Property Doc: ನಿಜವಾದ ಮತ್ತು ನಕಲಿ ಆಸ್ತಿ ದಾಖಲೆ ಪರಿಶೀಲಿಸುವುದು ಹೇಗೆ, ಈ ಕೆಲಸ ಮಾಡದಿದ್ದರೆ ಮೋಸ ಹೋಗುತ್ತೀರಿ.

ಆಸ್ತಿ ಖರೀದಿಸುವಾಗ ಈ ಎಲ್ಲಾ ವಿಷಯದ ಬಗ್ಗೆ ಗಮನಹರಿಸಿ.

Fake Property Registration Check: ಸಾಮಾನ್ಯವಾಗಿ ಎಲ್ಲರು ಆಸ್ತಿ ಖರೀದಿಸುವ (Property Purchase) ಆಸೆಯನ್ನು ಹೊಂದಿರುತ್ತಾರೆ. ತಮ್ಮ ಬಳಿ ಇರುವ ಹಣವನ್ನು ಉಳಿತಾಯ ಮಾಡುವ ಸಲುವಾಗಿ ಹೆಚ್ಚಿನ ಜನರು ಚಿನ್ನ, ವಾಹನ ಅಥವಾ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತಾರೆ. ಆಸ್ತಿ ಖರೀದಿಯು ಉಳಿತಾಯದ ಹೂಡಿಕೆಯ ಉತ್ತಮ ಮಾರ್ಗವಾಗಿದೆ. ಆಸ್ತಿ ಖರೀದಿ ಮಾಡುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು.

ಇನ್ನು ಸಾಮಾನ್ಯವಾಗಿ ಆಸ್ತಿ ಖರೀದಿಸುವ ಮುನ್ನ ಎಚ್ಚರಿಕೆಯಿಂದ ಆಸ್ತಿಯನ್ನು ಖರೀದಿಸಬೇಕು. ಆಸ್ತಿ ಖರೀದಿಯಲ್ಲಿ ಯಾವುದೇ ತಪ್ಪುಗಳು ಆದರೂ ಕೂಡ ದೊಡ್ಡ ಪ್ರಮಾಣದ ನಷ್ಟವನ್ನು ಎದುರಿಸಬೇಕಾಗುತ್ತದೆ. ಜಾಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದಿರಬೇಕು. ಆಸ್ತಿ ಖರೀದಿ ಮಾಡುವಾಗ ಆಸ್ತಿ ಮಾರಾಟಗಾರು ಖರೀದಿದಾರರಿಗೆ ನಕಲಿ ದಾಖಲೆಗಳನ್ನು ನೀಡುವ ಸಂಭವನೀಯತೆ ಇರುತ್ತದೆ.

Be careful during property registration
Image Credit: Assetscan

ಆಸ್ತಿ ನೋಂದಣಿ ಸಮಯದಲ್ಲಿ ಎಚ್ಚರ
ಆಸ್ತಿ ಖರೀದಿಯ ಸಮಯದಲ್ಲಿ ದಾಖಲೆಗಳನ್ನು ಪಡೆಯುವ ಮುನ್ನ ಎಚ್ಚರಿಕೆ ವಹಿಸಬೇಕು. ಅಂಗಡಿ, ಮನೆ ಅಥವಾ ಯಾವುದೇ ರೀತಿಯ ಜಮೀನನ್ನು ಖರೀದಿಸುವ ಸಮಯದಲ್ಲಿ RERA ನೋಂದಣಿ ಮತ್ತು ಆಸ್ತಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿಕೊಳ್ಳುವುದು ಉತ್ತಮ. ವಂಚಕರು ಒಂದೇ ಜಮೀನಿನಲ್ಲಿ ಅನೇಕ ನೋಂದಣಿ ಮಾಡಿ ಮಾರಾಟ ಮಾಡುವ ಮೂಲಕ ಜನರನ್ನು ವಂಚಿಸುತ್ತಾರೆ. ಇಂತಹ ವಂಚನೆಯಿಂದ ತಪ್ಪಿಸಿಕೊಳ್ಳಲು ನೈಜ್ಯ ಮತ್ತು ನಕಲಿ ನೋಂದಣಿಯ ನಡುವಿನ ವ್ಯತಾಸದ ಬಗ್ಗೆ ತಿಳಿದಿರಬೇಕು.

ನೈಜ್ಯ ಮತ್ತು ನಕಲಿ ಆಸ್ತಿ ದಾಖಲೆ ಪರಿಶೀಲಿಸುವುದು ಹೇಗೆ
ಸಾಮಾನ್ಯವಾಗಿ ಜನರು ಭೂಮಿಯನ್ನು ಖರೀದಿಸಿದಾಗ ಅವರು ಖಟೌನಿ ಅಥವಾ ರಿಜಿಸ್ಟ್ರಿ ದಾಖಲೆಗಳನ್ನು ಮಾತ್ರ ಸೂಕ್ಷ್ಮವಾಗಿ ನೋಡುತ್ತಾರೆ. ಆದರೆ ಈ ಎರಡು ದಾಖಲೆಗಳು ಮಾತ್ರ ಅಗತ್ಯವಿಲ್ಲ. ಈ ದಾಖಲೆಗಳಿಂದ ಮಾತ್ರ ನೀವು ಭೂಮಿ ಅಥವಾ ಆಸ್ತಿಯ ಮೇಲೆ ಮಾಲೀಕತ್ವದ ಹಕ್ಕುಗಳನ್ನು ಹೊಂದಿರುವವರನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ಆಸ್ತಿ ದಾಖಲೆ ಪರಿಶೀಲನೆಯ ಸಮಯದಲ್ಲಿ ಇನ್ನಿತರ ದಾಖಲೆಗಳು ಮುಖ್ಯವಾಗುತ್ತದೆ.

Fake Property Registration
Image Credit: Indiamart

ಆಸ್ತಿ ಖರೀದಿಸುವಾಗ ಈ ಎಲ್ಲಾ ವಿಷಯದ ಬಗ್ಗೆ ಗಮನಹರಿಸಿ
*ನೀವು ಹೊಸ ನೋಂದಾವಣೆ ಜೊತೆಗೆ ಹಳೆಯ ನೋಂದಾವಣೆಗೆ ಗಮನ ಕೊಡಬೇಕು.

Join Nadunudi News WhatsApp Group

*ನೀವು ಯಾರಿಂದ ಜಮೀನು ಖರೀದಿಸುತ್ತೀರೋ ಅವರು ಆ ಜಮೀನನ್ನು ಬೇರೆಯವರಿಂದ ಪಡೆದಿದ್ದರೆ, ಅವರಿಗೆ ಮಾಲೀಕತ್ವ ಹೇಗೆ ಬಂತು, ಈ ಎಲ್ಲಾ ವಿಷಯಗಳನ್ನು ಮೊದಲೇ ತಿಳಿದುಕೊಂಡಿರಬೇಕು.

*ಜಮೀನು ಖರೀದಿಸುವ ಮೊದಲು ನೀವು ಖರೀದಿಸುವ ಭೂಮಿ ಸರ್ಕಾರಿ ಸ್ವಾಮ್ಯಕ್ಕೆ ಸೇರಿದೆಯೇ ಎನ್ನುವುದನ್ನು ತಿಳಿಯಿರಿ. ಇದನ್ನು ತಿಳಿಯಲು ನೀವು 41 ಮತ್ತು 45 ಏಕೀಕರಣದ ದಾಖಲೆಗಳ ಮೂಲಕ ಭೂಮಿಯ ವಾಸ್ತವತೆಯನ್ನು ಪರಿಶೀಲಿಸಬಹುದು. ಅನೇಕ ಬಾರಿ ಜನರು ರೈಲ್ವೆ ಮತ್ತು ಅರಣ್ಯ ಇಲಾಖೆಯ ಭೂಮಿಯನ್ನು ತಮ್ಮದೆಂದು ಮಾರಾಟ ಮಾಡಿರುವ ಉದಾಹರಣೆಗಳಿವೆ.

*ನೀವು ಖರೀದಿಸಲು ಬಯಸುವ ಆಸ್ತಿ ಕಾನೂನು ವಿವಾದದಲ್ಲಿದೆಯಾ ಎನ್ನುವುದನ್ನು ತಿಳಿದಿರಬೇಕು. ಕಾನೂನಿನ ವಿವಾದಿತ ಆಸ್ತಿಯನ್ನು ಖರೀದಿಸಿದರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ.

Join Nadunudi News WhatsApp Group