ITR Filing 2025 Fake Deduction Penalties: ITR ಸಲ್ಲಿಸುವಾಗ ಸಣ್ಣ ತಪ್ಪುಗಳು ಸಹ ದೊಡ್ಡ ತೊಂದರೆಗೆ ಕಾರಣವಾಗಬಹುದು. ಹೊಸ ITR ನಿಯಮಗಳ ಪ್ರಕಾರ, ಸುಳ್ಳು ಕಡಿತಗಳನ್ನು ಹೇಳಿಕೊಳ್ಳುವುದು ಅಥವಾ ಆದಾಯವನ್ನು ಮರೆಮಾಡುದರಿಂದ ನೀವು ತೊಂದರೆಗೆ ಗುರಿಯಾಗಬಹುದು. ನಿಮ್ಮ ರಿಟರ್ನ್ ನಲ್ಲಿ ತಪ್ಪು ಮಾಹಿತಿಯನ್ನು ನೀಡಿದರೆ, ನೀವು ಪಾವತಿಸಬೇಕಾದ ತೆರಿಗೆಯ 200% ವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ.
ತಪ್ಪು ಕ್ಲೈಮ್‌ಗಳ ಪರಿಣಾಮಗಳೇನು?
ತಪ್ಪು ಡಿಡಕ್ಷನ್ ಕ್ಲೈಮ್ ಮಾಡಿದರೆ ಸೆಕ್ಷನ್ 270A ಅಡಿಯಲ್ಲಿ ತೆರಿಗೆ ಮೊತ್ತದ 200% ದಂಡ ಬೀಳಬಹುದು. ಇದರ ಜೊತೆಗೆ ಸೆಕ್ಷನ್ 234B ಮತ್ತು 234C ಅಡಿಯಲ್ಲಿ ವಾರ್ಷಿಕ 24% ಬಡ್ಡಿ ಸೇರಿ, ಸೆಕ್ಷನ್ 276C ಅಡಿಯಲ್ಲಿ ಉದ್ದೇಶಪೂರ್ವಕ ತೆರಿಗೆ ತಪ್ಪಿಸಿದರೆ 7 ವರ್ಷಗಳ ಜೈಲು ಶಿಕ್ಷೆಯೂ ಸಾಧ್ಯ.
ಸಾಮಾನ್ಯವಾಗಿ ನಕಲಿ ಕ್ಲೈಮ್‌ಗಳು HRA (ಸೆಕ್ಷನ್ 10(13A)), ಹೆಲ್ತ್ ಇನ್ಶೂರೆನ್ಸ್ (80D), ದೇಣಿಗೆಗಳು (80G, 80GGC), ಮತ್ತು ಶಿಕ್ಷಣ ಅಥವಾ ಹೋಮ್ ಲೋನ್ ಬಡ್ಡಿ (80E, 80EE, 80EEB) ಅಡಿಯಲ್ಲಿ ಬರುತ್ತವೆ. ಇಲಾಖೆಯು ನಕಲಿ TDS ರಿಫಂಡ್ ಏಜೆಂಟ್‌ಗಳ ಮೂಲಕ ಸಲ್ಲಿಸಿದ ಕ್ಲೈಮ್‌ಗಳನ್ನು ಪತ್ತೆಹಚ್ಚುತ್ತಿದ್ದೆ.
ಇತ್ತೀಚಿನ ಅಪ್‌ಡೇಟ್‌ಗಳ ಪ್ರಕಾರ, AY 2025-26ಗೆ ITR ಫೈಲಿಂಗ್ ಡೆಡ್‌ಲೈನ್ ಸೆಪ್ಟೆಂಬರ್ 15, 2025ಕ್ಕೆ ವಿಸ್ತರಣೆಯಾಗಿದೆ. ಆದರೆ ತಪ್ಪು ಕ್ಲೈಮ್‌ಗಳನ್ನು ಆದಷ್ಟು ಬೇಗ ಸರಿಪಡಿಸುವುದು ಉತ್ತಮ.
ನೀವು ಏನು ಮಾಡಬೇಕು?
