Bank Merger Details: ಕೇಂದ್ರ ಸರ್ಕಾರ ಈಗ ದೇಶದ ಪ್ರಮುಖ ನಾಲ್ಕು ಬ್ಯಾಂಕುಗಳನ್ನು ಮತ್ತೆ ವಿಲೀನ ಮಾಡಲು ಮುಂದಾಗಿದೆ. ಸಣ್ಣ ಬ್ಯಾಂಕುಗಳಿಂದ ಹೆಚ್ಚಿನ ವೆಚ್ಚವಾಗುವ ಕಾರಣ ಕೇಂದ್ರ ಸರ್ಕಾರ ಈಗ ನಾಲ್ಕು ಸಣ್ಣ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನ ಮಾಡಲು ಮುಂದಾಗಿದೆ. ಹಾಗಾದರೆ ದೇಶದ ಯಾವ ನಾಲ್ಕು ಸಾರ್ವಜನಿಕ ಬ್ಯಾಂಕುಗಳು ವಿಲೀನವಾಗಲಿದೆ ಅನ್ನುವುದರ ಬಗ್ಗೆ ಸಂಪುರಂನ ಮಾಹಿತಿ ನವೀನ ತಿಳಿಯೋಣ.
ದೇಶದ 4 ಬ್ಯಾಂಕ್ ವಿಲೀನ ಮಾಡಲು ನೀತಿ ಆಯೋಗ ಶಿಫಾರಸ್ಸು
ದೇಶದಲ್ಲಿ ಪ್ರಮುಖ ಸಣ್ಣ ಸಾರ್ವಜನಿಕ ವಲಯದ ನಾಲ್ಕು ಬ್ಯಾಂಕುಗಳನ್ನು ಈಗ ಸರ್ಕಾರ ದೊಡ್ಡ ಬ್ಯಾಂಕುಗಳ ಜೊತೆ ವಿಲೀನ ಮಾಡುವ ತೀರ್ಮಾನ ಮಾಡಿದೆ. ನೀತಿ ಆಯೋಗದ ಶಿಫಾರಸು ಮೇಲೆ ಇದು ನಡೆಯುತ್ತಿದ್ದು, ದೇಶದಲ್ಲಿ ಕೇವಲ ನಾಲ್ಕು ದೊಡ್ಡ ಸಾರ್ವಜನಿಕ ಬ್ಯಾಂಕ್‌ಗಳು ಮಾತ್ರ ಉಳಿಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಭಾರತದಲ್ಲಿ 2017 ರಿಂದ 2020 ರ ಅವಧಿಯಲ್ಲಿ 10 ಬ್ಯಾಂಕುಗಳನ್ನು ವಿಲೀನ ಮಾಡಲಾಗಿದ್ದು ಈಗ ಮತ್ತೆ 4 ಬ್ಯಾಂಕುಗಳನ್ನು ವಿಲೀನ ಮಾಡಲು ತೀರ್ಮಾನ ಮಾಡಲಾಗಿದೆ.
ದೇಶದ ಈ 4 ಸರ್ಕಾರೀ ಬ್ಯಾಂಕುಗಳು ವಿಲೀನವಾಗಲಿದೆ
ನೀತಿ ಆಯೋಗದ ಶಿಫಾರಸ್ಸಿನ ಪ್ರಕಾರ, ಇಂಡಿಯನ್ ಓವರ್ಸೀಸ್ ಬ್ಯಾಂಕ್ (IOB), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI), ಬ್ಯಾಂಕ್ ಆಫ್ ಇಂಡಿಯಾ (BOI) ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ (BoM) ದೇಶದ ಪ್ರಮುಖ ದೊಡ್ಡ ಬ್ಯಾಂಕುಗಳ ಜೊತೆ ವಿಲೀನ ಆಗಲಿದೆ. ದೇಶದಲ್ಲಿ ಈ ನಾಲ್ಕು ಸಣ್ಣ ಬ್ಯಾಂಕುಗಳು ಮುಂದಿನ ದಿನಗಳಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ನೀತಿ ಆಯೋಗ ತಿಳಿಸಿದೆ. ಈ ನಾಲ್ಕು ಬ್ಯಾಂಕುಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಮತ್ತು ಬ್ಯಾಂಕ್ ಆಫ್ ಬರೋಡಾ (BoB)ಗಳೊಂದಿಗೆ ವಿಲೀನ ಮಾಡಲು ನೀತಿ ಆಯೋಗ ಈಗ ಶಿಫಾರಸ್ಸು ಮಾಡಿದೆ.
