿವಿಧ ಭೂಪ್ರದೇಶಗಳ ಮೇಲೆ ನಿಯಂತ್ರಣಕ್ಕಾಗಿ ವಿನ್ಯಾಸಗೊಳಿಸಲಾದ ವರ್ಧಿತ 27.5-ಇಂಚಿನ ಟೈರ್‌ ಗಳನ್ನು ಅಳವಡಿಸಲಾಗಿದೆ. ಇ-ಸೈಕಲ್ 10.2 AH ತೆಗೆಯಬಹುದಾದ ಬ್ಯಾಟರಿಯನ್ನು ಹೊಂದಿದೆ. ಹಾಗೆಯೆ 5 ಹಂತದ ಪೆಡಲ್ ಸಹಾಯವನ್ನು ನೀಡುತ್ತದೆ. ನೀವು ಈ ಹೊಸ T-Rex Air ಬೈಸಿಕಲ್ ಅನ್ನು ಕಡಿಮೆ ಸಮಯದಲ್ಲಿ ಚಾರ್ಜ್ ಮಾಡಿಕೊಳ್ಳಬಹುದು.

ಕೇವಲ 2 ರಿಂದ 3 ಗಂಟೆಯಲಿ ಈ T-Rex Air ಬೈಸಿಕಲ್ ಸಂಪೂರ್ಣ ಚಾರ್ಜ್ ಆಗಲಿದೆ. ಹಾಗೆಯೆ ಫಾಸ್ಟ್ ಚಾರ್ಜರ್ ನ ಮೂಲಕ ಇನ್ನು ವೇಗವಾಗಿ ಛ್ರ್ಗೆ ಮಾಡಿಕೊಳ್ಳಬಹುದು. ಇದು ಒಂದು ಬಾರಿ ಚಾರ್ಜ್ ಮಾಡಿದರೆ 25 ಕಿಮೀ ವೇಗದಲ್ಲಿ ಮತ್ತು 50 ಕಿಮೀ ಮೈಲೇಜ್ ಅನ್ನು ನೀಡುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ T-Rex Air ಬೈಸಿಕಲ್ 34999 ರೂ. ಗಳಲ್ಲಿ ಲಭ್ಯವಿದೆ.

Join Nadunudi News WhatsApp Group

EMotorad T-Rex Air Electric Bicycle Mileage
Image Credit: Superbiamk

Join Nadunudi News WhatsApp Group