Canara Bank 2 Lakh FD Investment: ಈಗಿನ ಕಾಲದಲ್ಲಿ ಜನರು ಹೂಡಿಕೆಯತ್ತ ಹೆಚ್ಚು ಗಮನ ಕೊಡುತ್ತಾರೆ. ಮುಂದಿನ ಭವಿಷ್ಯ ಉತ್ತಮವಾಗಿರಬೇಕು ಮತ್ತು ನಾವು ಇನ್ನೊಬ್ಬರ ಮೇಲೆ ಡಿಪೆಂಡ್ ಆಗಬಾರದು ಅನ್ನುವ ಕಾರಣ ಈಗಿನ ಕಾಲದ ಜನರು ಹೆಚ್ಚು ಹೂಡಿಕೆಯತ್ತ ಗಮ ಕೊಡುತ್ತಿರುವುದನ್ನು ನಾವು ಗಮನಿಸಬಹುದು. ಹೂಡಿಕೆ ಮಾಡುವ ಇರುವ ಆಯ್ಕೆಗಳಲ್ಲಿ FD ಯೋಜನೆ ಕೂಡ ಒಂದು. ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ FD ಯೋಜನೆಯಲ್ಲಿ (Fixed Deposit Scheme) ಹೂಡಿಕೆ ಮಾಡುವ ಆಯ್ಕೆ ಇದೆ. ಈ ಲೇಖನದಲ್ಲಿ ನಿಮಗೆ ಕೆನರಾ ಬ್ಯಾಂಕಿನಲ್ಲಿ ಅಂದಾಜು 2 ಲಕ್ಷ ರೂ ಸ್ಥಿರ ಠೇವಣಿ ಇಟ್ಟರೆ ಎಷ್ಟು ಆದಾಯ ಪಡೆದುಕೊಳ್ಳಬಹುದು ಅನ್ನುವುದರ ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇವೆ.
ಕೆನರಾ ಬ್ಯಾಂಕಿನಲ್ಲಿ FD ಇಟ್ಟರೆ ಸಿಗುತ್ತೆ ಉತ್ತಮ ಬಡ್ಡಿ
ತಾರೇ ಕೆಲವು ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಸಾರ್ವಜನಿಕ ವಲಯದ ಅತೀ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕಿನಲ್ಲಿ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸ್ವಲ್ಪ ದೊಡ್ಡ ಮೊತ್ತದ ಆದಾಯ ಪಡೆದುಕೊಳ್ಳಬಹುದು. ಸಾಮಾನ್ಯ ನಾಗರಿಕರಿಗೆ ಹೋಲಿಕೆ ಮಾಡಿರೆ ಹಿರಿಯ ನಾಗರಿಕರು FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿ ಬಡ್ಡಿ ಪಡೆದುಕೊಳ್ಳಬಹುದು. ಕೆನರಾ ಬ್ಯಾಂಕಿನಲ್ಲಿ ಸಾಮಾನ್ಯ ನಾಗರಿಕರು FD ಯೋಜನೆಯ ಮೇಲೆ ಸರಿಸುಮಾರು 6.5% ಬಡ್ಡಿ ಪಡೆದುಕೊಂಡರೆ ಹಿರಿಯ ನಾಗರಿಕರು 7% ವರೆಗೂ ಬಡ್ಡಿ ಪಡೆದುಕೊಳ್ಳುತ್ತಾರೆ.
ಕೆನರಾ ಬ್ಯಾಂಕಿನಲ್ಲಿ 2 ಲಕ್ಷ FD ಇಟ್ಟರೆ ಎಷ್ಟು ರಿಟರ್ನ್ ಸಿಗುತ್ತೆ?