ಬ್ಯಾಂಕ್ ವಿಲೀನ ಮಾಡುವುದರಿಂದ ಏನೇನು ಲಾಭ?
ದೇಶದಲ್ಲಿ ಸಣ್ಣ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನ ಮಾಡುವುದರಿಂದ ಖರ್ಚು ಕಡಿಮೆ ಆಗುತ್ತೆ ಅನ್ನುವುದು ನೀತಿ ಆಯೋಗದ ಅಭಿಪ್ರಾಯವಾಗಿದೆ. ಅಷ್ಟೇ ಮಾತ್ರವಲ್ಲದೆ NPA ಕಡಿಮೆಯಾಗಿ ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್ ಬಲಗೊಳ್ಳುತ್ತದೆ ಅನ್ನುವುದು ನೀತಿ ಆಯೋಗ ಅಭಿಪ್ರಾಯವಾಗಿದೆ. ಸಣ್ಣ ಸಾರ್ವಜನಿಕ ವಲಯದ ಬ್ಯಾಂಕುಗಳ ಗ್ರಾಹಕರಿಗೆ ಇನ್ನಷ್ಟು ಉತ್ತಮವಾದ ಸೇವೆ ಒದಗಿಸಬೇಕು ಅನ್ನುವ ಕಾರಣ ದೇಶದಲ್ಲಿ ನಾಲ್ಕು ಸಣ್ಣ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನ ಮಾಡಲು ಈಗ ತೀರ್ಮಾನ ಮಾಡಲಾಗಿದೆ.
ಬ್ಯಾಂಕ್ ವಿಲೀನದ ಕಾರಣ ಗ್ರಾಹಕರು ಎದುರಿಸಬೇಕಾದ ಸಮಸ್ಯೆಗಳು ಏನು?
ಬ್ಯಾಂಕುಗಳು ವಿಲೀನವಾಗುವ ಕಾರಣ ಗ್ರಾಹಕರು ಕೂಡ ಕೆಲವು ಸಮಸ್ಯೆ ಎದುರಿಸಬೇಕಾಗುತ್ತದೆ. ವಿಲೀನಗೊಂಡ ಬ್ಯಾಂಕುಗಳ ಗ್ರಾಹಕರು ಹೊಸ ಬ್ಯಾಂಕಿನಿಂದ ಹೊಸ ಪಾಸ್ ಬುಕ್ ಮತ್ತು ಚೆಕ್ ಬುಕ್ ಪಡೆದುಕೊಳ್ಳಬೇಕು ಮತ್ತು ಆನ್ಲೈನ್ ಬ್ಯಾಂಕಿಂಗ್ ಕೂಡ ಕೆಲವು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಈ ನಾಲ್ಕು ಬ್ಯಾಂಕುಗಳ ಗ್ರಾಹಕರು ಹೊಸ ಖಾತೆ ಸಂಖ್ಯೆ ಪಡೆದುಕೊಂಡು ಹೊಸ ಆನ್ಲೈನ್ ಬ್ಯಾಂಕಿಗ್ ಆರಂಭಿಸಬೇಕಾಗುತ್ತದೆ. ಈಗಾಗಲೇ ವಿಲೀನದ ಡ್ರಾಫ್ಟ್ ‘ರಿಕಾರ್ಡ್ ಆಫ್ ಡಿಸ್ಕಷನ್’ ತಯಾರಾಗಿದೆ. ಇದನ್ನು ಕ್ಯಾಬಿನೆಟ್ ಮತ್ತು ಪ್ರಧಾನಿ ಕಚೇರಿಗೆ ಕಳುಹಿಸಲಾಗುತ್ತದೆ. ಅನುಮೋದನೆ ಸಿಕ್ಕರೆ 2026-27ರ ವಿತ್ತೀಯ ವರ್ಷದಲ್ಲಿ ಈ ನಾಲ್ಕು ಬ್ಯಾಂಕುಗಳು ವಿಲೀನ ಆಗಲಿದೆ. ಕೆಲವು ವರ್ಷಗಳ ಹಿಂದೆ ಸಿಂಡಿಕೇಟ್ ಬ್ಯಾಂಕ್, ವಿಜಯ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮೈಸೂರ್ ವಿಲೀನ ಮಾಡಲಾಗಿತ್ತು, ಈಗ ಮತ್ತೆ ನಾಲ್ಕು ಬ್ಯಾಂಕುಗಳು ವಿಲೀನ ಆಗಲಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

