FD Interest: ದೇಶದ ಈ 6 ಬ್ಯಾಂಕುಗಳ ಬಡ್ಡಿ ದರದಲ್ಲಿ ದೊಡ್ಡ ಬದಲಾವಣೆ, ಹಣ ಮತ್ತು FD ಇಟ್ಟವರಿಗೆ ಗುಡ್ ನ್ಯೂಸ್.
Reserve Bank Of India ಸ್ಥಿರ ಠೇವಣಿ ಬಡ್ಡಿದರದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ.
FD Interest Rate Changes From October 1st: ಸದ್ಯ ದೇಶದಲ್ಲಿ ಕೇಂದ್ರ ಬ್ಯಾಂಕ್ ಅನೇಕ ಹೊಸ ಹೊಸ ನಿಯಮವನ್ನು ಪರಿಚಯಿಸುತ್ತಿದೆ. RBI ಬ್ಯಾಂಕ್ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯವನ್ನು ನೀಡಲು ಮುಂದಾಗಿದೆ. ಇತ್ತೀಚೆಗಷ್ಟೇ RBI ಬ್ಯಾಂಕ್ ಸಾಲದ ವಿಷಯವಾಗಿ ಸಾಕಷ್ಟು ಬದಲಾವಣೆಯನ್ನು ತಂದಿದೆ.
RBI ಹೊಸ ಸಾಲದ ನಿಯಮಗಳು ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೆ ಸ್ವಲ್ಪ ಪ್ರಮಾಣದಲ್ಲಿ ಸಾಲದ ಹೊರೆಯನ್ನು ಕಡಿಮೆ ಮಾಡಿದೆ ಎನ್ನಬಹುದು. ಇನ್ನು RBI ಇನ್ನು ತನ್ನ Repo ದರವನ್ನು ಬದಲಿಸಿಲ್ಲ.
October 1 ರಿಂದ FD ದರದಲ್ಲಿ ಮಹತ್ವದ ಬದಲಾವಣೆ
ಪ್ರಸ್ತುತ RBI 6.50 % ರೆಪೊ ದರವನ್ನು ವಿಧಿಸಿದೆ. ದೇಶದಲ್ಲಿ ಜನರು ಹಣದುಬ್ಬರದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕರಣ ಜನರಿಗೆ ಹೆಚ್ಚಿನ ಆರ್ಥಿಕ ಹೊರೆ ನೀಡಬಾರದು ಎನ್ನುವ ಕಾರಣ RBI ತನ್ನ ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಸದ್ಯ Reserve Bank Of India ಸ್ಥಿರ ಠೇವಣಿ ಬಡ್ಡಿದರದಲ್ಲಿ (Fixed Deposit) ಮಹತ್ವದ ಬದಲಾವಣೆಯನ್ನು ತಂದಿದೆ. ದೇಶದ ಈ 6 ಬ್ಯಾಂಕುಗಳ ಬಡ್ಡಿ ದರದಲ್ಲಿ ದೊಡ್ಡ ಬದಲಾವಣೆ ತರಲು RBI ನಿರ್ಧರಿಸಿದೆ. ಈ ಎಲ್ಲ ಬಡ್ಡಿದರಗಳು October 1 ರಿಂದಲೇ ಜಾರಿಯಾಗಲಿದೆ.
ದೇಶದ ಈ 6 ಬ್ಯಾಂಕುಗಳ ಬಡ್ಡಿ ದರದಲ್ಲಿ ದೊಡ್ಡ ಬದಲಾವಣೆ
*HDFC Bank
ಖಾಸಗಿ ವಲಯದ HDFC Bank ಎರಡು ವಿಶೇಷ ಅವಧಿಗಳಿಗಾಗಿ ಸ್ಥಿರ ಠೇವಣಿ ಬಡ್ಡಿ ದರಗಳನ್ನು ಕಡಿತಗೊಳಿಸಿದೆ. ಈ ವಿಶೇಷ ಅಧಿಕಾರಾವಧಿಯು 35 ಮತ್ತು 55 ತಿಂಗಳುಗಳಾಗಿರುತ್ತದೆ. ಬ್ಯಾಂಕ್ FD ಮೇಲೆ 3 ಪ್ರತಿಶತದಿಂದ 7.15 ಪ್ರತಿಶತದ ವರೆಗೆ ಬಡ್ಡಿಯನ್ನು ನೀಡುತ್ತಿದೆ.
