Property Rights Details: ದೇಶದಲ್ಲಿ ಆಸ್ತಿ ತಕರಾರುಗಳು ಸಾಮಾನ್ಯವಾಗಿದೆ ಮತ್ತು ಆಸ್ತಿ ಹಂಚಿಕೆಯ ವಿಷಯವಾಗಿ ಈಗಾಗಲೇ ದೇಶದ ಕಾನೂನಿನಲ್ಲಿ ಹಲವು ನಿಯಮಗಳು ಜಾರಿಯಲ್ಲಿ ಇದೆ. ಇದರ ನಡುವೆ ತಂದೆಯ ಆಸ್ತಿಯಲ್ಲಿ ಮಕ್ಕಳಿಗೆ ಎಷ್ಟು ಹಕ್ಕಿದೆ ಮತ್ತು ತಂದೆಯ ಯಾವ ಆಸ್ತಿಯಲ್ಲಿ ಮಾತ್ರ ಎಲ್ಲಾ ಮಕ್ಕಳು ಕಾನೂನುಬದ್ಧ ಹಕ್ಕು ಪಡೆದುಕೊಳ್ಳಬಹುದು ಅನ್ನುವ ಪ್ರಶ್ನೆ ಇತ್ತೀಚಿಗೆ ಹಲವು ಜನರಲ್ಲಿ ಕಾಡುತ್ತಿದೆ. ನಾವೀಗ ತಂದೆಯ ಯಾವ ಆಸ್ತಿಯಲ್ಲಿ ಎಲ್ಲಾ ಮಕ್ಕಳಿಗೆ ಕಾನೂನುಬದ್ಧ ಹಕ್ಕಿದೆ ಮತ್ತು ತಂದೆಯ ಆಸ್ತಿಗೆ ಸಂಬಂಧಿಸಿದಂತೆ ಭಾರತದ ಕಾನೂನು ಹೇಳುವುದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಹಿಂದೂ ಉತ್ತರಾಧಿಕಾರ ಕಾಯಿದೆ
ಹಿಂದೂ ಉತ್ತರಾಧಿಕಾರ ಕಾಯಿದೆ ಪ್ರಕಾರ, ಆಸ್ತಿ ಹಂಚಿಕೆಯಲ್ಲಿ ಹಲವು ವಿಧಗಳು ಇರುವುದನ್ನು ನಾವು ಗಮನಿಸಬಹುದು. ಆಸ್ತಿಯಲ್ಲಿ ಎರಡು ವಿಧಾನಗಳು ಮತ್ತು ಒಂದು ಪಿತ್ರಾರ್ಜಿತ ಆಸ್ತಿ, ಇನ್ನೊಂದು ಸ್ವಯಾರ್ಜಿತ ಆಸ್ತಿ. ಪಿತ್ರಾರ್ಜಿತ ಆಸ್ತಿ ಅಂದರೆ, ಪೂರ್ವಜರಿಂದ ಬಂದ ಆಸ್ತಿಯಾಗಿರುತ್ತೆ. ಸ್ವಯಾರ್ಜಿತ ಆಸ್ತಿ ಅಂದರೆ ತಂದೆ ಅಥವಾ ತಾಯಿ ತನ್ನ ಸ್ವಂತ ಹಣದಲ್ಲಿ ಖರೀದಿ ಮಾಡಿದ ಆಸ್ತಿಯಾಗಿರುತ್ತದೆ.