ತಪ್ಪು ಕ್ಲೈಮ್ ಮಾಡಿದ್ದರೆ ITR-U ಫೈಲ್ ಮಾಡಿ ಸರಿಪಡಿಸಿ. ಇದು ದೋಷಗಳನ್ನು ಸರಿಪಡಿಸಲು, ಮಿಸ್ ಆದ ಆದಾಯವನ್ನು ಸೇರಿಸಲು ಮತ್ತು ನಕಲಿ ಕ್ಲೈಮ್‌ಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ. ITR-U ಅನ್ನು 5 ವರ್ಷಗಳವರೆಗೆ ಬಳಸಬಹುದು.
ಸ್ವತಃ ಫೈಲ್ ಮಾಡಿ, ಥರ್ಡ್ ಪಾರ್ಟಿ ರಿಫಂಡ್ ಏಜೆಂಟ್‌ಗಳನ್ನು ತಪ್ಪಿಸಿ. AIS ಮತ್ತು ಫಾರ್ಮ್ 26ASನೊಂದಿಗೆ ವಿವರಗಳನ್ನು ಕ್ರಾಸ್ ಚೆಕ್ ಮಾಡಿ.
ಹೊಸ ITR ಫಾರ್ಮ್‌ಗಳಲ್ಲಿ ಹೆಚ್ಚುವರಿ ವಿವರಗಳನ್ನು ಕಡ್ಡಾಯಗೊಳಿಸಲಾಗಿದೆ, ಉದಾ. HRA ಕ್ಯಾಲ್ಕುಲೇಷನ್, ಇನ್ಶೂರೆನ್ಸ್ ವಿವರಗಳು ಮತ್ತು ಲೋನ್ ಅಕೌಂಟ್ ಮಾಹಿತಿ. ಯಾವುದೇ ಮಿಸ್‌ಮ್ಯಾಚ್ ಆಟೋ ಫ್ಲ್ಯಾಗ್ ಮತ್ತು ನೋಟೀಸ್‌ಗೆ ಕಾರಣವಾಗಬಹುದು.
ಇಲಾಖೆಯ ಕ್ರಮಗಳು ಮತ್ತು ಸಲಹೆಗಳು
ಜುಲೈ 2025ರಲ್ಲಿ ಆದಾಯ ತೆರಿಗೆ ಇಲಾಖೆಯು ನಕಲಿ ಕ್ಲೈಮ್‌ಗಳ ವಿರುದ್ಧ ದೊಡ್ಡ ಕ್ರ್ಯಾಕ್‌ಡೌನ್ ಆರಂಭಿಸಿದೆ. ಸರ್ಚ್ ಮತ್ತು ಸರ್ವೇ ಆಪರೇಷನ್‌ಗಳಲ್ಲಿ 90,000 ಸ್ಯಾಲರೀಡ್ ವ್ಯಕ್ತಿಗಳು ರೂ. 1,070 ಕೋಟಿ ಮೊತ್ತದ ನಕಲಿ ಕ್ಲೈಮ್‌ಗಳನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ.
ತಜ್ಞರು ಸಲಹೆ ನೀಡುತ್ತಾರೆ: ಸರಿಯಾದ ಡಾಕ್ಯುಮೆಂಟ್‌ಗಳನ್ನು ಉಳ್ಳವರ ಮಾತ್ರ ಕ್ಲೈಮ್ ಮಾಡಿ. ತಪ್ಪುಗಳು ತೆರಿಗೆ ತಪ್ಪಿಸುವಿಕೆಗೆ ಕಾರಣವಾಗಬಹುದು, ಇದು ಕ್ರಿಮಿನಲ್ ಆಫೆನ್ಸ್.
ಅಂತಿಮವಾಗಿ, ಪ್ರಾಮಾಣಿಕವಾಗಿ ಫೈಲ್ ಮಾಡಿ ಮತ್ತು ತೊಂದರೆಗಳನ್ನು ತಪ್ಪಿಸಿ. ಇದು ನಿಮ್ಮ ಹಣಕಾಸು ಭದ್ರತೆಗೆ ಸಹಾಯಕವಾಗುತ್ತದೆ.