February Holiday: ಫೆಬ್ರವರಿ ತಿಂಗಳಲ್ಲಿ ಬರೋಬ್ಬರಿ 11 ದಿನ ಎಲ್ಲಾ ಬ್ಯಾಂಕುಗಳು ಬಂದ್, ಇಲ್ಲಿದೆ ಬ್ಯಾಂಕ್ ರಜಾ ವಿವರ

ಫೆಬ್ರವರಿ ತಿಂಗಳಿನ ರಜಾ ದಿನಗಳ ಪಟ್ಟಿ ಬಿಡುಗಡೆ

February 2024 Bank Holiday: ಸದ್ಯ 2024 ರ ಜನವರಿ ತಿಂಗಳು ಮುಗಿಯಲು ಇನ್ನೇನು ಕೇವಲ 5 ದಿನಗಳು ಮಾತ್ರ ಬಾಕಿ ಇವೆ. ಜನವರಿಯಲ್ಲಿ ಸಾಕಷ್ಟು ಹೊಸ ಹೊಸ ನಿಯಮಗಳು ಜಾರಿಯಾಗಿವೆ. ಇನ್ನು ಜನವರಿ ತಿಂಗಳ ಬ್ಯಾಂಕ್ ರಜಾ ದಿನಗಳ ಬಗ್ಗೆ RBI ಈಗಾಗಲೇ ಮಾಹಿತಿ ಹೊರಡಿಸಿದೆ. ಸದ್ಯ ಜನವರಿ ತಿಂಗಳು ಮುಗಿದು ಫೆಬ್ರವರಿ ಆರಂಭವಾಗಲಿದೆ. ಇದೀಗ RBI ಫೆಬ್ರವರಿ ತಿಂಗಳಿನ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

February 2024 Bank Holiday
Image Credit: newsncr

ಫೆಬ್ರವರಿ ತಿಂಗಳಲ್ಲಿ ಇಷ್ಟು ದಿನಗಳು ಬ್ಯಾಂಕ್ ಬಂಧ್
ಬ್ಯಾಂಕ್ ನಲ್ಲಿ ವಹಿವಾಟು ನಡೆಸುವವರು ಬ್ಯಾಂಕ್ ರಜಾ ದಿನಗಳ ಬಗ್ಗೆ ಮಾಹಿತಿ ತಿಳಿಯುವುದು ಅಗತ್ಯ. ಫೆಬ್ರವರಿಯಲ್ಲಿ 2024 ರಲ್ಲಿ ಕೇವಲ 29 ದಿನಗಳು ಮಾತ್ರ ಇರಲಿದೆ. ಅದರಲ್ಲಿ 11 ದಿನಗಳು ಬ್ಯಾಂಕ್ ಬಂಧ್ ಆಗಲಿದೆ. ದೇಶದಲ್ಲಿ 11 ದಿನಗಳು ಗ್ರಾಹಕರಿಗೆ ಬ್ಯಾಂಕ್ ಸೇವೆ ಲಭ್ಯವಾಗುವುದಿಲ್ಲ. ಬದಲಾಗಿ ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗ್ರಾಹಕರು ಬಳಸಿಕೊಳ್ಳಬಹುದು. ಇದೀಗ ನಾವು ಈ ಲೇಖನದಲ್ಲಿ ಫೆಬ್ರವರಿ ತಿಂಗಳಿನ ರಜಾ ದಿನಗಳ ವಿವರವನ್ನು ತಿಳಿಯೋಣ.

ಬ್ಯಾಂಕ್ ರಜಾ ದಿನದ ವಿವರ ಇಲ್ಲಿದೆ
February 4, ಭಾನುವಾರದ ಕಾರಣ ಬ್ಯಾಂಕ್‌ ಗಳಿಗೆ ಸಾರ್ವಜನಿಕ ರಜೆ ಇರುತ್ತದೆ.

February 10, ಎರಡನೇ ಶನಿವಾರದ ಕಾರಣ ಈ ದಿನ ಬ್ಯಾಂಕ್‌ ಗಳಿಗೆ ರಜೆ ಇರುತ್ತದೆ.

February 11, ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

Join Nadunudi News WhatsApp Group

February 14, ಬಸಂತ್ ಪಂಚಮಿ ಅಥವಾ ಸರಸ್ವತಿ ಪೂಜೆಯ ಕಾರಣ ತ್ರಿಪುರಾ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್‌ ಗಳು ಮುಚ್ಚಲ್ಪಡುತ್ತವೆ.

Bank Holidays In 2024
Image Credit: News 24

February 15, ಲುಯಿ ನಗಾಯಿ ನೀ ಕಾರಣ ಈ ದಿನ ಮಣಿಪುರದಲ್ಲಿ ಬ್ಯಾಂಕ್ ರಜೆ ಇರುತ್ತದೆ.

February 18, ಈ ದಿನ ಭಾನುವಾರದ ಕಾರಣ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

February 19, ಈ ದಿನ, ಛತ್ರಪತಿ ಶಿವಾಜಿ ಜಯಂತಿಯ ಕಾರಣ ಮಹಾರಾಷ್ಟ್ರದಲ್ಲಿ ಬ್ಯಾಂಕ್ ರಜೆ ಇರುತ್ತದೆ.

February 20, ಈ ದಿನ, ರಾಜ್ಯ ದಿನದ ಕಾರಣ ಮಿಜೋರಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಬ್ಯಾಂಕ್ ರಜೆ ಇರುತ್ತದೆ.

February 24, ಎರಡನೇ ಶನಿವಾರದ ಕಾರಣ ಈ ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

February 25, ಭಾನುವಾರದ ಕಾರಣ ಈ ದಿನ ಬ್ಯಾಂಕ್‌ಗಳಿಗೆ ಸಾರ್ವಜನಿಕ ರಜೆ ಇರುತ್ತದೆ.

February 26, ನ್ಯೋಕಮ್ ಕಾರಣ ಈ ದಿನ ಅರುಣಾಚಲ ಪ್ರದೇಶದಲ್ಲಿ ಬ್ಯಾಂಕ್ ರಜೆ ಇರುತ್ತದೆ.

Join Nadunudi News WhatsApp Group