Fastrack: ಯುವ ಜನತೆಗಾಗಿ ಕಡಿಮೆ ಬೆಲೆಯ ಅತ್ಯಾಕರ್ಷಕ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದ ಫಾಸ್ಟ್ ಟ್ರ್ಯಾಕ್.
ಅತ್ಯಾಕರ್ಷಕ ಬೆಲೆಯಲ್ಲಿ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದ ಫಾಸ್ಟ್ ಟ್ರ್ಯಾಕ್.
Fastrack Revoltt FS1 Pro Smart Watch: ದೇಶಿಯ ಮಾರುಕಟ್ಟೆಟಿಯಲ್ಲಿ ಹೊಸ ಹೊಸ ತಂತ್ರಜ್ಞಾನಗಳ ವಿಭಿನ್ನ ಮಾದರಿಯ ವಸ್ತುಗಳು ಬೆಳಕಿಗೆ ಬರುತ್ತಿವೆ. ಪ್ರಸ್ತುತ ಸ್ಮಾರ್ಟ್ ವಾಚ್ (Smart Watch) ಗಳ ಹಾವಳಿಹೆಚ್ಚುತ್ತಿದೆ.ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಸ್ಮಾರ್ಟ್ ವಾಚ್ ಗಳನ್ನೂ ಬಳಸುತ್ತಾರೆ.
ಸ್ಮಾರ್ಟ್ ವಾಚ್ ಬಳಕೆ ಒಂದು ರೀತಿಯಲ್ಲಿ ಮೊಬೈಲ್ ಬಳಕೆಯ ಅನುಭವವನ್ನೇ ನೀಡುತ್ತದೆ. ಹಾಗಾಗಿ ಜನರು ಸ್ಮಾರ್ಟ್ ವಾಚ್ ಗಳನ್ನೂ ಹೆಚ್ಚು ಇಷ್ಟಪಡುತ್ತಿದ್ದಾರೆ. ಇದೀಗ ಅತಿ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ವಾಚ್ ವಾಚ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.
ಫಾಸ್ಟ್ರ್ಯಾಕ್ ರಿವೋಲ್ಟ್ ಎಫ್ ಎಸ್ 1 ಪ್ರೊ ಸ್ಮಾರ್ಟ್ ವಾಚ್ (Fastrack Revoltt FS1 Pro)
ಫಾಸ್ಟ್ರ್ಯಾಕ್ ರಿವೋಲ್ಟ್ ಎಫ್ ಎಸ್ 1 ಪ್ರೊ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ವಾಚ್ ನಲ್ಲಿ ಸಾಕಷ್ಟು ವಿಶೇಷತೆಗಳಿವೆ. ಈ ಸ್ಮಾರ್ಟ್ ವಾಚ್ ನಲ್ಲಿ ಫಾಸ್ಟ್ರ್ಯಾಕ್ ಆರ್ಚ್ಡ್ ಡಿಸ್ಪ್ಲೇ ಯನ್ನು ನೀಡಿದೆ. ಈ ವಾಚ್ ನಲ್ಲಿ 1 .96 ಸೂಪರ್ AMOLE ಆರ್ಚ್ಡ್ ಡಿಸ್ ಪ್ಲೇ ಜೊತೆಗೆ 410 X 502 ರೆಸಲ್ಯೂಷನ್ ಜೊತೆಗೆ 1280p ರೆಸಲ್ಯೂಷನ್ ಅನ್ನು ನೀಡಲಿದೆ.
ಫಾಸ್ಟ್ರ್ಯಾಕ್ ರಿವೋಲ್ಟ್ ಎಫ್ ಎಸ್ 1 ಪ್ರೊ ಸ್ಮಾರ್ಟ್ ವಾಚ್ ನ ವಿಶೇಷತೆ
ಈ ಸಮರ್ಥ ವಾಚ್ ನಿಮ್ಮ ದಿನದ ಪ್ರಾರಂಭದ ಜೊತೆಯಲ್ಲಿ ಸಾಗುತ್ತದೆ. ನಿಮ್ಮ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಈ ಸ್ಮಾರ್ಟ್ ವಾಚ್ ಸಹಾಯವಾಗಲಿದೆ. ನಿಮ್ಮ ಆರೋಗ್ಯದ ಜೊತೆಗೆ ಸ್ವಯಂ ನಿದ್ರೆ ಟ್ರಾಕಿಂಗ್ ಮತ್ತು 24X7 ಹೃದಯ ಮಾನಿಟರ್ ನಂತಹ ಕೆಲವು ವಿಶೇಷ ವೈಶಿಷ್ಟಗಳನ್ನು ಹೊಂದಿದೆ.
ಈ ಸ್ಮಾರ್ಟ್ ವಾಚ್ ನ ಬ್ಯಾಟರಿ ಸಾಮರ್ಥ್ಯ ವಿಶೇಷವಾಗಿದೆ. ಇದರ ಬ್ಯಾಟರಿ ರಿವೋಲ್ಟ್ FS1 ಪ್ರೊ ನಲ್ಲಿ ಫಾಸ್ಟ್ರಕ್ ಅಪ್ ಗ್ರೇಡ್ ಮಾಡಿದೆ. ಅತಿ ವೇಗದಲ್ಲಿ ನಿಮ್ಮ ಫಾಸ್ಟ್ರ್ಯಾಕ್ ರಿವೋಲ್ಟ್ ಎಫ್ ಎಸ್ 1 ಪ್ರೊ ಸ್ಮಾರ್ಟ್ ವಾಚ್ ಚಾರ್ಜ್ ಆಗುತ್ತದೆ. ಕೇವಲ ಹತ್ತು ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ.