Fraud App: ಟ್ರೈನ್ ಟಿಕೆಟ್ ಬುಕ್ ಮಾಡುವವರಿಗೆ ಎಚ್ಚರಿಕೆ ನೀಡಿದ IRCTC, ಬ್ಯಾಂಕ್ ಖಾತೆ ಖಾಲಿಯಾಗಲಿದೆ.

ಟ್ರೈನ್ ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ಎಚ್ಚರ ತಪ್ಪಿದರೆ ನಿಮ್ಮ ಖಾತೆ ಹ್ಯಾಕ್ ಆಗಲಿದೆ ಎಂದು ಭಾರತೀಯ ರೈಲ್ವೆ ಎಚ್ಚರಿಕೆಯನ್ನ ನೀಡಿದೆ.

Fake irctc Application: ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಆನ್ ಲೈನ್ ಅಪ್ಲಿಕೇಶನ್ ಗಳಿಗೆ ಸೀಮಿತವಾಗಿದ್ದಾರೆ. ಜನರು ಹೆಚ್ಚಾಗಿ ತಮ್ಮ ಕೆಲಸಗಳನ್ನು ಪೂರೈಸಿಕೊಳ್ಳಲು ಆನ್ ಲೈನ್ ಆನ್ ಅಪ್ಲಿಕೇಶನ್ ಆನ್ ಬಳಸುತ್ತಾರೆ.

ಜನರಿಗೆ ಅಪ್ಲಿಕೇಶನ್ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಯಾವುದಾದರೂ ಕೆಲವನ್ನು ಆನ್ ಲೈನ್ ಮೂಲಕವೇ ಮಾಡಿಕೊಳ್ಳಬಹುದು ಎಂಬ ನಿಟ್ಟಿನಲ್ಲಿ ಅವರು ಅದು ಸರಿಯೋ ತಪ್ಪು ಎಂದು ತಿಳಿದುಕೊಳ್ಳದೆ ತಪ್ಪು ಅಪ್ಲಿಕೇಶನ್ ಗಳನ್ನೂ ಬಳಸುತ್ತಾರೆ. ಇದರಿಂದ ಜನರಿಗೆ ಅಧಿಕ ನಷ್ಟವಾಗಲಿದೆ. ಅವರು ಕೇಳಿದ ಮಾಹಿತಿ ಕೊಟ್ಟಿದ್ದಲ್ಲಿ ಅವರ ಬ್ಯಾಂಕ್ ಅಕೌಂಟ್ ಖಾತೆ ಖಾಲಿಯಾಗಲಿದೆ.

Fake irctc Application
Image Source: Digit

IRCTC ಯಿಂದ ಸಾರ್ವಜನಿಕರಿಗೆ ಎಚ್ಚರದ ಮಾಹಿತಿ
ಇದೀಗ ಜನರಿಗೆ ಸಹಾಯ ಆಗುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ನಿಗಮ ಒಂದು ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡದಂತೆ ಸಲಹೆ ನೀಡಿದೆ. ಜನರು ಕೆಲವೊಮ್ಮೆ ಸರಿ ಅಥವಾ ತಪ್ಪು ಅಪ್ಲಿಕೇಶನ್ ಗಳ ಜ್ಞಾನದ ಕೊರತೆಯಿಂದ ವಂಚನೆಗೆ ಒಳಗಾಗುತ್ತಾರೆ. irctcconnect.apk ಈ ಅಪ್ಲಿಕೇಶನ್ ಅನ್ನು ಜನರು ಬಳಸಬಾರದು ಎಂದು IRCTC ವಿನಂತಿಸಿದೆ.

Fake irctc Application
Image Source: Deccan Heraland

ಫೇಕ್ ಅಪ್ಲಿಕೇಶನ್ ಡೌನ್ ಲೋಡ್ ಮಾಡುವುದರಿಂದ ಆಗುವ ಪರಿಣಾಮಗಳು
ಈ APK ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡುವುದರಿಂದ ನಿಮಗೆ ಅತಿ ದೊಡ್ಡ ಹಾನಿಯಾಗುತ್ತದೆ ಎಂದು IRCTC ಎಚ್ಚರ ನೀಡಿದೆ. ಇದು ನಿಮ್ಮ ಫೋನ್ ಅಲ್ಲಿ ವೈರಸ್ ದಾಳಿಯನ್ನು ಉಂಟುಮಾಡುತ್ತದೆ ಇದರ ಜೊತೆಗೆ ಅದು ನಿಮ್ಮ ಡೇಟಾವನ್ನು ಸಹ ಕದಿಯುತ್ತದೆ.

ಈ ಅಪ್ಲಿಕೇಶನ್ ಹಿಂದಿರುವ ವಂಚಕರು IRCTC ಯಿಂದ ಬಂದವರಂತೆ ನಟಿಸುತ್ತಾರೆ ಮತ್ತು ನಿಮ್ಮ UPI ವಿವರಗಳು ಮತ್ತು ಇತರ ಪ್ರಮುಖ ಬ್ಯಾಂಕಿಂಗ್ ಮಾಹಿತಿಯಂತಹ ವಯಕ್ತಿಕ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ ಎಂದು IRCTC ಹೇಳಿದೆ.

Join Nadunudi News WhatsApp Group

Fake irctc Application
Image Source: India Today

Join Nadunudi News WhatsApp Group