ಕೆನರಾ ಬ್ಯಾಂಕಿನಲ್ಲಿ 2 ಲಕ್ಷ ರೂ FD ಇತ್ತು ಹೆಚ್ಚಿನ ಬಡ್ಡಿ ಪಡೆದುಕೊಳ್ಳಬೇಕು ಅಂದರೆ 444 ದಿನಗಳ FD ಯೋಜನೆ ಆಯ್ಕೆ ಮಾಡುವುದು ಬಹಳ ಉತ್ತಮ. 444 ದಿನಗಳ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಮಾನ್ಯ ಜನರು 6.5% ಬಡ್ಡಿ ಪಡೆದುಕೊಂಡರೆ ಹಿರಿಯ ನಾಗರಿಕರು 7% ಬಡ್ಡಿ ಪಡೆದುಕೊಳ್ಳುತ್ತಾರೆ. ಸಾಮಾನ್ಯ ನಾಗರಿಕರು 2 ಲಕ್ಷ ರೂ ಹೂಡಿಕೆ ಮಾಡಿದರೆ 444 ದಿನಕ್ಕೆ ಒಟ್ಟಾರೆಯಾಗಿ 15,956 ರೂ ಪಡೆದುಕೊಳ್ಳುತ್ತಾರೆ ಮತ್ತು ಮ್ಯಾಚ್ಯೂರಿಟಿ ಮೊತ್ತ ಸುಮಾರು ₹2,15,956 ಆಗಿರುತ್ತದೆ. ಆದರೆ ಹಿರಿಯ ನಾಗರಿಕರು 2 ಲಕ್ಷ ರೂ ಇಟ್ಟರೆ 7% ಬಡ್ಡಿಯಂತೆ 16,800 ರೂ ಬಡ್ಡಿ ಪಡೆದುಕೊಳ್ಳುತ್ತಾರೆ ಮತ್ತು ಮ್ಯಾಚ್ಯೂರಿಟಿ ಮೊತ್ತ ಸುಮಾರು ₹2,16,800 ರೂ ಆಗಿರುತ್ತದೆ.
FD ಇಡುವ ಮೊದಲು ನಿಯಮ ತಿಳಿದುಕೊಳ್ಳುವುದು ಅಗತ್ಯ
ಕೆಲವರು FD ಇತ್ತು ಅವಧಿ ಮುಗಿಯುವುದರ ಮೊದಲು ಆ ಹಣವನ್ನು ಹಿಂಪಡೆಯುತ್ತಾರೆ. ಆದರೆ FD ಇತ್ತು ಅವಧಿ ಮುಗಿಯುವುದರ ಒಳಗೆ ಆ ಹಣ ಹಿಂಪಡೆದರೆ 1% ಪೆನಾಲ್ಟಿ ಪಾವತಿ ಮಾಡಬೇಕಾಗುತ್ತದೆ. FD ಇಟ್ಟರು ಅವಧಿ ಮುಗಿದ ನಂತರ ಆ ಹಣ ಹಿಂಪಡೆದರೆ ಸಂಪೂರ್ಣ ಲಾಭ ಪಡೆದುಕೊಳ್ಳಬಹುದು. FD ಯೋಜನೆಯೂ ತೆರಿಗೆ ನಿಯಮಕ್ಕೆ ಒಳಪಡುವ ಕಾರಣ ತೆರಿಗೆ ನಿಯಮ ತಿಳಿದುಕೊಳ್ಳುವುದು ಕೂಡ ಅತೀ ಅವಶ್ಯವಾಗಿರುತ್ತದೆ.
FD ಇಟ್ಟರೆ ನಿಮಗೆ ಸಿಗುವ ಕೆಲವು ಸೌಲಭ್ಯಗಳು
ಯಾವುದೇ ಬ್ಯಾಂಕಿನಲ್ಲಿ FD ಹಣ ಇಟ್ಟರೆ ಆ ಹಣದ ಮೇಲೆ ಶೇಕಡಾ 90 ರಷ್ಟು ಸಾಲ ಪಡೆದುಕೊಳ್ಳಬಹುದು ಮತ್ತು ಬ್ಯಾಂಕಿನಿಂದ ನೀವು ಕೆಲವು ಸೇವೆಯನ್ನು ತ್ವರಿತವಾಗಿ ಪಡೆದುಕೊಳ್ಳಬಹುದು. FD ಇಟ್ಟವರಿಗೆ ಬ್ಯಾಂಕುಗಳು ಶೇಕಡಾ 90 ರ ವರೆಗೆ ಲಿಮಿಟ್ಸ್ ಇರುವ ಕ್ರೆಡಿಟ್ ಕಾರ್ಡ್ ಕೂಡ ಕೊಡುತ್ತೆ. ಕೆನರಾ ಬ್ಯಾಂಕಿನಲ್ಲಿ FD ಇಡಲು ಅನೇಕ ಆಯ್ಕೆ ಇದ್ದು ಯಾವುದು ಉತ್ತಮ ಎಂದು ನೀವು ಆಯ್ಕೆ ಮಾಡಬೇಕು. ಕೆನರಾ ಬ್ಯಾಂಕ್ FD ಸುರಕ್ಷಿತ ಮತ್ತು ಒಳ್ಳೆಯ ರಿಟರ್ನ್ ನೀಡುತ್ತದೆ. ಇನ್ನಷ್ಟು ವಿವರಕ್ಕೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಥವಾ ಅಧಿಕೃತ ಸೈಟ್ ನೋಡಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

