LIC: 2000 ರೂ ಹೂಡಿಕೆ ಮಾಡಿದರೆ ಸಿಗಲಿದೆ 43 ಲಕ್ಷ ರೂ ಲಾಭ, LIC ಈ ಯೋಜನೆಗೆ ಅರ್ಜಿ ಸಲ್ಲಿಸಲು ಜನಸಂದಣಿ.
43 ಲಕ್ಷ ರೂ ಲಾಭ ಸಿಗುವ ಈ LIC ಯೋಜನೆಗೆ ಜನರು ಫಿದಾ.
Endowment Insurance Policy: Life Insurance Corporation Of India ಜನರಿಗೆ ವ್ಯಾಪಕವಾದ ಜೀವ ವಿಮಾ ಯೋಜನೆಗಳನ್ನು ಪರಿಚಯಿಸಿದೆ. ಜನರು ತಮ್ಮ ಇಚ್ಛೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಹೂಡಿಕೆಯನ್ನು ಮಾಡಿಕೊಳ್ಳಬಹುದು.
LIC ಅಲ್ಲಿ ಧೀರ್ಘಾವಧಿಯವರೆಗೆ ಹೂಡಿಕೆ ಮಾಡಬಹುದು ಮತ್ತು ಅವರ ಜೀವನದ ಮೇಲೆ ಆರ್ಥಿಕ ರಕ್ಷಣೆಯನ್ನು ಪಡೆಯಬಹುದು. ಭಾರತೀಯ ಜೀವ ವಿಮಾ ನಿಗಮದಲ್ಲಿ ಕಡಿಮೆ ಹಣದಲ್ಲಿ ಹೂಡಿಕೆ ಪ್ರಾರಂಭಿಸಿ ಉತ್ತಮ ಆದಾಯವನ್ನು ಪಡೆಯಬಹುದು. ಇದೀಗ ನಾವು LIC ಒಂದು ಪ್ರಮುಖ ಯೋಜನೆ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
LIC ಹೊಸ ದತ್ತಿ ಯೋಜನೆ
ಇದೀಗ ನಾವು LIC ಹೊಸ ದತ್ತಿ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ. ಈ ಯೋಜನೆಯಲ್ಲಿ ಜನರು 35 ವರ್ಷಗಳ ವರೆಗೆ LIC ಅನ್ನು ತೆರೆಯಬಹುದಾಗಿದೆ. LIC ಹೊಸ ದತ್ತಿ ಯೋಜನೆಯಲ್ಲಿ ಹೂಡಿಕೆ ಮಾಡುವ ವ್ಯಕ್ತಿಯ ಕನಿಷ್ಠ ವಯಸ್ಸು 8 ವರ್ಷಗಳು ಹಾಗೆ ಗರಿಷ್ಠ ವಯಸ್ಸು 55 ಆಗಿದೆ. ಆದರೆ ಈ ಯೋಜನೆಯ ಕನಿಷ್ಠ ವಿಮಾ ಮೊತ್ತ 1 ಲಕ್ಷ ರೂಪಾಯಿಯಾಗಿರಬೇಕು.
ಮಾಸಿಕವಾಗಿ 2 ಸಾವಿರ ಪಾವತಿಸಿ ಪಡೆಯಿರಿ 43 ಲಕ್ಷಕ್ಕೂ ಅಧಿಕ ಲಾಭ
LIC ವಿಮಾ ಯೋಜನೆಯಲ್ಲಿ ಹೂಡಿಕೆ ಮಾಡಲು ವ್ಯಕ್ತಿಯ ವಯಸ್ಸು ಹಾಗೂ ಪಾಲಿಸಿಯ ಅವಧಿಯು ಬಹಳ ಮುಖ್ಯವಾಗಿರುತ್ತದೆ.
ಇದೀಗ ಒಬ್ಬ ವ್ಯಕ್ತಿಯು 25 ನೇ ವಯಸ್ಸಿನಲ್ಲಿ ಹೂಡಿಕೆ ಪ್ರಾರಂಭಿಸಿ, 35 ವರ್ಷಗಳ ವರೆಗೆ ಪಾಲಿಸಿ ಅವಧಿಯನ್ನು ಹೊಂದಿದರೆ ಹಾಗೆ 9 ಲಕ್ಷದ ವಿಮಾ ಮೊತ್ತವನ್ನು ಆರಿಸಿದರೆ ಆತನ ಮೊದಲ ವರ್ಷದ ಮಾಸಿಕ ಪ್ರೀಮಿಯಂ 2,046 ರೂಪಾಯಿ ಆಗಿರುತ್ತದೆ.
ಮುಂದಿನ ವರ್ಷ 2,002 ರೂಪಾಯಿ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ. ಈ ಪಾಲಿಸಿಯಲ್ಲಿ ಒಬ್ಬ ವ್ಯಕ್ತಿ 35 ವರ್ಷಗಳವರೆಗೆ ಒಟ್ಟು 8,23,052 ರೂಪಾಯಿ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ. ಇದರ ಮುಕ್ತಾಯದ ನಂತರ ಆ ವ್ಯಕ್ತಿ 43,87,500 ರೂಪಾಯಿ ಆದಾಯವನ್ನು ಪಡೆಯಬಹುದಾಗಿದೆ.