Salary Hike: ಸರ್ಕಾರೀ ನೌಕರರಿಗೆ ಇನ್ನೊಂದು ಗುಡ್ ನ್ಯೂಸ್, ಖಾತೆಗೆ ಬರಲಿದೆ 22788 ರೂ ಅಧಿಕ ಹಣ.

Employees Salary Hike 2024: ಸರ್ಕಾರೀ ನೌಕರರಿಗೆ ಮಾರ್ಚ್ ತಿಂಗಳಿನಲ್ಲಿ 7 ನೇ ವೇತನದ ವಿಷಯವಾಗಿ ಬಿಗ್ ಅಪ್ಡೇಟ್ ಹೊರಬೀಳಲಿದೆ. ಮಾರ್ಚ್‌ ನಲ್ಲಿ ಸರ್ಕಾರವು ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು (4% DA Hike) ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ. ಸರ್ಕಾರ ಈ ನಿರ್ಧಾರ ಕೈಗೊಂಡರೆ ಕೇಂದ್ರ ನೌಕರರು ಪಡೆಯುವ ತುಟ್ಟಿಭತ್ಯೆ ಶೇ.50ಕ್ಕೆ ಏರಿಕೆಯಾಗಲಿದ್ದು, ಅವರ ವೇತನದಲ್ಲಿ ಹೆಚ್ಚಾಗಳಲಿದೆ.

ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೋದಿ ಸರ್ಕಾರವು ನೌಕರರ ವೇತನ ಹೆಚ್ಚಳದ ಬಗ್ಗೆ ಮಹತವಾದ ನಿರ್ಧಾರ ಕೈಗೊಂಡಿದೆ. ಈ ಬಾರಿ ನೌಕರರ ವೇತನ ಹೆಚ್ಚವಾಗುವುದಂತೂ ಖಂಡಿತ. ನೌಕರರ ವೇತನವನ್ನು ಸರ್ಕಾರ ಈ ಬಾರಿ ಎಷ್ಟು ಹೆಚ್ಚಿಸಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Employees Salary Hike 2024
Image Credit: mpbreakingnews

ಸರ್ಕಾರೀ ನೌಕರರಿಗೆ ಇನ್ನೊಂದು ಗುಡ್ ನ್ಯೂಸ್
ಕಳೆದ ವರ್ಷ 2023 ರ ಅಕ್ಟೋಬರ್‌ ನಲ್ಲಿ, ಕೇಂದ್ರ ಸರ್ಕಾರವು ಕೇಂದ್ರ ನೌಕರರಿಗೆ ಅವರ ಡಿಎಯನ್ನು 4 ಪ್ರತಿಶತದಷ್ಟು ಹೆಹೆಚ್ಚಿಸಿದೆ. ಈ ಮೂಲಕ ನೌಕರರ ತುಟ್ಟಿ ಭತ್ಯೆಯು 42 ಪ್ರತಿಶತದಿಂದ 46 ಪ್ರತಿಶತಕ್ಕೆ ಏರಿಕೆ ಮಾಡಲಾಗಿತ್ತು. ಈಗ ಈ ಬಾರಿಯೂ ಹಣದುಬ್ಬರ ದರದ ಪ್ರಕಾರ ಸರ್ಕಾರ ಮತ್ತೆ ಶೇ.4 ರಷ್ಟು ಡಿಎ ಹೆಚ್ಚಿಸಬಹುದು ಎಂದು ಅಂದಾಜಿಸಲಾಗುತ್ತಿದೆ.

ಅಖಿಲ ಭಾರತ CPI-IW ಡೇಟಾದ ಆಧಾರದ ಮೇಲೆ DA-DR ಅನ್ನು ಹೆಚ್ಚಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತದೆ. ವರದಿಗಳ ಪ್ರಕಾರ, ಕೈಗಾರಿಕಾ ಕಾರ್ಮಿಕರ CPI-IW ನ 12 ತಿಂಗಳ ಸರಾಸರಿ 392.83 ಮತ್ತು ಅದರ ಪ್ರಕಾರ, DA ಮೂಲ ವೇತನದ 50.26 ಪ್ರತಿಶತಕ್ಕೆ ಬರುತ್ತಿದೆ. ಈ ಬಾರಿಯೂ ಡಿಎ 4% ಹೆಚ್ಚಾಗಬಹುದು ಮತ್ತು ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರ ತೆರಿಗೆ 50% ಆಗಿರುತ್ತದೆ.

Govt Employees Salary Hike
Image Credit: India

ಖಾತೆಗೆ ಬರಲಿದೆ 22788 ರೂ. ಅಧಿಕ ಹಣ
7 ನೇ ವೇತನ ಆಯೋಗದ ಪ್ರಕಾರ, ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಹಂತ 1 ರಿಂದ ಹಂತ 18 ರವರೆಗೆ ವಿವಿಧ ಶ್ರೇಣಿಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಗ್ರೇಡ್ ಪೇ ಮತ್ತು ಪ್ರಯಾಣ ಭತ್ಯೆಯ ಆಧಾರದ ಮೇಲೆ ತುಟ್ಟಿ ಭತ್ಯೆಯನ್ನು ಲೆಕ್ಕಹಾಕಲಾಗುತ್ತದೆ. ಶ್ರೇಣಿ 1 ರಲ್ಲಿ, ಕನಿಷ್ಠ ವೇತನವು ರೂ 18,000 ರಿಂದ ಪ್ರಾರಂಭವಾಗುತ್ತದೆ ಮತ್ತು ಗರಿಷ್ಠ ವೇತನವು ರೂ 56,900 ಆಗಿದೆ.

Join Nadunudi News WhatsApp Group

ಅದೇ ರೀತಿ 2ನೇ ಹಂತದಿಂದ 14ನೇ ಹಂತದವರೆಗಿನ ದರ್ಜೆಯ ವೇತನಕ್ಕೆ ಅನುಗುಣವಾಗಿ ವೇತನ ಬದಲಾಗುತ್ತದೆ. ಆದರೆ, ಹಂತ-15, 17, 18ರಲ್ಲಿ ಯಾವುದೇ ದರ್ಜೆಯ ವೇತನ ಇರುವುದಿಲ್ಲ. ಇಲ್ಲಿ ವೇತನವನ್ನು ನಿಗದಿಪಡಿಸಲಾಗಿದೆ. ಹಂತ-15 ರಲ್ಲಿ, ಕನಿಷ್ಠ ಮೂಲ ವೇತನ 182,200 ರೂ ಆಗಿದ್ದರೆ ಗರಿಷ್ಠ ವೇತನ 2,24,100 ರೂ. ಆಗಿದೆ. ಹಂತ-17 ರಲ್ಲಿ ಮೂಲ ವೇತನ ರೂ. 2,25,000 ನಿಗದಿಪಡಿಸಲಾಗಿದೆ. ಈ ಸಂದರ್ಭದಲ್ಲಿ, ಹಂತ-18 ರಲ್ಲೂ ಮೂಲ ವೇತನ 2,50,000 ರೂ. ಕ್ಯಾಬಿನೆಟ್ ಕಾರ್ಯದರ್ಶಿಯ ವೇತನವು ಹಂತ 18 ರಲ್ಲಿ ಬರುತ್ತದೆ.

Join Nadunudi News WhatsApp Group