Pan Card And Aadhar Card Link: ಪ್ರತಿಯೊಂದು ಹಣಕಾಸಿನ ವಹಿವಾಟು ಮಾಡಬೇಕು ಅಂದರೂ ಕೂಡ ಪಾನ್ ಕಾರ್ಡ್ ಬಹಳ ಅವಶ್ಯಕ. ಈನಡುವೆ ಕೇಂದ್ರ ಸರ್ಕಾರ ಕೆಲವರ ಪಾನ್ ಕಾರ್ಡ್ ನಿಷ್ಕ್ರಿಯ ಮಾಡಿದೆ. ಇಂದಿನ ದಿನಗಳಲ್ಲಿ ಪ್ಯಾನ್ ಕಾರ್ಡ್ ಮತ್ತು ಆಧಾರ್ ಇಲ್ಲದೆ ಯಾವುದೇ ಆರ್ಥಿಕ ವಹಿವಾಟು ಮಾಡುವುದು ಕಷ್ಟ. ಆದರೆ, ನಿಮ್ಮ ಪ್ಯಾನ್ ಕಾರ್ಡ್ ಆಧಾರ್‌ಗೆ ಲಿಂಕ್ ಆಗದಿದ್ದರೆ, ಪ್ರತಿ ವಹಿವಾಟಿಗೆ ₹10,000 ದಂಡ ತೆರಬೇಕಾಗಬಹುದು! ಆದಾಯ ತೆರಿಗೆ ಇಲಾಖೆಯು ಈಗ ನಿಷ್ಕ್ರಿಯ ಪ್ಯಾನ್ ಕಾರ್ಡ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.
ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ
ಕೇಂದ್ರ ಸರ್ಕಾರದ ನಿಯಮದ ಪ್ರಕಾರ, ಹೆಚ್ಚಿನ ಹಣಕಾಸು ವಹಿವಾಟು ಮಾಡುವವರು ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ತೆರಿಗೆ ವಂಚನೆ ಮತ್ತು ಸರ್ಕಾರಕ್ಕೆ ನಿಮ್ಮ ಹಣಕಾಸಿನ ವಹಿವಾಟಿನ ಬಗ್ಗೆ ಸರಿಯಾದ ಮಾಹಿತಿ ತಿಳಿಯಲು ನೀವು ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಬೇಕು. ಒಂದುವೇಳೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ 10 ಸಾವಿರ ರೂಪಾಯಿ ತನಕ ದಂಡ ಪಾವತಿ ಮಾಡಬೇಕಾಗುತ್ತದೆ.
ಏಕೆ ಲಿಂಕ್ ಮಾಡಬೇಕು?
ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡುವುದು ಸರ್ಕಾರದ ಕಡ್ಡಾಯ ನಿಯಮ. ಇದನ್ನು ಪಾಲಿಸದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಆದರೂ, ಕೆಲವರು ಈ ನಿಷ್ಕ್ರಿಯ ಕಾರ್ಡ್‌ಗಳನ್ನು ಬ್ಯಾಂಕ್ ಖಾತೆ ತೆರೆಯುವುದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಅಥವಾ ಇತರ ವಹಿವಾಟುಗಳಿಗೆ ಬಳಸುತ್ತಾರೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272B ಅಡಿಯಲ್ಲಿ, ಇಂತಹ ಪ್ರತಿ ವಹಿವಾಟಿಗೆ ₹10,000 ದಂಡ ವಿಧಿಸಲಾಗುತ್ತದೆ.
ದಂಡ ತಪ್ಪಿಸಲು ಏನು ಮಾಡಬೇಕು?
ನಿಮ್ಮ ಪ್ಯಾನ್ ಕಾರ್ಡ್ ಆಧಾರ್‌ಗೆ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ https://www.incometax.gov.in ಗೆ ಭೇಟಿ ನೀಡಿ. ಒಂದು ವೇಳೆ ನಿಮಗೆ ಎರಡು ಪ್ಯಾನ್ ಕಾರ್ಡ್‌ಗಳಿದ್ದರೆ, ಒಂದನ್ನು ತಕ್ಷಣ ಸರೆಂಡರ್ ಮಾಡಿ. ಇದಕ್ಕಾಗಿ ‘Changes or Correction in existing PAN data’ ಫಾರ್ಮ್ ಭರ್ತಿ ಮಾಡಿ. ಒಂದು ತಪ್ಪಿನಿಂದಾಗಿ ದಂಡ ತಪ್ಪಿಸಲು ಈಗಲೇ ಕ್ರಮ ಕೈಗೊಳ್ಳಿ!