UPI Rules change September 2025: ನೀವು UPI ಬಳಕೆದಾರರಾಗಿದ್ದರೆ ಸೆಪ್ಟೆಂಬರ್ 15 ರಿಂದ ಜಾರಿಗೆ ಬರುವ ಕೆಲವು ಹೊಸ ನಿಯಮಗಳನ್ನು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ. ಸೆಪ್ಟೆಂಬರ್ 15 ನೇ ತಾರೀಕಿನಿಂದ UPI ಪೇಮೆಂಟ್ ಗಳಿಗೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮಗಳು ಜಾರಿಗೆ ಬರಲಿದೆ. ಹಾಗಾದರೆ ಸೆಪ್ಟೆಂಬರ್ 15 ನೇ ತಾರೀಕಿನಿಂದ UPI ಪೇಮೆಂಟ್ಸ್ ಗಳಿಗೆ ಸಂಬಂಧಿಸಿದಂತೆ ಜಾರಿಗೆ ಬರುತ್ತಿರುವ ಹೊಸ ನಿಯಮಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
UPI ವಹಿವಾಟಿನ ಮಿತಿಯಲ್ಲಿ ದೊಡ್ಡ ಬದಲಾವಣೆ
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಸೆಪ್ಟೆಂಬರ್ 15 ರಿಂದ ಕೆಲವು ವರ್ಗಗಳಿಗೆ UPI ವಹಿವಾಟು ಮಿತಿಯನ್ನು ಹೆಚ್ಚಿಸಿದೆ. ಈಗ ನೀವು ಒಂದೇ ವಹಿವಾಟಿನಲ್ಲಿ ಹೆಚ್ಚಿನ ಮೊತ್ತವನ್ನು ಕಳುಹಿಸಬಹುದು, ವಿಶೇಷವಾಗಿ ಕೆಲವು ನಿರ್ದಿಷ್ಟ ವರ್ಗಗಳಲ್ಲಿ. ಈ ಬದಲಾವಣೆಯಿಂದ ಗ್ರಾಹಕರಿಗೆ ದೊಡ್ಡ ಪಾವತಿಗಳನ್ನು ಸುಲಭವಾಗಿ ಮಾಡಲು ಅನುಕೂಲವಾಗಲಿದೆ.
ಯಾವ ವರ್ಗಗಳಿಗೆ ಮಿತಿಯಲ್ಲಿ ಹೆಚ್ಚಳ ಆಗಿದೆ..?
- ಬಂಡವಾಳ ಮಾರುಕಟ್ಟೆ, ವಿಮೆ, ಕ್ರೆಡಿಟ್ ಕಾರ್ಡ್ ಬಿಲ್, ಸರ್ಕಾರಿ ಇ-ಮಾರುಕಟ್ಟೆ: ಈ ವರ್ಗಗಳಿಗೆ UPI ವಹಿವಾಟು ಮಿತಿಯನ್ನು 5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
- ಆಭರಣ ಖರೀದಿ, ಡಿಜಿಟಲ್ ಖಾತೆ ತೆರೆಯುವಿಕೆ: ಇವುಗಳ ಮಿತಿ 2 ಲಕ್ಷ ರೂಪಾಯಿಗಳಾಗಿರುತ್ತದೆ.
- ಅವಧಿ ಠೇವಣಿ ಮತ್ತು FX ಚಿಲ್ಲರೆ ವ್ಯಾಪಾರ: ಇವುಗಳಿಗೂ 5 ಲಕ್ಷ ರೂಪಾಯಿಗಳ ಮಿತಿ ಜಾರಿಯಲ್ಲಿದೆ.
ಈ ಹೊಸ ಮಿತಿಗಳು ಪರಿಶೀಲಿತ ವ್ಯಾಪಾರಿಗಳಿಗೆ ಮಾತ್ರ ಲಭ್ಯವಿರುತ್ತವೆ ಎಂದು NPCI ಸ್ಪಷ್ಟಪಡಿಸಿದೆ.
UPI ಬಳಸುವ ಗ್ರಾಹಕರಿಗೆ ಏನು ಲಾಭ..?
ಈ ಬದಲಾವಣೆಯಿಂದ ದೊಡ್ಡ ಕ್ರೆಡಿಟ್ ಕಾರ್ಡ್ ಬಿಲ್‌ಗಳು, ವಿಮಾ ಪ್ರೀಮಿಯಂ, ಅಥವಾ ಸರ್ಕಾರಿ ಇ-ಮಾರುಕಟ್ಟೆಯಿಂದ ಖರೀದಿಗಳನ್ನು ಒಂದೇ ವಹಿವಾಟಿನಲ್ಲಿ ಪಾವತಿಸಬಹುದು. ಆಭರಣ ಖರೀದಿ ಮತ್ತು ಡಿಜಿಟಲ್ ಖಾತೆ ತೆರೆಯುವವರಿಗೂ ಈ ಹೊಸ ಮಿತಿಗಳು ಸಹಾಯಕವಾಗಲಿವೆ. ಬ್ಯಾಂಕುಗಳು ತಮ್ಮ ಆಂತರಿಕ ನೀತಿಗಳಿಗೆ ಅನುಗುಣವಾಗಿ ಪ್ರತ್ಯೇಕ ಮಿತಿಗಳನ್ನು ಇರಿಸಬಹುದು, ಆದರೆ NPCI ನಿಯಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.
ಅಷ್ಟಕ್ಕೂ UPI ಅಂದರೆ ಏನು..?
UPI (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಒಂದು ನೈಜ-ಸಮಯದ ಪಾವತಿ ವ್ಯವಸ್ಥೆಯಾಗಿದ್ದು, ಇದರ ಮೂಲಕ ನೀವು ಬ್ಯಾಂಕ್ ಖಾತೆಯಿಂದ ತಕ್ಷಣವೇ ಹಣವನ್ನು ಕಳುಹಿಸಬಹುದು. UPI ಐಡಿ, ಮೊಬೈಲ್ ಸಂಖ್ಯೆ, ಅಥವಾ QR ಕೋಡ್ ಬಳಸಿ ವಹಿವಾಟು ಮಾಡಬಹುದು, ಇದಕ್ಕೆ IFSC ಕೋಡ್ ಅಥವಾ ಖಾತೆ ಸಂಖ್ಯೆಯ ಅಗತ್ಯವಿಲ್ಲ.
ಸೆಪ್ಟೆಂಬರ್ 15 ರಿಂದ ಈ ಹೊಸ ನಿಯಮಗಳು ಜಾರಿಗೆ ಬರಲಿವೆ, ಆದ್ದರಿಂದ PhonePe, GPay, ಮತ್ತು Paytm ಬಳಕೆದಾರರು ಈ ಬದಲಾವಣೆಗಳ ಬಗ್ಗೆ ತಿಳಿದಿರಿ!