Fake Sim: ಬ್ಯಾನ್ ಆಗಲಿದೆ ಇಂತವರ ಸಿಮ್ ಕಾರ್ಡುಗಳು, ಕೇಂದ್ರ ಸರ್ಕಾರದ ಮಹತ್ವದ ಘೋಷಣೆ.

ಸಂಚಾರ ಸಾಥಿ ಮೂಲಕ ನಕಲು ಸಿಮ್ ಕಾರ್ಡುಗಳನ್ನ ಬ್ಯಾನ್ ಮಾಡಲು ಈಗ ಕೇಂದ್ರ ಸರ್ಕಾರ ಮುಂದಾಗಿದೆ.

Fake Sim Cards Identification: ನಕಲಿ ಗುರುತಿನ ಮೂಲಕ ಪಡೆದ ಮೊಬೈಲ್ ಫೋನ್ ಸಂಪರ್ಕಗಳನ್ನು ಹೊರಹಾಕಲು ಕೃತಕ ಬುದ್ದಿಮತ್ತೆ ಆಧಾರಿತ ವ್ಯವಸ್ಥೆಗಳನ್ನು ನಿಯೋಜಿಸಲಾಗಿದೆ ಮತ್ತು ಇದುವರೆಗೆ ಅಂತಹ ಸುಮಾರು 37 ಲಕ್ಷ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ ಎಂದು ಸರಕಾರ ತಿಳಿಸಿದೆ.

Mobile phone connection through fake identity
Image Credit: amazon

ನಕಲಿ ಗುರುತಿನ ಮೂಲಕ ಮೊಬೈಲ್ ಫೋನ್ ಸಂಪರ್ಕ
ಇದರ ಬಗ್ಗೆ ಮಾಹಿತಿ ಕೇಂದ್ರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್, ಕೆಲವು ಜನರು ನಕಲಿ ಗುರುತಿನ ಮೂಲಕ ಮೊಬೈಲ್ ಸಂಪರ್ಕಗಳನ್ನು ಪಡೆದಿದ್ದಾರೆ. ಒಂದು ಪ್ರಕರಣದಲ್ಲಿ ಚಂದಾದಾರರ ಒಂದೇ ಫೋಟೋ ಬಳಸುವ ಮೂಲಕ 6800 ಸಂಪರ್ಕಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಇದೀಗ ಅಂತಹ 36 ಲಕ್ಷಕ್ಕೂ ಹೆಚ್ಚು ಸಂಪರ್ಕಗಳನ್ನು ನಿರ್ವಾಹಕರು ಸ್ಥಗಿತಗೊಳಿಸಿದ್ದಾರೆ. ಸಂಪರ್ಕ ಕಡಿತಗೊಂಡ ಸಂಖ್ಯೆಗಳ ಬ್ಯಾಂಕ್ ಗಳು ಪಾವತಿ ವಾಲೆಟ್ ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳಲಾಗಿದೆ.

The central government has now come forward to ban duplicate SIM cards through Sanchar Sathi.
Image Credit: newsinfo.inquirer

ಬ್ಯಾನ್ ಆದ ಒಟ್ಟು ಸಿಮ್ ಗಳು
ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು 12.34 ಲಕ್ಷಕ್ಕೂ ಹೆಚ್ಚು ಸಿಮ್ ಗಳ ಸಂಪರ್ಕ ಕಡಿತಗೊಂಡಿದೆ.ನಂತರ ಹರಿಯಾಣ 5.24 ಲಕ್ಷಕ್ಕೂ ಹೆಚ್ಚು ಸಿಮ್ ಗಳನ್ನೂ ಕಡಿತಗೊಂಡಿದೆ. ಇನ್ನು ಬಿಹಾರ ಮತ್ತು ಜಾರ್ಖಂಡ್ ಒಟ್ಟಿಗೆ 3.27 ಲಕ್ಷಕ್ಕೂ ಹೆಚ್ಚು ಸಿಮ್ ಗಳು ಕಡಿತವಾಗಿದೆ. ಮಧ್ಯಪ್ರದೇಶದಲ್ಲಿ 2.28 ಲಕ್ಷಕ್ಕೂ ಹೆಚ್ಚು ಸಿಮ್ ಗಳು ಕಡಿತವಾಗಿದೆ.

Fake ID Mobile Phone
Image Credit: newindianexpress

ಸಂಚಾರಿ ಸಾಥಿ ಪೋರ್ಟಲ್
ಸಂಚಾರಿ ಸಾಥಿ ಪೋರ್ಟಲ್ ಬಳಸುವ ಮೂಲಕ 40 ಲಕ್ಷಕ್ಕೂ ಹೆಚ್ಚು ಮೋಸದ ಸಂಪರ್ಕಗಳನ್ನು ಗುರುತಿಸಲಾಗಿದೆ ಮತ್ತು ಇದುವರೆಗೆ 36 ಲಕ್ಷಕ್ಕೂ ಹೆಚ್ಚು ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಹೆಚ್ಚುವರಿಯಾಗಿ, ಕೇಂದ್ರವು ಸಂಚಾರಿ ಸಾಥಿ ಪೋರ್ಟಲ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿತು, ಅದರ ಮೂಲಕ ಮೊಬೈಲ್ ಬಳಕೆದಾರರು ತಮ್ಮ ಹೆಸರಿನಲ್ಲಿ ನೀಡಲಾದ ಮೊಬೈಲ್ ಸಂಪರ್ಕಗಳನ್ನು ಪರಿಶೀಲಿಸಬಹುದು.

Join Nadunudi News WhatsApp Group

ಅಗತ್ಯವಿಲ್ಲದ ಸಂಪರ್ಕಗಳನ್ನು ಕಡಿತಗೊಳಿಸಬಹುದು. ಕಳೆದುಹೋದ ಮೊಬೈಲ್ ಫೋನ್ ಗಳನ್ನೂ ನಿರ್ಬಂಧಿಸಬಹುದು, ಪತ್ತೆಹಚ್ಚಬಹುದು ಮತ್ತು ಹೊಸ ಅಥವಾ ಖರೀದಿಸುವಾಗ ಸಾಧನಗಳ ಅಸಲಿತನವನ್ನು ಪರಿಶೀಲಿಸಬಹುದು.

Join Nadunudi News WhatsApp Group