FASTag Update: ಕಾರು, ಬಸ್, ಟ್ರಕ್ ಮಾಲೀಕರಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ, ಟೋಲ್ ನಲ್ಲಿ ಹೊಸ ನಿಯಮ
FasTag ಬ್ಯಾಲೆನ್ಸ್ ಚೆಕ್ ಮಾಡಲು ಹೊಸ ಅಪ್ಲಿಕೇಶನ್.
FASTag Balance Check By Using UPI: ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಟೋಲ್ ಸಂಗ್ರಹಣೆಯಲ್ಲಿ ಸಾಕಷ್ಟು ನಿಯಮಗಳು ಜಾರಿಗೆ ಬಂದಿವೆ. ಟೋಲ್ (Toll) ಸಂಗ್ರಹಣೆಯಲ್ಲಿ ಸಾಕಷ್ಟು ರೀತಿಯ ಸುಲಭ ವಿಧಾನವನ್ನು ಬಳಸಲಾಗುತ್ತದೆ. ಟೋಲ್ ಸಂಗ್ರಹಣೆಯಲ್ಲಿ ವಿಧಾನದಲ್ಲಿ ಹೊಸ ಹೊಸ ತಂತ್ರಜ್ಞಗಳನ್ನು ಬಳಸಿಕೊಳ್ಳಲಾಗುತ್ತದೆ. ಇನ್ನು ಟೋಲ್ ಸಂಗ್ರಹಣೆಯಲ್ಲಿ ಫಾಸ್ಟ್ ಟ್ಯಾಗ್ (FASTag) ನ ಮೂಲಕ ಟೋಲ್ ಸಂಗ್ರಹಣೆ ಸುಲಭವಾಗಿದೆ.
ಫಾಸ್ಟ್ ಟ್ಯಾಗ್ ಸೇವೆಯಲ್ಲಿ ಹೊಸ ಸೌಲಭ್ಯ
ಸಾಕಷ್ಟು ವಾಹನಗಳ ಚಲಾವಣೆಯಿಂದಾಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗಳು ಹೆಚ್ಚಾಗಿವೆ. ಇನ್ನು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣೆಯಾದ ಫಾಸ್ಟ್ ಟ್ಯಾಗ್ (FASTag)ಅನ್ನು ಬಳಸಿ ಟೋಲ್ ಸಂಗ್ರಹಿಸಲಾಗಿತ್ತು. ಫಾಸ್ಟ್ ಟ್ಯಾಗ್ ವ್ಯವಸ್ಥೆಯು ವಾಹನದ ಪರವಾನಗಿ ಫಲಕವನ್ನು ಓದುವ ಮೂಲಕ ತೆರಿಗೆಯನ್ನು ವಾಹನದ ಮಾಲಿಕರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸುತ್ತದೆ. ಪ್ರವೇಶ ಮತ್ತು ನಿರ್ಗಮನದಲ್ಲಿ ಎಏನ್ ಪಿಆರ್ ಕ್ಯಾಮರಾಗಳನ್ನು ಇರಿಸಲಾಗುತ್ತದೆ.
ಕ್ಯಾಮರಾಗಳು ಪರವಾನಗಿ ಫಲಕದ ಫೋಟೋವನ್ನು ಕ್ಲಿಕ್ ಮಾಡಿ ವಾಹನದ ಸಂಖ್ಯೆಯಿಂದ ಟೋಲ್ ಮೂಲಕ ಟೋಲ್ ಅನ್ನು ಕಡಿತಗೊಳಿಸುತ್ತದೆ. ಈ ಹೊಸ ಸ್ವಯಂ ಚಾಲಿತ ನಂಬರ್ ಪ್ಲೇಟ್ ರೀಡರ್ ವ್ಯವಸ್ಥೆಯ ಮೂಲಕ ಸುಲಭವಾಗಿ ತೆರಿಗೆ ಪಾವತಿಸಿಕೊಳ್ಳಬಹುದಾಗಿದೆ.
ಇನ್ನು ಹೊಸ ವಾಹನದ ನಂಬರ್ ಪ್ಲೇಟ್ ಗಳಲ್ಲಿ ವಾಹನ ಸಂಖ್ಯೆಯ ಜೊತೆಗೆ ಜಿಪಿಎಸ್ ಗಳನ್ನು ಅಳವಡಿಸಲಾಗುತ್ತದೆ. ಕ್ಯಾಮರಾಗಳು ಪರವಾನಗಿ ಫಲಕದ ಫೋಟೋವನ್ನು ಕ್ಲಿಕ್ ಮಾಡಿ ವಾಹನದ ಸಂಖ್ಯೆಯಿಂದ ಟೋಲ್ ಮೂಲಕ ಟೋಲ್ ಅನ್ನು ಕಡಿತಗೊಳಿಸುತ್ತದೆ.
UPI ಮೂಲಕ ಫಾಸ್ಟ್ ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಬಹುದು
ಇದೀಗ ವಾಹನ ಸವಾರರಿಗೆ ಫಾಸ್ಟ್ ಟ್ಯಾಗ್ ನಲ್ಲಿ ಬ್ಯಾಲೆನ್ಸ್ ಎಷ್ಟಿದೆ ಎಂಬುವುದನ್ನು ಪರಿಶೀಲಿಸಿಕೊಳ್ಳಲು ಹೊಸ ವಿಧಾನವನ್ನು ನೀಡಲಾಗಿದೆ. ಫಾಸ್ಟ್ ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳುವುದಕ್ಕೆ ಇನ್ನುಮುಂದೆ ಯುಪಿಐ ಅಪ್ಲಿಕೇಶನ್ ಗಳು ಸಹಾಯವಾಗಲಿದೆ. ಫಾಸ್ಟ್ ಟ್ಯಾಗ್ ನಲ್ಲಿರುವ ಬ್ಯಾಲೆನ್ಸ್ ಅನ್ನು ಗೂಗಲ್ ಪೇ, ಫೋನ್ ಪೇ ಮತ್ತು ಪೆಟಿಎಂನ ಮೂಲಕ ಚೆಕ್ ಮಾಡಿಕೊಳ್ಳಬಹುದು. ಇನ್ನುಮುಂದೆ ಗೂಗಲ್ ಪೇ, ಫೋನ್ ಪೇ ಮತ್ತು ಪೆಟಿಎಂ ಸೇರಿದಂತೆ ಇನ್ನಿತರ ಯುಪಿಐ ಪಾವತಿ ಅಪ್ಲಿಕೇಶನ್ ಗಳು ನಿಮ್ಮ ಫಾಸ್ಟ್ ಪಾವತಿಗೆ ಸಹಾಯವಾಗಲಿದೆ.
ನಿಮ್ಮ ಬಳಿ ಇರುವ ಯಾವುದೇ ಯುಪಿಐ ಅಪ್ಲಿಕೇಶನ್ ನ ಮೂಲಕ ಫಾಸ್ಟ್ ಟ್ಯಾಗ್ ಬ್ಯಾಲೆನ್ಸ್ ಅನ್ನು ಚೆಕ್ ಮಾಡಿಕೊಳ್ಳಬಹುದು. ರಿಚಾರ್ಜ್ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಫಾಸ್ಟ್ ಟ್ಯಾಗ್ ಆಯ್ಕೆಯನ್ನು ಆರಿಸಬೇಕು. ಆಯ್ಕೆಯನ್ನು ಆರಿಸಿದ ಮೇಲೆ ನಿಮ್ಮ ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿ ವ್ಯೂ ಬ್ಯಾಲೆನ್ಸ್ ಬಟನ್ ಅನ್ನು ಟಪ್ ಮಾಡುವ ಮೂಲಕ ಬ್ಯಾಲೆನ್ಸ್ ಪರಿಶೀಲಿಸಿಕೊಳ್ಳಬಹುದು. ದೂರದ ಪ್ರಯಾಣದ ವೇಳೆ ನೀವು ಯುಪಿಐ ಪಾವತಿಯ ಅಪ್ಲಿಕೇಶನ್ ನ ಮೂಲಕ ಬ್ಯಾಲೆನ್ಸ್ ಅನ್ನು ಸುಲಭವಾಗಿ ಪರಿಶೀಲಿಸಿಕೊಳ್ಳಬಹುದಾಗಿದೆ.