Jeevan Praman Pension Mandatory: ಪ್ರತಿ ವರ್ಷದ ಹಾಗೆ ಈ ವರ್ಷ ಕೂಡ ಪಿಂಚಣಿ ಹಣ ಪಡೆದುಕೊಳ್ಳುವ ಎಲ್ಲರಿಗೂ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ಪ್ರತಿ ತಿಂಗಳು ಪಿಂಚಣಿ ಹಣ ಪಡೆದುಕೊಳ್ಳುವ ಎಲ್ಲಾ ಹಿರಿಯ ನಾಗರಿಕರು ಮತ್ತೆ ಜೀವನ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಜೀವನ ಪ್ರಮಾಣಪತ್ರ ಸಲ್ಲಿಸಲು ಕೊನೆಯ ದಿನಾಂಕವನ್ನು ಕೂಡ ಈಗ ನಿಗದಿಪಡಿಸಲಾಗಿದೆ. ಹಾಗಾದರೆ ಜೀವನ ಪ್ರಮಾಣಪತ್ರ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಮತ್ತು ಜೀವನ ಪ್ರಮಾಣಪತ್ರ ಸಲ್ಲಿಸುವುದು ಹೇಗೆ ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.
ಏನಿದು ಜೀವನ ಪ್ರಮಾಣಪತ್ರ?
ಜೀವನ ಪ್ರಮಾಣಪತ್ರ ಅಂದರೆ ಪಿಂಚಣಿ ಹಣ ಪಡೆದುಕೊಳ್ಳುವ ವ್ಯಕ್ತಿ ಜೀವಂತವಾಗಿದ್ದಾನೆ ಅನ್ನುವುದಕ್ಕೆ ಒಂದು ಸಾಕ್ಷಿಯಾಗಿದೆ. ಪ್ರತಿ ವರ್ಷ ಪಿಂಚಣಿ ಹಣ ಪಡೆದುಕೊಳ್ಳುವ ಎಲ್ಲರೂ ಕೂಡ ಈ ಜೀವನ ಪ್ರಮಾಣಪತ್ರ ಸಲ್ಲಿಸುವುದು ಅತೀ ಕಡ್ಡಾಯವಾಗಿದೆ. ಒಂದುವೇಳೆ ಜೀವನ ಪ್ರಮಾಣಪತ್ರ ಸಲ್ಲಿಸದೆ ಇದ್ದರೆ ಅವರು ಮುಂದಿನ ದಿನಗಳಲ್ಲಿ ಪಿಂಚಣಿ ಹಣ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದು EPS-95 ಯೋಜನೆಯಡಿ ಬರುವ ಎಲ್ಲ ಪಿಂಚಣಿದಾರರಿಗೆ ಅನ್ವಯವಾಗುತ್ತದೆ.
ಜೀವನ ಪ್ರಮಾಣಪತ್ರಕ್ಕೆ ಕೊನೆಯ ದಿನಾಂಕ ನಿಗದಿಪಡಿಸಿದ ಸರ್ಕಾರ
ಪಿಂಚಣಿ ಹಣ ಪಡೆಯುವವರು ಜೀವನ ಪ್ರಮಾಣಪತ್ರವನ್ನು ಇದೆ ನವೆಂಬರ್ 30 ರ ಒಳಗೆ ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಈ ವರ್ಷ ಯಾವುದೇ ವಿಳಂಬಕ್ಕೆ ಅವಕಾಶ ಕಲ್ಪಿಸಿಕೊಡಲಾಗಿಲ್ಲ ಮತ್ತು ಕಡ್ಡಾಯವಾಗಿ ಎಲ್ಲರೂ ಕೂಡ ಈ ಜೀವನ ಪ್ರಮಾಣಪತ್ರ ಸಲ್ಲಿಸಬೇಕು. ನವೆಂಬರ್ 30 ಜೀವನ ಪ್ರಮಾಣಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ.
ಜೀವನ ಪ್ರಮಾಣಪತ್ರ ಪಡೆದುಕೊಳ್ಳುವುದು ಹೇಗೆ?
ನಿಯಮದ ಪ್ರಕಾರ ಜೀವನ ಪ್ರಮಾಣಪತ್ರ ಪಡೆದುಕೊಳ್ಳಲು ವಕ್ತಿ ತನ್ನ ಆಧಾರ್ ಸಂಖ್ಯೆಗೆ ಪಾನ್ ಸಂಖ್ಯೆಯಲ್ಲಿ ಕಡ್ಡಾಯವಾಗಿ ಲಿಂಕ್ ಮಾಡಬೇಕು. ಹತ್ತಿರದ CSC ಕೇಂದ್ರ, ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಜೀವನ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದು.
ಯಾರೆಲ್ಲ ಕಡ್ಡಾಯವಾಗಿ ಜೀವನ ಪ್ರಮಾಣಪತ್ರ ಸಲ್ಲಿಸಬೇಕು?
*EPS-95 ಪಿಂಚಣಿದಾರರು ಕಡ್ಡಾಯವಾಗಿ ಸಲ್ಲಿಸಬೇಕು
* 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈ ಜೀವನ ಪ್ರಮಾಣಪತ್ರ ಸಲ್ಲಿಸಬೇಕು
* ಕುಟುಂಬ ಪಿಂಚಣಿ ಪಡೆದುಕೊಳ್ಳುವುದು ಸಲ್ಲಿಸಬೇಕು
ಸಮಯಮಿತಿ ಮತ್ತು ಸರ್ಕಾರದ ಎಚ್ಚರಿಕೆ
ನವೆಂಬರ್ 30 ಜೀವನ್ ಪ್ರಮಾಣಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಿರುತ್ತದೆ ಮತ್ತು ಅವಧಿ ಮೀರಿದರೆ ತೊಂದರೆ ಎದುರಿಸಬೇಕಾಗುತ್ತದೆ. EPFO ಪೋರ್ಟಲ್ ನಲ್ಲಿ ಸ್ಟೇಟಸ್ ಚೆಕ್ ಮಾಡುವುದರ ಮೂಕ ನಿಮ್ಮ ಜೀವನ ಪ್ರಮಾಣಪತ್ರ ಸಲ್ಲಿಕೆಯಾಗಿದೆಯಾ ಅನ್ನುವುದನ್ನು ಪರಿಶೀಲನೆ ಮಾಡಿಕೊಳ್ಳಿ. ಸದ್ಯ ಡಿಜಿಟಲ್ ವ್ಯವಸ್ಥೆ ಬಂದಿರುವ ಕಾರಣ ಮನೆಯಲ್ಲಿ ಕುಳಿತುಕೊಂಡು ಆನ್ಲೈನ್ ಮೂಲಕ ಡಿಜಿಟಲ್ ಪ್ರಮಾಣಪತ್ರ ಸಲ್ಲಿಸಬಹುದು. ಕಳೆದ ವರ್ಷ 70 ಲಕ್ಷಕ್ಕೂ ಹೆಚ್ಚು ಜನ ಡಿಜಿಟಲ್ DLC ಸಲ್ಲಿಸಿದ್ದಾರೆ. ಈ ಬಾರಿ 1 ಕೋಟಿ ಗಡಿ ದಾಟುವ ನಿರೀಕ್ಷೆ ಇದೆ.

									 
					