ESCOM Online Service: ಮನೆಯಲ್ಲಿ ಕರೆಂಟ್ ಬಳಸುವವರಿಗೆ ಬಿಗ್ ಅಪ್ಡೇಟ್, ಮುಂದಿನ 10 ದಿನ ಈ ಸೇವೆ ಲಭ್ಯವಿಲ್ಲ.

ರಾಜ್ಯದಲ್ಲಿ ಮುಂದಿನ 10 ದಿನಗಳ ಕಾಲ ಈ ಸೇವೆ ಲಭ್ಯವಿಲ್ಲ, ವಿದ್ಯುತ್ ಇಲಾಖೆ ಘೋಷಣೆ

ESCOM Online Service Update: ಪ್ರಸ್ತುತ ರಾಜ್ಯದಲ್ಲಿ ಉಚಿತ ವಿದ್ಯುತ್ ನೀಡಲಾಗುತ್ತಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಅರ್ಹರು 200 ಯೂನಿಟ್ ವರೆಗೆ ಸರಾಸರಿ ಬಳಕೆಯ ಆಧಾರದ ಮೇಲೆ ಉಚಿತ ವಿದ್ಯುತ್ ಅನ್ನು ಪಡೆಯುತ್ತಿದ್ದಾರೆ. ಆದರೆ ಅರ್ಹರಿಗೆ ಇಷ್ಟು ಯುನಿಟ್ ಮಾತ್ರ ಉಚಿತವಾಗಿರುತ್ತದೆ. ಹೆಚ್ಚುವರಿ ಯುನಿಟ್ ಬಳಕೆಗೆ ವಿದ್ಯುತ್ ಬಿಲ್ ಅನ್ನು ಪಾವತಿಸಬೇಕಾಗುತ್ತದೆ. ಇನ್ನು ವಿದ್ಯುತ್ ಬಿಲ್ ಪಾವತಿಯು ವಿದ್ಯುತ್ ಬಿಲ್ ಪಾವತಿ ಕೇಂದ್ರಗಳಲ್ಲಿ ಅಥವಾ Online ಮೂಲಕ ಪಾವತಿ ಮಾಡಿಕೊಳ್ಳಲಾಗುತ್ತದೆ.

ESCOM Online Service Update
Image Credit: Vistaranews

ಮನೆಯಲ್ಲಿ ಕರೆಂಟ್ ಬಳಸುವವರಿಗೆ ಬಿಗ್ ಅಪ್ಡೇಟ್
ಸಮಯಕ್ಕೆ ಸರಿಯಾಗಿ ವಿದ್ಯುತ್ ಬಿಲ್ ಪಾವತಿ ಮಾಡದಿದ್ದರೆ ವಿದ್ಯುತ್ ಇಲಾಖೆಯು ಅಂತಹ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತದೆ. ಆದರೆ ಇದೀಗ ಇಲಾಖೆಯಿಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಮಾರ್ಚ್ 20 ರವರೆಗೆ ವಿದ್ಯುತ್ ಬಿಲ್ ಪಾವತಿ ಬಾಕಿ ಇದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದಿಲ್ಲ ಎಂದು ವಿದ್ಯುತ್ ಇಲಾಖೆ ಮಾಹಿತಿ ನೀಡಿದೆ. ವಿದ್ಯುತ್ ಇಲಾಖೆ ಈ ನಿರ್ಧಾರವನ್ನು ಕೈಗೊಳ್ಳಲು ಕಾರಣವೇನು..? ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

ಮುಂದಿನ 10 ದಿನ ಈ ಸೇವೆ ಲಭ್ಯವಿಲ್ಲ
ಇಂಧನ ಇಲಾಖೆಯ ವೆಬ್ ಸೈಟ್ ನ ಸಾಫ್ಟ್ ವೇರ್ ಅಪ್ ಡೇಟ್ ನಿಂದಾಗಿ ಮಾರ್ಚ್ 10 ರಿಂದ 19 ರ ವರೆಗೆ 10 ದಿನಗಳ ಕಾಲ ಆನ್ ಲೈನ್ ಸೇವೆಯಲ್ಲಿ ತೊಂದರೆ ಉಂಟಾಗಲಿದೆ. ಈ ಕಾರಣದಿಂದಾಗಿ ಬಿಲ್ಲಿಂಗ್ ಮತ್ತಿತರ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಈ ಕುರಿತು ಇಂಧನ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಹತ್ತು ದಿನಗಳ ಕಾಲ ರಾಜ್ಯದ ಎಲ್ಲ ಎಸ್ಕಾಂಗಳ ಆನ್‌ ಲೈನ್ ಸೇವೆ ಲಭ್ಯವಿರುವುದಿಲ್ಲ.

ESCOM Online Service
Image Credit: News 18

ಮಾರ್ಚ್ 10 ರಿಂದ 19 ರವರೆಗೆ ಹತ್ತು ದಿನಗಳ ಕಾಲ ಲಭ್ಯವಿರುವುದಿಲ್ಲ ಎಂದು ಮಾಹಿತಿ ನೀಡಿದೆ. ಮಾರ್ಚ್ 20ರ ನಂತರ ಈ ಆನ್ ಲೈನ್ ಸೇವೆ ಲಭ್ಯವಾಗಲಿದ್ದು, ವಿದ್ಯುತ್ ಪಾವತಿಸದಿದ್ದರೂ ಗ್ರಾಹಕರು ಸಂಪರ್ಕ ಕಡಿತಗೊಳಿಸುವುದಿಲ್ಲ ಎಂದು ಎಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಇನ್ನು ಮಾರ್ಚ್ 10 ರಿಂದ 19 ರ ವರೆಗೆ ಯಾರು ಕೂಡ ವಿದ್ಯುತ್ ಬಿಲ್ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದು ಸ್ಪಷ್ಟ ಮಾಹಿತಿಯಾಗಿದೆ.

Join Nadunudi News WhatsApp Group

Join Nadunudi News WhatsApp Group