Legal Notice: ಬಾಡಿಗೆ ಮನೆ ಹೊಂದಿರುವ ಇಂತಹ ಜನರಿಗೆ ಕೇಂದ್ರದಿಂದ ನೋಟೀಸ್, ದಂಡದ ಜೊತೆಗೆ ಜೈಲು ಶಿಕ್ಷೆ.

ಆದಾಯ ತೆರಿಗೆ ಪಾವತಿಸುವವರಿಗೆ ಕೊನೆಯ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ.

Income Tax Legal Notice: ಆದಾಯ ತೆರಿಗೆ ಇಲಾಖೆ ಐಟಿ ರಿಟರ್ನ್ (ITR) ಸಲ್ಲಿಕೆಯನ್ನು ಕಡ್ಡಾಯಗೊಳಿಸಿದೆ. ಐಟಿ ರಿಟರ್ನ್ ಸಲ್ಲಿಕೆಯಲ್ಲಿ ಕೂಡ ಆದಾಯ ಇಲಾಖೆ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಹಣಕಾಸು ವರ್ಷ 2022 -23 ರ ಐಟಿ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಯಾಗಿದೆ. ಜುಲೈ 31 ರ ವರೆಗೆ ಐಟಿ ರಿಟರ್ನ್ ಸಲ್ಲಿಕೆಯ ಸಮಯಾವಕಾಶವನ್ನು ನೀಡಲಾಗುತ್ತಿದೆ. ಈ ಬಾರಿ ಐಟಿ ರಿಟರ್ನ್ ಸಲ್ಲಿಕೆಗೆ ಗಡುವು ವಿಸ್ತರಣೆ ಆಗುವುದಿಲ್ಲ ಎಂದು ಆದಾಯ ಇಲಾಖೆ ಮಾಹಿತಿ ನೀಡಿದೆ.

ತೆರೆದಾರರು ತೆರಿಗೆ ಪಾವತಿಸುವ ಸಮಯದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಇನ್ನು ತೆರಿಗೆದಾರರಿಗೆ ಕೆಲವೊಮ್ಮೆ ಆದಾಯ ಇಲಾಖೆ ತೆರಿಗೆ ನೋಟಿಸ್ (Tax Notice) ಅನ್ನು ಕಳುಹಿಸುತ್ತದೆ. ತೆರಿಗೆ ಪಾವತಿಯಲ್ಲಿ ಯಾವುದೇ ರೀತಿಯ ತಪ್ಪು ಕಂಡು ಬಂದಲ್ಲಿ ನೋಟಿಸ್ ನೀಡಲಾಗುತ್ತದೆ.

The notice will also come to those who have rented houses
Image Credit: Okcredit

ತೆರಿಗೆ ಪಾವತಿಯ ಸಮಯದಲ್ಲಿ ಯಾವುದೇ ಒಂದು ಮುಖ್ಯ ಆದಾಯ ಮಾಹಿತಿ ನೀಡಿದ್ದರು ನೀವು ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ. ಇನ್ನು ನಿಗದಿತ ಸಮಯದೊಳಗೆ ಐಟಿಆರ್ ಸಲ್ಲಿಕೆ ಆಗದಿದ್ದರೆ ಬರೋಬ್ಬರಿ 5 ಸಾವಿರ ದಂಡ ಪಾವತಿಸಬೇಕಾಗುತ್ತದೆ.

ಬಾಡಿಗೆ ಮನೆ ಹೊಂದಿದವರಿಗೂ ಬರಲಿದೆ ನೋಟೀಸ್
ಐಟಿಆರ್ ಸಲ್ಲಿಕೆಯ ಗಡುವು ಹತ್ತಿರವಾಗುತ್ತಿದ್ದಂತೆ ಕೋಟ್ಯಾಂತರ ಜನರು ತಮ್ಮ ಐಟಿ ರಿಟರ್ನ್ ಅನ್ನು ಸಲ್ಲಿಸುತ್ತಿದ್ದಾರೆ. ಮನೆ ಬಾಡಿಗೆ, ಗೃಹ ಸಾಲ ಅಥವಾ ದೇಣಿಗೆಗಳ ಕುರಿತು ಸುಳ್ಳು ಮಾಹಿತಿ ನೀಡಿದರೆ ತೆರಿಗೆ ಪಾವತಿದಾರರ ವಿರುದ್ಧ ವಂಚನೆಯ ಪ್ರಕರಣ ದಾಖಲಾಗುತ್ತದೆ. ನಕಲಿ ಮಾಹಿತಿ ನೀಡಿದವರಿಗೆ ದಂಡದ ಜೊತೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

