Rishabh Shetty couple with Fahadh Faasil: ಕಾಂತಾರ (Kantara) ಸಿನಿಮಾದ ಮೂಲಕ ಇನ್ನಷ್ಟು ಫೇಮಸ್ ಆದ ರಿಷಬ್ ಶೆಟ್ಟಿ ಅವರು ಇದೀಗ ಪುಷ್ಪ ಸಿನಿಮಾದಲ್ಲಿ ನಟಿಸಿರರುವ ಫಹಾದ್ ಫಾಸಿಲ್ ಅವರನ್ನು ಭೇಟಿಯಾಗಿದ್ದಾರೆ. ರಿಷಬ್ ಶೆಟ್ಟಿ (Rishab Shetty) ಅವರ ಜೊತೆ ಅವರ ಪತ್ನಿ ಕೂಡ ಫಹಾದ್ ಫಾಸಿಲ್ ಅವರನ್ನು ಭೇಟಿಯಾಗಿದ್ದಾರೆ.
ರಿಷಬ್ ಶೆಟ್ಟಿ ಹಾಗು ಅವರ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಫಹಾದ್ ಫಾಸಿಲ್ (Fahadh Faasi) ಅವರನ್ನು ಭೇಟಿಯಾಗಿದ್ದ ಫೋಟೋ ಒಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಫಹಾದ್ ಫಾಸಿಲ್ ಅವರನ್ನ ಭೇಟಿಮಾಡಿದ ರಿಷಬ್ ಶೆಟ್ಟಿ ದಂಪತಿ
ಫಹಾದ್ ಫಾಸಿಲ್ ಅವರ ಜೊತೆ ರಿಷಬ್ ಶೆಟ್ಟಿ ಹಾಗು ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಸೆಲ್ಫಿಗೆ (Selfie) ಪೋಸ್ ಕೊಟ್ಟಿದು, ಫೋಟೋ ಬಹಳ ಮುದ್ದಾಗಿ ಮೂಡಿಬಂದು, ವೀಕ್ಷಕರಿಂದ ಬಹಳಷ್ಟು ಮೆಚ್ಚುಗೆಗೊಳಗಾಗಿದೆ. ಈ ಫೋಟೋ ಇದೀಗ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ರಿಷಬ್ ಶೆಟ್ಟಿ ಹಾಗು ಪ್ರಣತಿ ಶೆಟ್ಟಿ ಅವರು ಬ್ಲಾಕ್ ಡ್ರೆಸ್ ಅಲ್ಲಿ ಮಿಂಚಿದ್ದಾರೆ. ಪ್ರಗತಿ ಶೆಟ್ಟಿ ಅವರು ಬ್ಲಾಕ್ ಗೌನ್ ಹಾಗು ರಿಷಬ್ ಶೆಟ್ಟಿ ಅವರು ಬ್ಲಾಕ್ ಶರ್ಟ್ ಹಾಕಿದ್ದರಿಂದ ಎಲ್ಲರ ಗಮನಸೆಳೆದಿದ್ದಾರೆ.
ಪ್ರಗತಿ ಶೆಟ್ಟಿ ಅವರು ತಮ್ಮ ಪೋಸ್ಟ್ ನಲ್ಲಿ ಫಹಾದ್ ಫಾಸಿಲ್ ಅವರ ಬಗ್ಗೆ ಹೇಳಿದ್ದಾರೆ. ಫಹಾದ್ ಫಾಸಿಲ್ ಅವರು ಉತ್ತಮ ವ್ಯಕ್ತಿ ಹಾಗು ಒಳ್ಳೆಯ ನಟ ಎಂದು ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ತಮ್ಮ ಪೋಸ್ಟ್ ನಲ್ಲಿ ಫಹಾದ್ ಫಾಸಿಲ್ ಅವರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮಲಯಾಳಂ (Malayalam), ತೆಲಗು (Telagu), ತಮಿಳು (Tamil) ಚಿತ್ರದಲ್ಲಿ ನಟಿಸುದರ ಮೂಲಕ ಫಹಾದ್ ಫಾಸಿಲ್ ಅವರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಕ್ರಂ ಹಾಗು ಪುಷ್ಪ ಸಿನಿಮಾದಲ್ಲಿಅವರು ಮಾಡಿದ ಅವರ ನಟನೆಯನ್ನು ಕಂಡು ಸಿನಿಪ್ರಿಯರು ಇನ್ನಷ್ಟು ಇಷ್ಟಪಟ್ಟಿದ್ದಾರೆ.
ನಟಿ ಸಪ್ತಮಿ ಗೌಡ ಅವರು ಕೂಡ ಫಹಾದ್ ಫಾಸಿಲ್ ಅವರನ್ನು ಭೇಟಿಯಾಗಿದ್ದರು. ಅವರು ಕೂಡ ಫಹಾದ್ ಫಾಸಿಲ್ ಅವರ ಜೊತೆಗೆ ತೆಗೆದ ಫೋಟೋ ಒಂದನ್ನು ಪೋಸ್ಟ್ ಮಾಡಿ ಫಹಾದ್ ಫಾಸಿಲ್ ಅವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಬರೆದುಕೊಂಡಿದ್ದಾರೆ.
ಬ್ರೇಕ್ ತೆಗೆದುಕೊಂಡು ಸಿನಿಮಾಗೆ ಮರಳಿದಾಗ ಪ್ರೀತಿ ಮಾತ್ರ ಬದಲಾಯ್ತು, ಎಲ್ಲದಕ್ಕೂ ಪ್ರೀತಿ ಮಾತ್ರ ಎಂದ ನಟನ ಮಾತುಗಳನ್ನು ಸಪ್ತಮಿ ಗೌಡ ಅವರು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು.
ಇದೀಗ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ ಫಹಾದ್ ಫಾಸಿಲ್ ಅವರನ್ನು ಭೇಟಿಯಾಗಿದ್ದ ಫೋಟೋ ಒಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ ಮತ್ತು ಬಾರಿ ಮೆಚ್ಚುಗೆಗೆ ಕಾರಣವಾಗಿದೆ.