Married Daughter: ಮದುವೆಯ ನಂತರ ಮಗಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಹಕ್ಕಿದೆ, ಇದರ ಬಗ್ಗೆ ಕಾನೂನು ಹೇಳುವುದೇನು.
ಮದುವೆಯ ನಂತರ ಮಗಳಿಗೆ ಅಪ್ಪನ ಆಸ್ತಿಯಲ್ಲಿ ಎಷ್ಟು ಪಾಲಿದೆ ಮತ್ತು ಇದರ ಬಗ್ಗೆ ಕಾನೂನು ಹೇಳುವುದೇನು.
Married Daughter’s Property Right: ಕಾನೂನಿನ ನ್ಯಾಯಾಲಯದಲ್ಲಿ ಹೆಣ್ಣು ಮಕ್ಕಳು ಆಸ್ತಿಯ (Property) ಮೇಲೆ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತಾರೆ. ತಂದೆಯ ಸ್ವಯಾರ್ಜಿತ ಆಸ್ತಿ, ಪಿತ್ರಾಜಿತ ಆಸ್ತಿ ಹಾಗೂ ತಾಯಿಯ ಸ್ವಯಾರ್ಜಿತ ಆಸ್ತಿ, ಪಿತ್ರಾಜಿತ ಆಸ್ತಿ ಎರಡಲ್ಲೂ ಕೂಡ ಹೆಣ್ಣು ಮಕ್ಕಳು ಸಮಾನ ಹಕ್ಕನ್ನು ಹೊಂದಿರುತ್ತಾರೆ.
ಇನ್ನು ಹೆಣ್ಣು ಮಕ್ಕಳು ಮದುವೆಯ ನಂತರ ತಮ್ಮ ಆಸ್ತಿ ಹಕ್ಕನ್ನು ಪಡೆಯುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಕೂಡ ಕಾನೂನಿನಲ್ಲಿ ಸಾಕಷ್ಟು ತಿದ್ದುಪಡಿಗಳಿವೆ.
ಮದುವೆಯ ನಂತರ ಮಗಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಹಕ್ಕಿದೆ
ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ ಹೆಣ್ಣು ಮಕ್ಕಳಿಗೆ ಆಸ್ತಿಯ ಪಾಲುದಾರಿಕೆ ನೀಡಲು ಸಾಕಷ್ಟು ತಿದ್ದುಪಡಿಗಳನ್ನು ತರಲಾಗಿದೆ. 2005 ರಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕನ್ನು ತರಲು ಕಾಯ್ದೆಯನ್ನು ತರಲಾಯಿತು.
ತಂದೆಯ ಆಸ್ತಿಯಲ್ಲಿ ಮಗ ಎಷ್ಟು ಹಕ್ಕನ್ನು ಹೊಂದಿರುತ್ತಾನೋ ಅಷ್ಟೇ ಹಕ್ಕನ್ನು ಮಗಳು ಕೂಡ ಹೊಂದಿರುತ್ತಾಳೆ. ಇನ್ನು ಹೆಣ್ಣು ಮದುವೆಯಾದ ಮಾತ್ರಕ್ಕೆ ತನ್ನ ತಂದೆಯ ಮನೆಯ ಆಸ್ತಿಯ ಅಧಿಕಾರವನ್ನು ಕಳೆದುಕೊಳ್ಳುವುದಿಲ್ಲ. ಭಾರತೀಯ ಕಾನೂನಿನ ಪ್ರಕಾರ ಹೆಣ್ಣು ಮಗಳು ಮದುವೆಯಾದ ಮೇಲು ತನ್ನ ತವರಿನ ಆಸ್ತಿಯಲ್ಲಿ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತಾಳೆ.
ತಂದೆಯ ಸ್ವಯಾರ್ಜಿತ ಆಸ್ತಿ, ಪಿತ್ರಾಜಿತ ಆಸ್ತಿ ಎರಡಲ್ಲೂ ಕೂಡ ಹೆಣ್ಣು ಮಕ್ಕಳು ಮದುವೆಯ ನಂತರ ತನ್ನ ಆಸ್ತಿ ಹಕ್ಕನ್ನು ಪಡೆಯುತ್ತಾರೆ. ಆದರೆ ತಂದೆಯು ತನ್ನ ಸ್ವಯಾರ್ಜಿತ ಆಸ್ತಿಯನ್ನು ತನ್ನ ಗಂಡು ಮಕ್ಕಳಿಗೆ ಸೇರಬೇಕೆಂದು ವಿಲ್ ಬರೆದಿಟ್ಟರೆ ಹೆಣ್ಣು ಮಕ್ಕಳಿಗೆ ಆ ಆಸ್ತಿಯ ಮೇಲೆ ಯಾವುದೇ ರೀತಿಯ ಹಕ್ಕಿರುವುದಿಲ್ಲ.
ಗಂಡನ ಮನೆಯ ಆಸ್ತಿಯಲ್ಲಿ ಹೆಂಡತಿಯ ಹಕ್ಕು
ಹೆಣ್ಣು ಮಕ್ಕಳಿಗೆ ತನ್ನ ತಂದೆಯ ಆಸ್ತಿಯಲ್ಲಿ ತಮ್ಮ ಸಹೋದರರಿಗೆ ಎಷ್ಟು ಪಾಲು ಇದೆಯೋ ಅದೇ ರೀತಿ ಅವರಿಗೆ ಸಹ ಇರುತ್ತದೆ. ಆದರೆ ಗಂಡನ ಮನೆಯ ಆಸ್ತಿಯಲ್ಲಿ ಅದು ಪಿತ್ರಾಜ್ರಿತ ಆಸ್ತಿಯಾಗಿದ್ದರೆ ಹೆಣ್ಣು ಮಕ್ಕಳಿಗೆ ಆ ಆಸ್ತಿಯಲ್ಲಿ ಪಾಲು ಇರುವುದಿಲ್ಲ.
ತನ್ನ ಗಂಡನಿಗೆ ಅವರ ಮನೆಯಲ್ಲಿ ಎಷ್ಟು ಪಾಲು ಸಿಗುತ್ತದೆಯೋ ಅಷ್ಟೇ ಆಗಿರುತ್ತದೆ. ತನ್ನ ಗಂಡನ ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿಯು ತನ್ನ ಹಕ್ಕನ್ನು ಪಡೆಯುತ್ತಾಳೆ. ಅತ್ತೆ ಮತ್ತು ಮಾವನ ಆಸ್ತಿಯ ಮೇಲೆ ಸೊಸೆಗೆ ಹಕ್ಕಿರುವುದಿಲ್ಲ. ಮಾವನ ಮನೆಯಲ್ಲಿ ತನ್ನ ಗಂಡನ ಮರಣದ ನಂತರ ಸೊಸೆಗೆ ಆಸ್ತಿಯಲ್ಲಿ ಪಾಲು ಸಿಗುತ್ತದೆ.