Central Government last warning for tax payers
Image Credit: Livemint

ಮನೆ ಬಾಡಿಗೆಯ ನಕಲಿ ಬಿಲ್ ಗಳು ಅಥವಾ ಹೋಮ್ ಲೋನ್ ಕುರಿತು ನಕಲಿ ಮಾಹಿತಿ ಅಥವಾ ನಕಲಿ ದೇಣಿಗೆಗಳ ನೆಪದಲ್ಲಿ ಆದಾಯ ಉಳಿಸಲು ಸುಳ್ಳು ಮಾಹಿತಿ ನೀಡಿದ್ದಾರೆ ಅಂತವರ ವಿರುದ್ಧ ಆದಾಯ ಇಲಾಖೆ ಕಠಿಣ ಕ್ರಮ ಕೈಗೂಳ್ಳುತ್ತಿದೆ. ಈಗಾಗಲೇ ಕೆಲವು ದಾಖಲೆಗಳ ಕುರಿತು ಸುಳ್ಳು ಮಾಹಿತಿ ನೀಡಿದವರಿಗೆ ಆದಾಯ ಇಲಾಖೆ ನೋಟೀಸ್ ನೀಡಿದೆ. ಇನ್ನು ತೆರಿಗೆ ವಿನಾಯಿತಿಗೆ ಪೂರಕ ದಾಖಲೆಗಳನ್ನು ಸಲ್ಲಿಸುವಂತೆ ಆದಾಯ ಇಲಾಖೆ ಆದೇಶ ಹೊರಡಿಸಿದೆ.

Join Nadunudi News WhatsApp Group

ಆದಾಯ ತೆರಿಗೆ ಇಲಾಖೆಯ ನೋಟಿಸ್
ಸಂಬಳ ಪಡೆಯುವ ವ್ಯಕ್ತಿಗಳಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10 (13A ) ಅಡಿಯಲ್ಲಿನ ಮನೆ ಬಾಡಿಗೆ ಭತ್ಯೆಯಲ್ಲಿ ವಿನಾಯತಿ ಪಡೆದವರಿಗೆ, ಸೆಕ್ಷನ್ 10 (14 ) ಅಡಿಯಲ್ಲಿ ಕಚೇರಿ ಕರ್ತವ್ಯಗಳ ನಿರ್ವಹಣಬೆಗೆ ಸಹಾಯಕರನ್ನು ನೇಮಿಸಿಕೊಂಡವರ ಭತ್ಯೆಗೆ ಅಥವಾ ಗೃಹ ಸಾಲಗಳ ಮೇಲಿನ ಬಡ್ಡಿ ಪಾವತಿಗಾಗಿ ಸೆಕ್ಷನ್ 24 (b) ಅಡಿಯಲ್ಲಿ ಕಡಿತಗಳಿಗೆ ಸಂಬಂಧಿಸಿದಂತೆ ನೋಟಿಸ್ ಗಳನ್ನೂ ನೀಡಲಾಗಿದೆ.

ಹೂಡಿಕೆಯ ಮೇಲಿನ ಎಲ್ಲಾ ರೀತಿಯ ಲಾಭಗಳ ವಿವಿರದ ಬಗ್ಗೆ ಐಟಿಆರ್ ಸಲ್ಲಿಸುವಾಗ ಮಾಹಿತಿ ನೀಡಬೇಕಾಗುತ್ತದೆ. ಐಟಿಆರ್ ಸಲ್ಲಿಕೆಯ ಸಮಯದಲ್ಲಿ ಯಾವುದೇ ರೀತಿಯ ನಕಲಿ ಮಾಹಿತಿ ನೀಡುವಂತಿಲ್ಲ.

Join Nadunudi News WhatsApp Group