Fake Aadhaar Chcek: ನಿಮ್ಮ ಆಧಾರ್ ಕಾರ್ಡ್ ನಕಲಿಯಾಗಿರಬಹುದು, ಈ ರೀತಿಯಲ್ಲಿ ಬೇಗನೆ ಚೆಕ್ ಮಾಡಿಕೊಳ್ಳಿ

ನಿಮ್ಮ ಆಧಾರ್ ಕಾರ್ಡ್ ನ ಅಸಲೀಯತ್ತನ್ನ ಈ ರೀತಿಯಾಗಿ ಪರಿಶೀಲಿಸಿಕೊಳ್ಳಿ

Fake Or Real Aadhaar Identification Process: ಸದ್ಯ ದೇಶದಲ್ಲಿ Aadhaar card ನ ಪ್ರಾಮುಖ್ಯತೆ ಹೆಚ್ಚಿರುವ ಕಾರಣ ಆಧಾರ್ ನ ಮೂಲಕ ವಂಚನೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಜಾಗರೂಕರಾಗಿರಬೇಕಾಗುತ್ತದೆ. ಒಂದು ಸಣ್ಣ ತಪ್ಪಿನಿಂದಾಗಿ ದೊಡ್ಡ ನಷ್ಟವನ್ನು ಅನುಭವಿಸಬೇಕಾದ ಪರಿಸ್ಥಿತಿ ಕೂಡ ಬಂದೊದಗಬಹುದು. ಹೀಗಾಗಿ ಆಧಾರ್ ಮಾಹಿತಿ ನೀಡುವಲ್ಲಿ ಎಲ್ಲರು ಕೂಡ ಹೆಚ್ಚಿನ ಎಚ್ಚರಿಕೆ ವಹಿಸಬೇಕು.

Aadhaar Identification Process
Image Credit: Jupiter

ಆಧಾರ್ ಕಾರ್ಡ್ ಹೊಂದಿರುವವರು ಎಚ್ಚರ ವಹಿಸಿ
ಕೇಂದ್ರ ಸರ್ಕಾರ ವಂಚನೆಯ ತಡೆಗಾಗಿ ಸಾಕಷ್ಟು ಕ್ರಮ ಕೈಗೊಂಡಿದೆ. ವಿವಿಧ ನಿಯಮಾವಳಿಗಳನ್ನು ಜಾರಿಗೊಳಿಸುವ ಮೂಲಕ ಒಂದಿಷ್ಟು ವಂಚನೆ ಆಗುವುದನ್ನು ಸರ್ಕಾರ ತಪ್ಪಿಸಿದೆ. ಈಗಂತೂ ವಂಚಕರು Aadhaar Biometric ಅನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ನೀವು ಬೇರೆ ಯಾವುದೊ ಕೆಲಸಕ್ಕೆ ಬಳಸಿರುವ ಬಯೋಮೆಟ್ರಿಕ್ ಅನ್ನು ದುರುಪಯೋಗ ಪಡಿಸಿಕೊಂಡು ಅದರಿಂದ ವಂಚನೆ ಮಾಡಲು ಆರಂಭಿಸಿದ್ದಾರೆ. ಹೀಗಾಗಿ ನೀವು ಬಯೋಮೆಟ್ರಿಕ್ ನೀಡುವ ಮುನ್ನ ಕೂಡ ಎಚ್ಚರ ವಹಿಸಬೇಕು.

ಆಧಾರ್ ವಿವರವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
ಹೌದು, ನೀವು ಮೂರನೇ ವ್ಯಕ್ತಿಯ ಜೊತೆ ನಿಮ್ಮ ಆಧಾರ್ ವಿವರವನ್ನು ಹಂಚಿಕೊಳ್ಳುವುದು ಸೂಕ್ತವಲ್ಲ. ಮನೆ ಬಾಡಿಗೆ ಕೊಡುವವರು, ಕೆಲಸಕ್ಕೆ ನೇಮಿಸಿಕೊಳ್ಳುವವರು ಆಧಾರ್ ಕಾರ್ಡ್ ಪರಿಶೀಲಗೆ ಕೇಳಿದರೆ ಅದರ ಹಿಂದೆ ದುರುದ್ದೇಶವೂ ಇರಬಹುದು ಎನ್ನುವುದು ನಿಮ್ಮ ಗಮನದಲ್ಲಿರಲಿ.

Fake Or Real Aadhaar Identification Process
Image Credit: Thelogicalindian

ಇನ್ನು ಕೆಲವರ ಬಳಿ ಅಸಲಿ ಆಧಾರ್ ಕಾರ್ಡ್ ನ ಹೊರತಾಗಿ ನಕಲಿ ಆಧಾರ್ ಕಾರ್ಡ್ ಕೂಡ ಇರುತ್ತದೆ. ನಕಲಿ ಆಧಾರ್ ಕಾರ್ಡ್ ಅನ್ನು ಹೊಂದುವುದು ಕಾನೂನು ಬಾಹಿರ. ಹೀಗಾಗಿ ನೀವು ನಿಮ್ಮ ಆಧಾರ್ ಕಾರ್ಡ್ ನ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗುತ್ತದೆ. ನೀವು ಈ ಸುಲಭ ವಿಧಾನದ ಮೂಲಕ ಆಧಾರ್ ನ ಅಸಲೀಯತ್ತನ್ನು ಪರಿಶೀಲಿಸಿಕೊಳ್ಳಬಹುದು.

ನಿಮ್ಮ ಆಧಾರ್ ಅಸಲಿಯೋ..? ನಕಲಿಯೋ..? ಈ ರೀತಿಯಾಗಿ ತಿಳಿದುಕೊಳ್ಳಿ
ಆಧಾರ್ ಕಾರ್ಡ್ ನಲ್ಲಿ QR Code ಹೊಂದಿರುವುದನ್ನು ಎಲ್ಲರು ಗಮನಿಸಿರಬಹುದು. ಈ QR Code ನಲ್ಲಿ ಹೆಚ್ಚಿನ ಮಾಹಿತಿ ಇರುತ್ತದೆ. ಈ QR Code ಅನ್ನು ಸ್ಕಾನ್ ಮಾಡುವುದರಿಂದ ಜನಸಂಖ್ಯಾ ಮಾಹಿತಿಯನ್ನು ಪರಿಶೀಲಿಸಬಹುದು. ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ನ ಮೂಲಕ Aadhaar QR Code Scanner ಅನ್ನು ಬಳಸಿ ಆಧಾರ್ ಅಸಲೀಯತ್ತನ್ನು ಪರಿಶೀಲಿಸಿಕೊಳ್ಳಬಹುದು. ಅಥವಾ myaadhar.uidai.gov.in ಗೆ ಭೇಟಿ ನೀಡುವ ಮೂಲಕ ಪರಿಶೀಲನೆ ಮಾಡಬಹುದು.

Join Nadunudi News WhatsApp Group

Join Nadunudi News WhatsApp Group