ಪಿತ್ರಾರ್ಜಿತ ಆಸ್ತಿಯಲ್ಲಿ ಎಲ್ಲರಿಗೂ ಸಮಪಾಲು
ಪಿತ್ರಾರ್ಜಿತ ಆಸ್ತಿ ಅಥವಾ ಪೂರ್ವಿಕರ ಆಸ್ತಿ ಅಂದರೆ, ನಾಲ್ಕು ಪೀಳಿಗೆಗಳಿಂದ ಬಂದಿರುವ ಆಸ್ತಿ ಆಗಿರುತ್ತದೆ ಮತ್ತು ಈ ಆಸ್ತಿಯಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಸಮನಾದ ಪಾಲು ಇರುತ್ತದೆ. ಹಿಂದೂ ಉತ್ತರಾಧಿಕಾರ ಆಯಿದೆ 1956 ರ ಪ್ರಕಾರ, ಪಿತ್ರಾರ್ಜಿತ ಆಸ್ತಿಯಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ಸಮಾನವಾದ ಪಾಲು ಪಡೆದುಕೊಂಡಿರುತ್ತಾರೆ. ಎಲ್ಲಾ ಮಕ್ಕಳು ಪಿತ್ರಾರ್ಜಿತ ಆಸ್ತಿಯಲ್ಲಿ ಜನ್ಮಸಿದ್ಧ ಹಕ್ಕು ಪಡೆದುಕೊಂಡಿರುತ್ತಾರೆ. 2005 ರ ಕೆಲವು ಬದಲಾವಣೆಯ ನಂತರ ಮಗಳಿಗೂ ಕೂಡ ಪಿತ್ರಾರ್ಜಿತ ಆಸ್ತಿಯಲ್ಲಿ ಸಮನಾದ ಪಾಲು ಸಿಗುವಂತೆ ಕಾನೂನು ನಿಯಮ ಜಾರಿಗೆ ತರಲಾಗಿದೆ. ಒಂದುವೇಳೆ ವಿಲ್ ಬರೆದರೂ ಕೂಡ ಆಸ್ತಿ ಸಮಾನವಾಗಿ ಹಂಚಿಕೆಯಾಗಬೇಕಾಗುತ್ತದೆ. ಒಬ್ಬ ಮಗ ಮರಣ ಹೊಂದಿದ್ದರೂ ಕೂಡ ಆತನ ಮಕ್ಕಳು ಆಸ್ತಿಯಲ್ಲಿ ಪಾಲು ಪಡೆದುಕೊಳ್ಳುವ ಅಧಿಕಾರ ಹೊಂದಿರುತ್ತಾರೆ.
ಸ್ವಯಾರ್ಜಿತ ಆಸ್ತಿ ಅಂದರೆ ಏನು?
ಸ್ವಯಾರ್ಜಿತ ಆಸ್ತಿ ಅಂದರೆ, ತಂದೆ ಅಥವಾ ತಾಯಿ ತನ್ನ ಸ್ವಂತ ಹಣದಲ್ಲಿ ಖರೀದಿ ಮಾಡಿದ ಆಸ್ತಿ ಆಗಿರುತ್ತದೆ ಅಥವಾ ಉಡುಗೊರೆಯಾಗಿ ಪಡೆದುಕೊಂಡ ಆಸ್ತಿಯಾಗಿರುತ್ತದೆ. ಇಲ್ಲಿ ತಂದೆ ಮತ್ತು ತಾಯಿಗೆ ಪೂರ್ಣ ಸ್ವಾತಂತ್ರ್ಯ ಇರುತ್ತದೆ. ಕಾಯ್ದೆಯ 30ನೇ ವಿಭಾಗದಂತೆ ತಂದೆ ಅಥವಾ ತಾಯಿ ಈ ಆಸ್ತಿಯನ್ನು ವಿಲ್ ಮೂಲಕ ಯಾರಿಗೂ ಕೊಡಬಹುದು, ಅಂದರೆ ಮಕ್ಕಳು, ರಿಸ್ತೇದಾರರು ಅಥವಾ ಬಾಹ್ಯವ್ಯಕ್ತಿಗಳು.
ಆಸ್ತಿ ಮಾಡಿಟ್ಟವರಿಗೆ ಕಾನೂನು ಸಲಹೆಗಳು
ಕುಟುಂಬದಲ್ಲಿ ಎಷ್ಟು ಮಕ್ಕಳಿದ್ದರೂ, ಆಸ್ತಿಯ ಬಗ್ಗೆ ಮುಂಚಿತವಾಗಿ ಚರ್ಚೆ ಮಾಡಿ. ವಿಲ್ ರಿಜಿಸ್ಟರ್ ಮಾಡಿ, ಉಡುಗೆಗಳನ್ನು ಡೀಡ್ ಮೂಲಕ ದಾಖಲಿಸಿ. ಈ ರೀತಿಯಲ್ಲಿ ವಿಲ್ ಬರೆಯುವುದರಿಂದ ಭವಿಷ್ಯದಲ್ಲಿ ಆಗುವ ಕೆಲವು ಸಮಸ್ಯೆಗಳು ನಿವಾರಣೆ ಆಗುತ್ತದೆ. ಕೆಲವೊಮ್ಮೆ ಆಸ್ತಿಯ ವಿಧ ತಪ್ಪು ಗ್ರಹಿಕೆಯಿಂದ. ಪೂರ್ವೀಕರ ಆಸ್ತಿಯನ್ನು ಸ್ವಸಂಪಾದಿತ ಎಂದು ತಪ್ಪು ಮಾಡಿದರೆ, ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ಸ್ವಯಾರ್ಜಿತ ಆಸ್ತಿ ಹಂಚಿಕೆ ಸಮಯದಲ್ಲಿ ವಿಲ್ ಬರೆಯದೆ ಇದ್ದರೂ ಕೂಡ ಕೆಲವು ಸಮಸ್ಯೆ ಎದುರಿಸಬೇಕಾಗುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

