Fake World Cup: ಭಾರತಕ್ಕೆ ಸಿಕ್ಕಿರುವುದು ನಕಲಿ ವಿಶ್ವಕಪ್, ಅಷ್ಟಕ್ಕೂ ಅಸಲಿ ವಿಶ್ವಕಪ್ ಎಲ್ಲಿದೆ ಗೊತ್ತಾ…?

ಭಾರತಕ್ಕೆ ಸಿಕ್ಕಿರುವುದು ನಕಲಿ ವಿಶ್ವಕಪ್...! ಅಸಲಿ ಎಲ್ಲಿದೆ...?

Fake World Cup Update: ಸದ್ಯ 2024 ರ ವಿಶ್ವಕಪ್ ಟ್ರೋಫಿ ಗೆದ್ದು ಟೀಮ್ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. ನಿನ್ನೆಯಷ್ಟೇ ಟೀಮ್ ಇಂಡಿಯಾ ಭಾರತಕ್ಕೆ ಮರಳಿದ್ದು, ಗೆಲುವಿನ ಸಂರಬಾಚರಣೆಯನ್ನು ಅದ್ಧುರಿಯಾಗಿ ಮಾಡಿದೆ. ಇನ್ನು ದೇಶದ ಪ್ರಧಾನಿ ಮೋದಿ ಅವರು ಭಾರತದ ತಂಡದ ಆಟಗಾರರ ವಿಶೇಷ ಆಥಿತ್ಯ ನೀಡಿ ಅಭಿನಂದನೆ ಸಲ್ಲಿದರು.

ಸದ್ಯ ಟೀಮ್ ಇಂಡಿಯಾ ಗೆದ್ದ ಟ್ರೋಫಿ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ ಭಾರತಕ್ಕೆ ಸಿಕ್ಕಿರುವುದು ನಕಲಿ ವಿಶ್ವಕಪ್ ಎನ್ನುವುದು ನಿಮಗೆ ಗೊತ್ತೇ..?  ಹೌದು, ವಿಜೇತ ತಂಡಕ್ಕೆ ನಕಲಿ ವಿಶ್ವಕಪ್ ಅನ್ನು ನೀಡುತ್ತಾರೆ. ಅಷ್ಟಕ್ಕೂ, ತಂಡಕ್ಕೆ ನಕಲಿ ಕಪ್ ಅನ್ನು ನೀಡಲು ಕಾರಣವೇನು…? ಅಸಲಿ ವಿಶ್ವಕಪ್ ಎಲ್ಲಿದೆ…? ಎನ್ನುವ ಬಗ್ಗೆ ನಾವೀಗ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ.

T20 World Cup Trophy 2024
Image Credit: Deccanchronicle

ಭಾರತಕ್ಕೆ ಸಿಕ್ಕಿರುವುದು ನಕಲಿ ವಿಶ್ವಕಪ್…!
ಭಾರತ ತಂಡದ ಬಳಿ ಇರುವುದು ಒರಿಜಿನಲ್ ಟಿ20 ವಿಶ್ವಕಪ್ ಟ್ರೋಫಿ ಅಲ್ಲ. ಬದಲಾಗಿ ಡುಪ್ಲಿಕೇಟ್ ಟ್ರೋಫಿ ಎಂದು ತಿಳಿದು ಅಭಿಮಾನಿಗಳು ಶಾಕ್ ಆಗಿದ್ದಾರೆ. ಹೌದು, ಟೀಂ ಇಂಡಿಯಾ ಭಾರತಕ್ಕೆ ಡುಪ್ಲಿಕೇಟ್ ಟಿ20 ವಿಶ್ವಕಪ್ ಟ್ರೋಫಿ ತಂದಿದೆ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಆಯೋಜಿಸುವ ಯಾವುದೇ ವಿಶ್ವಕಪ್ ಪಂದ್ಯಾವಳಿಯಲ್ಲಿ ಫೋಟೋ ಶೂಟ್‌ ಗೆ ಮೂಲ ಟ್ರೋಫಿಯನ್ನು ಮಾತ್ರ ನೀಡಲಾಗುತ್ತದೆ. ನಂತರ ಐಸಿಸಿ ವರ್ಷದ ಲೋಗೋದೊಂದಿಗೆ ನಕಲಿ ಬೆಳ್ಳಿ ಟ್ರೋಫಿಯನ್ನು ವಿನ್ಯಾಸಗೊಳಿಸುತ್ತದೆ ಮತ್ತು ವಿಜೇತ ತಂಡಕ್ಕೆ ನೀಡುತ್ತದೆ. ಮೂಲ ಟ್ರೋಫಿ ಐಸಿಸಿ ಬಳಿಯೇ ಇರುತ್ತದೆ.

ಅಷ್ಟಕ್ಕೂ ಅಸಲಿ ವಿಶ್ವಕಪ್ ಎಲ್ಲಿದೆ ಗೊತ್ತಾ…?
ಅಸಲಿ ಟ್ರೋಫಿ ದುಬೈನಲ್ಲಿರುವ ICC ಕೇಂದ್ರ ಕಚೇರಿಯಲ್ಲಿರುತ್ತದೆ.  ಫೋಟೋ ಶೂಟ್ ನಂತರ, ಮೂಲ ಟ್ರೋಫಿಯನ್ನು ಕೇಂದ್ರ ಕಚೇರಿಗೆ ನೀಡಲಾಗುತ್ತದೆ. ಯಾವ ತಂಡವು ಕಪ್ ಗೆದ್ದರೂ ಅದನ್ನು ಆಚರಣೆ ಮತ್ತು ಫೋಟೋ ಸೆಷನ್‌ ಗಾಗಿ ಮಾತ್ರ ಪ್ರಸ್ತುತಪಡಿಸಲಾಗುತ್ತದೆ. ಅದರ ನಂತರ, ವಿಜೇತರು ನಕಲಿ ಟ್ರೋಫಿಯೊಂದಿಗೆ ತವರಿಗೆ ಮರಳುತ್ತಾರೆ.  ಸದ್ಯ ಈ ವಿಚಾರ ತಿಳಿದ ಅಭಿಮಾನಿಗಳು ನಕಲಿ ಟ್ರೋಫಿಗಾಗಿ ಅಷ್ಟೊಂದು ಕಷ್ಟಪಡಬೇಕಿತ್ತ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Fake World Cup Update
Image Credit: Sportstiger

Join Nadunudi News WhatsApp Group

Join Nadunudi News WhatsApp Group