Reason why a son does not get a share in his father’s property: ಭಾರತದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಗೊಂದಲಗಳಿವೆ. ಆಸ್ತಿ ವಿಚಾರಕ್ಕಾಗಿ ಕುಟುಂಬಗಳ ಮಧ್ಯೆ ನೆಡೆಯುವ ಜಗಳ, ಗಲಾಟೆ, ಮನಸ್ತಾಪಗಳಿಗಾಗಿ ಭಾರತೀಯ ಕಾನೂನು ಆಸ್ತಿ ಹಸಿಕೆಗೆ ಸಂಬಂಧಿಸಿದಂತೆ ಹಿಂದೂ ಉತ್ತರಾಧಿಕಾರ ನಿಯಮದಲ್ಲಿ ಕೂಡ ಅನೇಕ ಬದಲಾವಣೆ ಮಾಡಿರುವುದನ್ನು ನಾವು ಗಮನಿಸಬಹುದು. ಇದೀಗ ತಂದೆ ಮತ್ತು ತಾಯಿಯ ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ದೇಶದಲ್ಲಿ ಹೊಸ ನಿಯಮ ಜಾರಿಗೆ ತಂದಿದೆ. ಕೋರ್ಟ್ ಆದೇಶ ಪ್ರಕಾರ, ಇನ್ನುಮುಂದೆ ಮಕ್ಕಳದವರು ಹೆತ್ತವರ ಆಸ್ತಿಯಲ್ಲಿ ಕೆಲವು ಸಂದರ್ಭದಲ್ಲಿ ಯಾವುದೇ ಪಾಲು ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಹೆತ್ತವರ ಆಸ್ತಿಗೆ ಸಂಬಂಧಿಸಿದಂತೆ ಕೋರ್ಟ್ ಹೊರಡಿಸಿರುವ ಆದೇಶ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಿಂದೂ ಉತ್ತರಾಧಿಕಾರ ಕಾಯ್ದೆ
1956 ರ ಹಿಂದೂ ಉತ್ತರಾಧಿಕಾರ ಕಾಯ್ದೆ ಪ್ರಕಾರ ಪಿತ್ರರ್ಜಿತ ಆಸ್ತಿಯಲ್ಲಿ, ಅಂದರೆ ಪೂರ್ವಜರಿಂದ ಬಂದ ಆಸ್ತಿಯಲ್ಲಿ ತಂದೆ ಜೀವಂತವಾಗಿದ್ದರೂ ಅಥವಾ ಜೀವಂತವಾಗಿಲ್ಲದಿದ್ದರೂ ಕೂಡ ಮೊಮ್ಮಕ್ಕಳು ಪಿತ್ರಾರ್ಜಿತ ಆಸ್ತಿಗೆ ಜನ್ಮಸಿದ್ದ ಹಕ್ಕನ್ನು ಹೊಂದಿರುತ್ತಾರೆ. ಆದರೆ ಸ್ವಯಾರ್ಜಿತ ಆಸ್ತಿಯಲ್ಲಿ, ಅಂದರೆ ತಂದೆ ತನ್ನ ಸ್ವಂತ ಸಂಪಾದನೆಯಿಂದ ಗಳಿಸಿದ ಆಸ್ತಿಯಲ್ಲಿ ಮಕ್ಕಳಿಗೆ ಯಾವುದೇ ಹಕ್ಕು ಇರುವುದಿಲ್ಲ. ತಂದೆ ತನ್ನ ಆಸ್ತಿಯನ್ನು ಯಾರಿಗೆ ಬೇಕಾದರೂ ದಾನ ಮಾಡಬಹುದಾಗಿದೆ. ತಂದೆ ವಿಲ್ ಬರೆಯುವುದರ ಮೂಲಕ ಅಥವಾ ತಾನು ಜೀವಂತವಾಗಿದ್ದ ಸಮಯದಲ್ಲಿ ತಾನು ಸಂಪಾದನೆ ಮಾಡಿದ ಆಸ್ತಿಯನ್ನು ಯಾರಿಗೆ ಬೇಕಾದರೂ ದಾನ ಮಾಡುವ ಅಧಿಕಾರ ಹೊಂದಿರುತ್ತಾರೆ.
ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007
ಇದು ಭಾರತೀಯ ಕಾನೂನಾಗಿದ್ದು, ವಯಸ್ಕ ಮಕ್ಕಳು ಮತ್ತು ಉತ್ತರಾಧಿಕಾರಿಗಳು ತಮ್ಮ ಪೋಷಕರು ಮತ್ತು ತಮ್ಮನ್ನು ತಾವು ಪೋಷಿಸಿಕೊಳ್ಳಲು ಸಾಧ್ಯವಾಗದ ಹಿರಿಯ ನಾಗರಿಕರಿಗೆ ಆರ್ಥಿಕ ಬೆಂಬಲ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ತ್ವರಿತ ನ್ಯಾಯಮಂಡಳಿಗಳ ಮೂಲಕ ಅವರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವುದು ಇದರ ಮುಖ್ಯ ಕರ್ತವ್ಯವಾಗಿದೆ. ಒಂದುವೇಳೆ ಮಕ್ಕಳದವರು ಪೋಷಕರ ಆರೈಕೆ ಮಾಡದೆ ಇದ್ದರೆ ಪೋಷಕರು ಮಕ್ಕಳಿಗೆ ಕೊಟ್ಟ ಆಸ್ತಿಯನ್ನು ಮರಳಿ ಪಡೆದುಕೊಳ್ಳುವ ಅಧಿಕಾರ ಹೊಂದಿರುತ್ತಾರೆ. ಅಂದರೆ ಪೋಷಕರು ದಾನಪತ್ರ ರದ್ದುಪಡಿಸಬಹುದು.
ಪೋಷಕರು ದಾನಪತ್ರ ರದ್ದು ಮಾಡಬಹುದು
2007 ರ Maintenance and Welfare of Parents and Senior Citizens Act, sec 23 (Fraudulent transfer of property) ಅಡಿಯಲ್ಲಿ ದಾನಪತ್ರವನ್ನು ರದ್ದುಗೊಳಿಸಬಹುದಾಗಿದೆ. ಹಿರಿಯ ನಾಗರಿಕರು ಆಸ್ತಿಯನ್ನು ಎಲ್ಲಿ ದಾನ ಅಥವಾ ಮಾರಾಟ ಮಾಡಿದ್ದಾರೋ ಮತ್ತು ಆ ಒಪ್ಪಂದದಲ್ಲಿ (ಲಿಖಿತ ಅಥವಾ ಮೌಖಿಕ) ನಿರ್ವಹಣೆಯ ಭರವಸೆ ಇದ್ದರೆ, ಆದರೆ ಮಗ / ಮಗಳು ಅಥವಾ ಸಂಬಂಧಿ ಆ ಭರವಸೆಯನ್ನು ಉಲ್ಲಂಘಿಸಿದರೆ ಆ ದಾನವನ್ನು ವಂಚನಾತ್ಮಕ (fraudulent) ಎಂದು ಪರಿಗಣಿಸಿ ರದ್ದುಗೊಳಿಸಬಹುದಾಗಿದೆ.
ದಾನಪತ್ರ ರದ್ದು ಮಾಡಲು ಬೇಕಾಗಿರುವ ದಾಖಲೆ
* ಗಿಫ್ಟ್ ಡೀಡ್ ಅಥವಾ ವಿಲ್ ಪ್ರತಿ
* ಆಧಾರ್ ಕಾರ್ಡ್
* ಪಾನ್ ಕಾರ್ಡ್
* ವಯಸ್ಸಿನ ಪ್ರಮಾಣ ಪತ್ರ
* ಬ್ಯಾಂಕ್ Statement
* ವೈದ್ಯಕೀಯ ಬಿಲ್
ತಂದೆಯ ಆಸ್ತಿಯಲ್ಲಿ ಮಗನಿಗೆ ಯಾವಾಗ ಹಕ್ಕು ಇರುವುದಿಲ್ಲ?
ಕಾನೂನಿನ ಪ್ರಕಾರ ಮಗನ ಹಕ್ಕು ಇರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಆಸ್ತಿಯ ಭಾಗವನ್ನು ಕಳೆದುಕೊಳ್ಳಬಹುದು. ತಂದೆ ಸ್ವಯಾರ್ಜಿತ ಆಸ್ತಿಯಲ್ಲಿ ದತ್ತು ತೆಗೆದುಕೊಂಡ ಮಗನಿಗೂ ಸಮಾನ ಹಕ್ಕು ಇದೆ. ಆದರೆ ತಂದೆ ವಿಲ್ ಬರೆದಿಟ್ಟಿದರೆ ಮಗನಿಗೆ ಯಾವುದೇ ಹಕ್ಕು ಇರುವುದಿಲ್ಲ. ತಂದೆ ತನ್ನ ಸ್ವಂತ ಸಂಪಾದನೆಯಿಂದ ಗಳಿಸಿದ ಆಸ್ತಿಯನ್ನು ಯಾರಿಗೆ ಬೇಕಾದರೂ ದಾನ ಮಾಡಬಹುದಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