*Bank Of India
ಇನ್ನು Bank Of India 2 ಕೋಟಿಗಿಂತ ಕಡಿಮೆ ಹೂಡಿಕೆಯ ಮೇಲಿನ FD ಬಡ್ಡಿಯನ್ನು ಪರಿಷ್ಕರಿಸಿದೆ. ಈ ಬದಲಾವಣೆಯ ನಂತರ ಬ್ಯಾಂಕಿನ FD ಬಡ್ಡಿಯು 3 ಪ್ರತಿಶತದಿಂದ 7.25 ಪ್ರತಿಶತಕ್ಕೆ ಹೆಚ್ಚಾಗಿದೆ. ಅದರ ಅವಧಿಯು 7 ರಿಂದ 10 ವರ್ಷಗಳವರೆಗೆ ಇರುತ್ತದೆ.
*Punjab and Sindh Bank
ದೇಶದ ಪ್ರತಿಷ್ಠಿತ ಖಾಸಗಿ ವಲಯದ ಬ್ಯಾಂಕ್ ಆಗಿರುವ Punjab and Sindh Bank 2 ಕೋಟಿಗಿಂತ ಕಡಿಮೆ ಹೂಡಿಕೆಯ ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸಿದೆ. ಈ ಬ್ಯಾಂಕುಗಳು 7 ದಿನಗಳಿಂದ 10 ವರ್ಷಗಳ ಅವಧಿಗೆ 2.80 ರಿಂದ 7.40 ಪ್ರತಿಶತದವರೆಗೆ ಬಡ್ಡಿಯನ್ನು ನೀಡುತ್ತಿವೆ.
*IDFC First Bank
IDFC First Bank 2 ಕೋಟಿ ರೂಪಾಯಿ ಹೂಡಿಕೆಯ ಮೇಲಿನ ಬಡ್ಡಿ ದರವನ್ನೂ ಪರಿಷ್ಕರಿಸಿದೆ. ಈ ಬದಲಾವಣೆಯೊಂದಿಗೆ ಬ್ಯಾಂಕ್ 3 ರಿಂದ 7.50 ರಷ್ಟು ಬಡ್ಡಿ ನೀಡುತ್ತಿದೆ. ಇದು ಏಳು ದಿನಗಳಿಂದ 10 ವರ್ಷಗಳ ಅವಧಿಗೆ ಬಡ್ಡಿಯನ್ನು ನೀಡುತ್ತಿದೆ.
*IndusInd Bank
ಇನ್ನು IndusInd Bank ಏಳು ದಿನಗಳಿಂದ 10 ವರ್ಷಗಳ FD ಮೇಲೆ 3.50 ಪ್ರತಿಶತದಿಂದ 7.85 ಪ್ರತಿಶತದವರೆಗೆ ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ IndusInd Bank FD ಮೇಲೆ 8.25 ಪ್ರತಿಶತದ ವರೆಗೆ ಬಡ್ಡಿಯನ್ನು ನೀಡುತ್ತಿದೆ.
*Karnataka Bank
ಇನ್ನು Karnataka Bank 7 ದಿನಗಳಿಂದ 10 ವರ್ಷಗಳ ಎಫ್ಡಿ ಮೇಲೆ ಶೇಕಡಾ 3.50 ಮತ್ತು ಶೇಕಡಾ 7.25 ರ ಬಡ್ಡಿಯನ್ನು ನೀಡುತ್ತಿದೆ.