Lakshadweep Entry Rule: ಲಕ್ಷದ್ವೀಪಕ್ಕೆ ಭೇಟಿ ನೀಡುವವರಿಗೆ ಹೊಸ ರೂಲ್ಸ್, ಈ ಲೈಸನ್ಸ್ ಇದ್ದರೆ ಮಾತ್ರ ದ್ವೀಪಕ್ಕೆ ಪ್ರವೇಶ.

ಲಕ್ಷದ್ವೀಪಕ್ಕೆ ಭೇಟಿ ನೀಡುವವರಿಗೆ ಈ ಲೈಸನ್ಸ್ ಕಡ್ಡಾಯವಾಗಿದೆ

Entry Permit For Lakshadweep: ಸದ್ಯ ಎಲ್ಲೆಡೆ Lakshadweep ಬಾರಿ ಟ್ರೆಂಡ್ ನಲ್ಲಿದೆ. ದೇಶದ ಪ್ರಧಾನಿ ಮೋದಿ ಅವರು೮ ಭೇಟಿ ನೀಡದ ಮೇಲೆ ಈ Lakshadweep Beach ಜನರ ನಿದ್ದೆ ಕೆಡಿಸುತ್ತಿದೆ. ಸಾಕಷ್ಟು ಜನರು ಈ ಲಕ್ಷದ್ವೀಪ್ ಪ್ರವಾಸನ್ನು ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಆದರೆ ಲಕ್ಷದ್ವೀಪ್ ಪ್ರವಾಸ ಮಾಡುವುದು ಅಷ್ಟು ಸುಲಭದ ಮಾತಲ್ಲ. ಹೌದು ಲಕ್ಷದ್ವೀಪಕ್ಕೆ ಭೇಟಿ ನೀಡುವ ಜನರಿಗೆ ಸರ್ಕಾರ ಹೊಸ ನಿಯಮವನ್ನ ಜಾರಿಗೆ ತಂದಿದ್ದು ಈ ನಿಯಮವನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದೆ.

Entry Permit For Lakshadweep
Image Credit: Holidify

ಲಕ್ಷದ್ವೀಪಕ್ಕೆ ಭೇಟಿ ನೀಡುವವರಿಗೆ ಹೊಸ ರೂಲ್ಸ್
ಲಕ್ಷದ್ವೀಪಕ್ಕೆ ಭೇಟಿ ನೀಡುವವರು ಅಲ್ಲಿನ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ನಿಮ್ಮ ಬಳಿ ಈ ಲೈಸನ್ಸ್ ಇದ್ದರೆ ಮಾತ್ರ ದ್ವೀಪಕ್ಕೆ ಪ್ರವೇಶ ಮಾಡಲು ಸಾಧ್ಯವಾಗುತ್ತದೆ. ಲಕ್ಷದ್ವೀಪದಲ್ಲಿನ ಸುಂದರ ಸ್ಥಳಗಳನ್ನು ಕಣ್ತುಂಬಿಕೊಳ್ಳಲು ನೀವು ಮುಖ್ಯವಾಗಿ ಕೆಲವು ಪ್ರಮುಖ ದಾಖಲೆಗಳನ್ನು ಹೊಂದಬೇಕಾಗುತ್ತದೆ. ಲಕ್ಷದ್ವೀಪಕ್ಕೆ ಭೇಟಿ ನೀಡಲು ನೀವು ಪ್ರವೇಶ ಪರವಾನಗಿಯನ್ನು (Entry Permit) ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಆನ್ಲೈನ್ ನಲ್ಲಿ ನೀವು ಲಕ್ಷದ್ವೀಪಕ್ಕೆ ಪ್ರವೇಶ ಪರವಾನಗಿಯನ್ನು ಪಡೆದುಕೊಳ್ಳಬಹುದು.

ಪ್ರವೇಶ ಪರವಾನಗಿಯನ್ನು ಯಾರು ಪಡೆಯುವುದು ಕಡ್ಡಾಯ..?
ಲಕ್ಷದ್ವೀಪ ನಿವಾಸಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಹೊರತುಪಡಿಸಿ ಎಲ್ಲರಿಗೂ ಪ್ರವೇಶ ಪರವಾನಗಿ ಅಗತ್ಯವಿದೆ. ಅದು ಭಾರತೀಯ ಪ್ರಜೆಯಾಗಿರಲಿ ಅಥವಾ ವಿದೇಶಿಯಾಗಿರಲಿ ಪ್ರವೇಶ ಪರವಾನಗಿ ಕಡ್ಡಾಯ. ಮಾಹಿತಿಯ ಪ್ರಕಾರ, ಲಕ್ಷದ್ವೀಪ ಮೂಲದವರಲ್ಲದ ಪ್ರತಿಯೊಬ್ಬ ವ್ಯಕ್ತಿಯು ಈ ದ್ವೀಪಗಳಿಗೆ ಪ್ರವೇಶಿಸುವ ಮತ್ತು ತಂಗುವ ಮೊದಲು ಪರವಾನಗಿಯನ್ನು ಪಡೆಯಬೇಕು.

Lakshadweep Entry Rule
Image Credit: Freepressjournal

ಈ ದಾಖಲೆ ಇದ್ದರೆ ಮಾತ್ರ ಪ್ರವೇಶ ಪರವಾನಗಿ ಪಡೆಯಲು ಸಾಧ್ಯ
•ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಇತ್ಯಾದಿ.

•ಪ್ರಯಾಣ ಪುರಾವೆಯಾಗಿ ವಿಮಾನ ಟಿಕೆಟ್ ಅಥವಾ ಬೋಟ್ ಬುಕಿಂಗ್ ಟಿಕೆಟ್

Join Nadunudi News WhatsApp Group

•ಹೋಟೆಲ್ ಬುಕಿಂಗ್ ದೃಢೀಕರಣ

•ಪಾಸ್ಪೋರ್ಟ್ ಗಾತ್ರದ ಫೋಟೋ

•ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ

ಪ್ರವೇಶ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ..?
•ನೀವು ePermit ಪೋರ್ಟಲ್ https://epermit.utl.gov.in/pages/signup ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

•ಈ ವೆಬ್‌ ಸೈಟ್‌ ನಲ್ಲಿ ನೀವು ಆನ್‌ ಲೈನ್ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.

•ಈ ಫಾರ್ಮ್‌ನಲ್ಲಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ನೀವು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

•ಇದರ ನಂತರ ನೀವು ಪರವಾನಗಿ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ, ಇದು ನಿಮ್ಮ ಗಮ್ಯಸ್ಥಾನಕ್ಕೆ ಅನುಗುಣವಾಗಿ ಬದಲಾಗಬಹುದು.

•ಒಮ್ಮೆ ಈ ಪ್ರಕ್ರಿಯೆಯು ಪೂರ್ಣಗೊಂಡರೆ, ನಿಮ್ಮ ಪ್ರಯಾಣದ ಪ್ರಾರಂಭದ 15 ದಿನಗಳ ಮೊದಲು ನಿಮಗೆ ಇಮೇಲ್ ಮೂಲಕ ಅನುಮತಿಯನ್ನು ಕಳುಹಿಸಲಾಗುತ್ತದೆ.

Join Nadunudi News WhatsApp Group