Bank Holiday: ಮುಂದಿನ ತಿಂಗಳು 11 ದಿನಗಳು ಬ್ಯಾಂಕ್ ಬಾಗಿಲು ಬಂದ್, ಬೇಗ ಬ್ಯಾಂಕ್ ಕೆಲಸ ಮುಗಿಸಿಕೊಳ್ಳಿ

ಫೆಬ್ರವರಿ ತಿಂಗಳಲ್ಲಿ ಬ್ಯಾಂಕ್ ಗಳು ಇಷ್ಟು ದಿನ ಮುಚ್ಚಲ್ಪಟ್ಟಿರುತ್ತದೆ, ಬೇಗ ಕೆಲಸ ಮುಗಿಸಿಕೊಳ್ಳಿ

February Bank Holiday 2024: ಫೆಬ್ರವರಿ ತಿಂಗಳಲ್ಲಿ ಹಲವು ಸರಕಾರಿ ರಜೆಗಳಿದ್ದು, ಬ್ಯಾಂಕ್ ಗಳು ಅನೇಕ ದಿನ ಮುಚ್ಚಲ್ಪಟ್ಟಿರುತ್ತದೆ. ಈಗಾಗಲೇ ಬ್ಯಾಂಕ್ ನ ರಜೆ ವೇಳಾಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬಿಡುಗಡೆ ಮಾಡಿದ್ದೂ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ರಜಾ ಪಟ್ಟಿಯ ಪ್ರಕಾರ, ಫೆಬ್ರವರಿ ತಿಂಗಳಲ್ಲಿ 11 ದಿನಗಳ ಕಾಲ ಭಾರತದ ಬ್ಯಾಂಕ್‌ಗಳು ಮುಚ್ಚಲಾಗುತ್ತದೆ. ಇವುಗಳಲ್ಲಿ ಭಾನುವಾರಗಳು ಮತ್ತು ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಕೂಡಾ ಸೇರಿದೆ.

Bank Holidays In February 2024
Image Credit: Informal News

ಆರ್‌ಬಿಐ ಬ್ಯಾಂಕ್ ರಜಾದಿನಗಳ ಪಟ್ಟಿಯು ಪ್ರಾದೇಶಿಕ ಆಧಾರದ ಮೇಲೆ ನಿರ್ಧರಿಸುತ್ತದೆ

ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಬ್ಯಾಂಕ್ ಗಳು ಒಟ್ಟು 11 ದಿನಗಳ ಕಾಲ ರಜೆಯಲ್ಲಿರುತ್ತವೆ.18 ದಿನಗಳು ಮಾತ್ರ ಕಾರ್ಯನಿರ್ವಹಿಸುತ್ತವೆ. ಹಬ್ಬ ಹರಿದಿನಗಳ ಹೊರತಾಗಿಯೂ ಇದಲ್ಲದೆ, ಆರ್‌ಬಿಐ ಯ ಬ್ಯಾಂಕ್ ರಜಾ ದಿನಗಳ ಪಟ್ಟಿಯು ಪ್ರಾದೇಶಿಕ ಆಧಾರದ ಮೇಲೆ ರಜಾ ದಿನಗಳನ್ನು ನಿರ್ಧರಿಸುತ್ತದೆ. ರಜಾ ದಿನಗಳ ಪಟ್ಟಿಯು ಒಂದು ರಾಜ್ಯದಿಂದ ಇನ್ನೊಂದಕ್ಕೆ ಬದಲಾಗುತ್ತದೆ. ಖಾಸಗಿ ಅಥವಾ ಸಾರ್ವಜನಿಕ ವಲಯದ ಬ್ಯಾಂಕುಗಳು ಆಗಲಿ ಈ ರಜಾ ದಿನಗಳಲ್ಲಿಯೂ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಚಾಲನೆಯಲ್ಲಿರುತ್ತದೆ.

ಫೆಬ್ರವರಿ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ

* ಫೆಬ್ರವರಿ 4, 2024: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲಿದೆ.

Join Nadunudi News WhatsApp Group

* ಫೆಬ್ರವರಿ 10, 2024: ಎರಡನೇ ಶನಿವಾರದ ಕಾರಣ ದೇಶದಾದ್ಯಂತ ಎಲ್ಲಾ ಬ್ಯಾಂಕ್‌ಗಳು ಮುಚ್ಚಲಿದೆ. ಗ್ಯಾಂಗ್‌ಟಾಕ್‌ನಲ್ಲಿ ಆಚರಿಸಲಾಗುವ ಹಬ್ಬವಾದ ಲೋಸರ್, ತಿಂಗಳ ಅದೇ ದಿನದಂದು ಬರುತ್ತದೆ.

* ಫೆಬ್ರವರಿ 11, 2024: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲಿದೆ.

* ಫೆಬ್ರವರಿ 14, 2024: ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ಸರಸ್ವತಿ ಪೂಜೆ ಎಂದು ಕರೆಯಲ್ಪಡುವ ಬಸಂತ್ ಪಂಚಮಿಯ ಕಾರಣ ತ್ರಿಪುರಾ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದ ಎಲ್ಲಾ ಬ್ಯಾಂಕುಗಳು ಈ ದಿನಾಂಕದಂದು ಬಂದ್ ಆಗಿರುತ್ತದೆ.

2024 Bank Holiday
Image Credit: tv9hindi

* ಫೆಬ್ರವರಿ 15, 2024: ಲುಯಿ-ನ್ಗೈ-ನಿ ಕಾರಣದಿಂದಾಗಿ ಮಣಿಪುರದ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

* ಫೆಬ್ರವರಿ 18, 2024: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲಿದೆ.

* ಫೆಬ್ರವರಿ 19, 2024: ಛತ್ರಪತಿ ಶಿವಾಜಿ ಜಯಂತಿಯ ಕಾರಣ ಮಹಾರಾಷ್ಟ್ರದಲ್ಲಿ ಬ್ಯಾಂಕ್ ರಜೆ.

* ಫೆಬ್ರವರಿ 20, 2024: ಮಿಜೋರಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ತಮ್ಮ ರಾಜ್ಯ ದಿನಾಚರಣೆಯ ಕಾರಣ ಬ್ಯಾಂಕ್ ರಜೆ.

* ಫೆಬ್ರವರಿ 24, 2024: 4ನೇ ಶನಿವಾರದ ಕಾರಣ ರಾಷ್ಟ್ರದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

* ಫೆಬ್ರವರಿ 25, 2024: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲಿದೆ.

* ಫೆಬ್ರವರಿ 26, 2024: ನ್ಯೋಕಮ್ ಕಾರಣ ಅರುಣಾಚಲ ಪ್ರದೇಶದಲ್ಲಿ ಬ್ಯಾಂಕ್‌ಗಳಿಗೆ ರಜೆ. ಕರ್ನಾಟಕದಲ್ಲಿ ಯಾವೆಲ್ಲ ದಿನ ಬ್ಯಾಂಕ್ ಬಂದ್

* ಫೆಬ್ರವರಿ 4, 2024: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲಿದೆ.

February 2024 Bank Holiday
Image Credit: Original Source

* ಫೆಬ್ರವರಿ 10, 2024: ಎರಡನೇ ಶನಿವಾರದ ಕಾರಣ ದೇಶದಾದ್ಯಂತ ಎಲ್ಲಾ ಬ್ಯಾಂಕ್‌ಗಳು ಮುಚ್ಚಲಿದೆ.

* ಫೆಬ್ರವರಿ 11, 2024: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲಿದೆ.

* ಫೆಬ್ರವರಿ 18, 2024: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲಿದೆ.

* ಫೆಬ್ರವರಿ 24, 2024: 4ನೇ ಶನಿವಾರದ ಕಾರಣ ರಾಷ್ಟ್ರದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

* ಫೆಬ್ರವರಿ 25, 2024: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲಿದೆ ಹಾಗಾಗಿ ನಿಮ್ಮ ಬ್ಯಾಂಕ್ ನ ಕೆಲಸಗಳನ್ನುಆದಷ್ಟು ಬೇಗ ಮುಗಿಸಿಕೊಳ್ಳಿ.

Join Nadunudi News WhatsApp Group