WhatsApp: ಬ್ಯಾನ್ ಆಗಲಿದೆ ಇಂತವರ ವಾಟ್ಸಾಪ್, ಸುರಕ್ಷತೆಯ ಉದ್ದೇಶದಿಂದ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ.
ದೇಶದಲ್ಲಿ ಹಲವು ಜನರು ನಕಲಿ ಸಂಖ್ಯೆಯ ಮೂಲಕ ವಾಟ್ಸಾಪ್ ಬಳಸುತ್ತಿದ್ದು ಅಂತವರ ವಾಟ್ಸಾಪ್ ಬ್ಯಾನ್ ಮಾಡಲು ಕೇಂದ್ರ ಸರ್ಕಾರ ತೀರ್ಮಾನವನ್ನ ಮಾಡಿದೆ.
WhatsApp Fraud: ವಾಟ್ಸಾಪ್ (WhatsApp) ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ವಾಟ್ಸಾಪ್ ತನ್ನ ಗ್ರಾಹಕರಿಗಾಗಿ ಉತ್ತಮ ಫೀಚರ್ ಗಳನ್ನೂ ಹೊರ ತರುತ್ತಿದೆ. ವಂಚನೆಗೆ ಬಳಸುತ್ತಿರುವ ಮೊಬೈಲ್ ಸಂಖ್ಯೆಗಳ ನೋಂದಣಿ ರದ್ದುಗೊಳಿಸಲು ಮೆಟಾ ಒಡೆತನದ ವಾಟ್ಸಾಪ್ ಒಪ್ಪಿಗೆ ನೀಡಿದೆ.
ವಂಚನೆಗೆ ಬಳಸುತ್ತಿರುವ ಮೊಬೈಲ್ ಸಂಖ್ಯೆಗಳ ಸೇವೆಯನ್ನು ಅದರ ಪ್ಲಾಟ್ ಫಾರ್ಮ್ ನಿಂದ ಈಗಾಗಲೇ ಕಡಿತಗೊಳಿಸಲಾಗಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ವಾಟ್ಸಾಪ್ ವಂಚನೆ ಮಾಡುವವರಿಗೆ ಹೊಸ ಮಾಹಿತಿ
ಯಾರು ತಮ್ಮ ಮೊಬೈಲ್ ಸಂಖ್ಯೆ ಬಳಸಿಕೊಂಡು ವಾಟ್ಸಾಪ್ ವಂಚನೆ ಮಾಡುತ್ತಾರೋ ಅವರು ಎಚ್ಚರವಿರಬೇಕಾಗುತ್ತದೆ. ನಾವು ವಾಟ್ಸಾಪ್ ನೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಸಕ್ರಿಯವಾಗಿ ಮಾತುಕತೆ ನಡೆಸುತ್ತಿದ್ದೇವೆ.
ಗ್ರಾಹಕರ ಸುರಕ್ಷತೆಯು ಅತ್ಯಂತ ಮುಖ್ಯವಾಗಿದೆ ಎಂದು ವಾಟ್ಸಾಪ್ ಸಂಸ್ಥೆಯು ಒಪ್ಪಿಕೊಂಡಿದೆ. ವಂಚನೆಗೆ ಬಳಸುವ ಮೊಬೈಲ್ ಸಂಖ್ಯೆಯ ನೋಂದಣಿ ರದ್ದುಗೊಳಿಸಲು ಅವರು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ವಾಟ್ಸಾಪ್ ನಲ್ಲಿ ಸಹ ವಂಚನೆ ಮಾಡುತ್ತಿರುವ ವಂಚಕರು
ಗ್ರಾಹಕರನ್ನು ವಂಚಿಸುವ ಉದ್ದೇಶದಿಂದ ವಾಟ್ಸಾಪ್ ನಲ್ಲಿ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಕರೆ ಮಾಡುವ ವಂಚಕರ ತಂತ್ರವನ್ನು ನಿಲ್ಲಿಸಲು ಸರ್ಕಾರ ಕ್ರಮಗಳ ಬಗ್ಗೆ ಪ್ರಶ್ನಿಸಿದಾಗ ಟೆಲಿಕಾಂ ಸಚಿವ ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಪ್ರಸ್ತುತ ವಂಚಕರು ಜನರನ್ನು ವಂಚನೆ ಮಾಡಲು ಹಲವಾರು ಮಾರ್ಗಗಳನ್ನು ಹೊಂದಿದ್ದಾರೆ. ಹೊಸ ಹೊಸ ತಂತ್ರಗಳನ್ನು ವಂಚಕರು ಅಳವಡಿಸಿಕೊಳ್ಳುತ್ತಿದ್ದಾರೆ. ವಾಟ್ಸಾಪ್ ಅನ್ನು ಕೂಡಾ ತಮ್ಮ ತಂತ್ರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ವಾಟ್ಸಾಪ್ ವಂಚನೆ ಮಾಡುತ್ತಿರುವವರ ಮೊಬೈಲ್ ಸಂಖ್ಯೆ ಬಂದ್
ಯಾವ ವಾಟ್ಸಾಪ್ ಬಳಕೆದಾರರು ವಂಚನೆಯನ್ನು ನಡೆಸುತ್ತಿದ್ದಾರೆ ಅವರ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಲು ಸರ್ಕಾರವು ಟೆಲಿಗ್ರಾಮ್ ನಂತಹ ಇತರ ಸಂದೇಶ ಕಳುಹಿಸುವ ಪ್ಲಾಟ್ಫಾರ್ಮ್ಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಸಚಿವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ವಾಟ್ಸಾಪ್, ಸಮಸ್ಯೆಯನ್ನು ಪರಿಹರಿಸಲು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದೆ.