FASTag Update: ಇಂದಿನಿಂದ ಕೆಲಸ ಮಾಡಲ್ಲ ಇಂತಹ ವಾಹನಗಳ Fastag, ಕೇಂದ್ರದ ಅಧಿಕೃತ ಘೋಷಣೆ

NHAI ನಿಂದ ಫಾಸ್ಟ್ ಟ್ಯಾಗ್ ಬಳಕೆದಾರರರಿಗೆ ಬಿಗ್ ಅಲರ್ಟ್ ಘೋಷಣೆಯಾಗಿದೆ, ನಾಳೆಯಿಂದ ಇಂತಹ ವಾಹನಗಳ Fastag ರದ್ದು

FASTag KYC Today Last Date: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು Toll ಪಾವತಿ ಮಾಡಬೇಕಾಗುತ್ತದೆ. ವಾಹನ ಮಾಲೀಕರು ಟೋಲ್ ಪಾವತಿಗಾಗಿ FASTag ಅನ್ನು ಬಳಸುತ್ತಾರೆ. ಈ ಫಾಸ್ಟ್ ಟ್ಯಾಗ್ ನ ಮೂಲಕ ಟೋಲ್ ಪಾವತಿ ಪ್ರಕ್ರಿಯೆ ಬಹಳ ಸುಲಭವಾಗುತ್ತದೆ.

ಕೈಯಲ್ಲಿ ನಗದು ಇಲ್ಲದಿದ್ದರೂ ಕೂಡ ಫಾಸ್ಟ್ ಟ್ಯಾಗ್ ನ ಮೂಲಕ ಟೋಲ್ ಪಾವತಿ ಮಾಡಲು ಸಾಧ್ಯವಾಗುತ್ತದೆ. ಇತ್ತೀಚೆಗಷ್ಟೇ NHAI ಫಾಸ್ಟ್ ಟ್ಯಾಗ್ ಬಳಕೆದಾರರಿಗೆ ಹೊಸ ರೂಲ್ ಜಾರಿ ಮಾಡಿತ್ತು. FASTAg ಬಳಕೆದಾರರು KYC ನವೀಕರಣ ಮಾಡುವುದನ್ನು NHAI ಕಡ್ಡಾಯಗೊಳಿಸಿತ್ತು. ಸದ್ಯ NHAI ನಿಂದ ಫಾಸ್ಟ್ ಟ್ಯಾಗ್ ಬಳಕೆದಾರರರಿಗೆ ಬಿಗ್ ಅಲರ್ಟ್ ಘೋಷಣೆಯಾಗಿದೆ.

FASTag KYC Today Last Date
Image Credit: Zeebiz

ಫಾಸ್ಟ್ ಟ್ಯಾಗ್ ಬಳಕೆದಾರರರಿಗೆ ಬಿಗ್ ಅಲರ್ಟ್
ಹೌದು, FASTAg ಬಳಕೆದಾರರು KYC ನವೀಕರಣವನ್ನು ಮಾಡಿಕೊಳ್ಳುವಂತೆ NHAI FASTAg ಬಳಕೆದಾರರಿಗೆ ಸೂಚನೆ ನಿದುಟಿ. ಕಳೆದ ತಿಂಗಳಿನಲ್ಲಿ ಇದ್ದ ಕೊನೆಯ ದಿನಾಂಕವನ್ನು ಫೆಬ್ರವರಿ 29 ಕ್ಕೆ ನಿಗದಿಪಡಿಸಲಾಗಿತ್ತು. ವಾಹನ ಸವಾರರಿಗೆ ಒಂದು ತಿಂಗಳು FASTAg ನವೀಕರಣಕ್ಕೆ ಸಮಯಾವಕಾಶವನು ನೀಡಿತ್ತು. ಆದರೆ ಇದೀಗ ಫೆಬ್ರವರು 29 ಕೊನೆಯ ದಿನಾಂಕ ಕೂಡ ಮುಗಿದಿದೆ.

KYC ಪೂರ್ಣಗೊಳಿಸಲು ಫೆಬ್ರವರಿ 29 ಕೊನೆಯ ದಿನಾಂಕ
ಹೌದು NHAI ನೀಡಿರುವ ಆದೇಶದ ಪ್ರಕಾರ KYC ಪೂರ್ಣಗೊಳಿಸಲು ನಿನ್ನೇನೆ ಕೊನೆಯ ದಿನಾಂಕ ಆಗಿರುತ್ತದೆ.  ಕೊನೆಯ ದಿನಾಂಕ ಮುಗಿದ ನಂತರವೂ ನಿಮ್ಮ FASTAg ನವೀಕರಣ ಆಗದಿದ್ದರೆ ನಿಮ್ಮ FASTAg ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ ಎನ್ನುವುದು ನಿಮಗೆ ತಿಳಿದಿರಲಿ. FASTAg ಬಳಕೆದಾರರು ಒಂದು ವಾಹನಕ್ಕೆ ಒಂದೇ FASTAg ಅನ್ನು ಅನುಸರಿಸಬೇಕು ಮತ್ತು ಈ ಹಿಂದೆ ನೀಡಲಾದ ಎಲ್ಲ FASTAg ಗಳನ್ನೂ ಆಯಾ ಬ್ಯಾಂಕ್ ಗಳ ಮೂಲಕ ತ್ಯಜಿಸಬೇಕು. ಒಂದು ವಾಹನ ಒಂದು FASTAg ಅಭಿಯಾನದಡಿಯಲ್ಲಿ FASTAg ನ ಉತ್ತಮ ಅನುಭವವನ್ನು ಉತ್ತೇಜಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ತಿಳಿಸಿದೆ.

FASTag KYC Update
Image Credit: India Tv

ಈ ರೀತಿಯಾಗಿ ನಿಮ್ಮ FASTag KYC ಯನ್ನು ಇಂದೇ ನವೀಕರಿಸಿಕೊಳ್ಳಿ
•ಮೊದಲು ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ
https://fastag.ihmcl.com ಪೋರ್ಟಲ್‌ ಗೆ ಲಾಗಿನ್ ಮಾಡಿ.

Join Nadunudi News WhatsApp Group

•ಡ್ಯಾಶ್‌ ಬೋರ್ಡ್‌ ನಲ್ಲಿ ನನ್ನ ಪ್ರೊಫೈಲ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

•My Profile ಪುಟದಲ್ಲಿ KYC ಆಯ್ಕೆಯನ್ನು ಆಯ್ಕೆಮಾಡಿ. ಅದರ ನಂತರ ಗ್ರಾಹಕ ಪ್ರಕಾರವನ್ನು ಆಯ್ಕೆ ಮಾಡಬೇಕಾಗಿದೆ.

•ಆನ್-ಸ್ಕ್ರೀನ್ ಸೂಚನೆಗಳನ್ನು ಮತ್ತು ನಿಮ್ಮ FastTag CVC ಅನುಸರಿಸಿ ನವೀಕರಿಸಲು ಅಗತ್ಯವಿರುವ ಮಾಹಿತಿಯನ್ನು ಒದಗಿಸಿ.

•ಅಪ್‌ ಲೋಡ್ ಮಾಡಿದ ನಂತರ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು.

•ನಿಮ್ಮ KYC ನವೀಕರಣವನ್ನು ಅನುಮೋದಿಸಲು ಸಾಮಾನ್ಯವಾಗಿ 7 ದಿನಗಳನ್ನು ತೆಗೆದುಕೊಳ್ಳುತ್ತದೆ.

Join Nadunudi News WhatsApp Group