Financial Changes January 2026: ಡಿಸೆಂಬರ್ ತಿಂಗಳು ಕಳೆದು ಇನ್ನೇನು ಜನವರಿ ಆರಂಭ ಆಗುತ್ತಿದೆ. ಪ್ರತಿ ವರ್ಷದ ಹಾಗೆ ಜನವರಿ 2026 ರಿಂದ ದೇಶದಲ್ಲಿ ಕೆಲವು ಹೊಸ ಬದಲಾವಣೆ ಆಗುತ್ತಿರುವುದನ್ನು ನಾವು ಗಮನಿಸಬಹುದು. ಜನವರಿ 2026 ರಿಂದ ದೇಶದಲ್ಲಿ ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮಗಳು ಜಾರಿಗೆ ಬರಲಿದೆ ಮತ್ತು ಈ ಹೊಸ ನಿಯಮಗಳು ಜನರ ಮೇಲೆ ನೇರವಾಗಿ ಪರಿಣಾಮ ಉಂಟುಮಾಡಲಿದೆ. ಹಾಗಾದರೆ ಜನವರಿ 2026 ರಿಂದ ದೇಶದಲ್ಲಿ ಆಗುತ್ತಿರುವ ಪ್ರಮುಖ ಹಣಕಾಸು ಬದಲಾವಣೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕ್ರೆಡಿಟ್ ಸ್ಕೋರ್ ವಾರಕ್ಕೊಮ್ಮೆ ಅಪ್ಡೇಟ್
ಈ ಹಿಂದೆ ಕ್ರೆಡಿಟ್ ಸ್ಕೋರ್ ತಿಂಗಳಿಗೆ ಒಂದು ಬಾರಿ ಅಥವಾ ಎರಡು ಬಾರಿ ಅಪ್ಡೇಟ್ ಆಗುತ್ತಿತ್ತು, ಆದರೆ 2026 ರಿಂದ ಸಿಬಿಲ್ ಸ್ಕೋರ್ ಗಳನ್ನೂ ವಾರಕ್ಕೊಮ್ಮೆ ಅಪ್ಡೇಟ್ ಮಾಡುವಂತೆ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ. ಜನರಿಗೆ ಸಾಲ ಪಡೆದುಕೊಳ್ಳಲು ಮತ್ತು ಇತರೆ ಹಣಕಾಸು ವಹಿವಾಟುಗಳಿಗೆ ಸಿಬಿಲ್ ಸ್ಕೋರ್ ಬಹಳ ಅಗತ್ಯ ಆಗಿರುತ್ತದೆ. ಆದರೆ ಕಡಿಮೆ ಸಿಬಿಲ್ ಸ್ಕೋರ್ ಇದ್ದವರು ಸಿಬಿಲ್ ಸ್ಕೋರ್ ಹೆಚ್ಚಳ ಮಾಡಲು ಮಾಡಿಸಿಕೊಳ್ಳಲು ಸಾಕಷ್ಟು ಸಮಯ ಕಾಯಬೇಕಾಗಿತ್ತು. ಇನ್ನುಮುಂದೆ ಸಿಬಿಲ್ ಸ್ಕೋರ್ ವಾರಕ್ಕೊಮ್ಮೆ ಅಪ್ಡೇಟ್ ಆಗಲಿದ್ದು ಜನರು ಹಣಕ್ಸು ವಹಿವಾಟುಗಳನ್ನು ಬಹಳ ಸುಲಭವಾಗಿ ಮಾಡಬಹುವುದು. ಕಡಿಮೆ ಸಿಬಿಲ್ ಸ್ಕೋರ್ ಹೊಂದಿರುವವರು ಸಕಾಲದಲ್ಲಿ ಸಾಲ ಮರುಪಾವತಿ ಮತ್ತು ಕ್ರೆಡಿಟ್ ಸ್ಕೋರ್ ಉತ್ತಮ ಮಾಡಿಕೊಳ್ಳುವ ದಾರಿ ಹುಡುಕಿಕೊಂಡರೆ ವಾರದಲ್ಲೇ ಕ್ರೆಡಿಟ್ ಸ್ಕೋರ್ ಹೆಚ್ಚಳವಾಗಲಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಿಬಿಲ್ ಸ್ಕೊರ್ ಮಹತ್ವ
- ಗೃಹಸಾಲ ಮಾಡಲು ಸಿಬಿಲ್ ಸ್ಕೊರ್ ಉತ್ತಮವಾಗಿರಬೇಕು
- ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕು
- ವಯಕ್ತಿಕ ಸಾಲ ಮಾಡಲು ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕು
- ಓವರ್ ಡ್ರಾಫ್ಟ್ ಅಕೌಂಟ್ ತೆರೆಯಲು ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು
ಪಾನ್ ಕಾರ್ಡ್ ಇದ್ದವರಿಗೆ ಜನವರಿಯಿಂದ 1000 ರೂ ದಂಡ
ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಈಗಾಗಲೇ ಕೊನೆಯ ಗಡುವು ನೀಡಲಾಗಿದೆ ಮತ್ತು ಡಿಸೆಂಬರ್ 31 ರೊಳಗೆ ಯಾರು ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದಿಲ್ಲವೋ ಅಂತವರ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ ಮತ್ತು ನಿಷ್ಕ್ರಿಯವಾದ ಪಾನ್ ಕಾರ್ಡ್ ಬಳಕೆ ಮಾಡಿಕೊಂಡು ಯಾವುದೇ ಹಣಕಾಸು ವಹಿವಾಟು ಮಾಡಲು ಸಾಧ್ಯವಿಲ್ಲ. ಒಮ್ಮೆ ಪಾನ್ ಕಾರ್ಡ್ ನಿಷ್ಕ್ರಿಯವಾದರೆ 1000 ರೂಪಾಯಿ ದಂಡ ಪಾವತಿ ಮಾಡಿ ಪಾನ್ ಕಾರ್ ಸಕ್ರಿಯ ಮಾಡಿಕೊಳ್ಳಬೇಕು.
ಪಾನ್ ಕಾರ್ಡ್ ನಿಷ್ಕ್ರಿಯವಾದರೆ ಏನು ಸಮಸ್ಯೆ?
- ಪಾನ್ ಕಾರ್ಡ್ ನಿಷ್ಕ್ರಿಯವಾದರೆ ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಿಲ್ಲ
- ಹೊಸ ಸಾಲಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ
- ಬ್ಯಾಂಕ್ ಖಾತೆಗೆ ಹಣ ಡೆಪಾಸಿಟ್ ಮಾಡಲು ಕಷ್ಟವಾಗಬಹುದು
- ಆದಾಯ ತೆರಿಗೆ ಪಾವತಿಯಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ.
- ನಿಮ್ಮ ಬ್ಯಾಂಕಿಂಗ್ ವಹಿವಾಟುಗಳು ನಿಂತುಹೋಗಬಹುದು
- ತೆರಿಗೆ Refund ಪಡೆದುಕೊಳ್ಳಲು ಸಾಧ್ಯವಿಲ್ಲ
ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ
ಇನ್ನೂ ಕೂಡ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡದೆ ಇರುವವರು ಆನ್ಲೈನ್ ಮೂಲಕ ಬಹಳ ಸುಲಭವಾಗಿ ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡಬಹುದು.
- ಹಂತ 1 : https://www.incometax.gov.in/iec/foportal/ ವೆಬ್‌ಸೈಟ್‌ಗೆ ಹೋಗಿ.
- ಹಂತ 2 : ‘Quick Links’ನಲ್ಲಿ ‘Link Aadhaar’ ಕ್ಲಿಕ್ ಮಾಡಿ
- ಹಂತ 3 : ಆಧಾರ್ ಸಂಖ್ಯೆ ಮತ್ತು ಪಾನ್ ಸಂಖ್ಯೆ ನಮೂದಿಸಿ ವ್ಯಾಲಿಡೇಟ್ ಕ್ಲಿಕ್ ಮಾಡಿ.
- ಹಂತ 4 : ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತೆ ಮತ್ತು ಅದನ್ನು ನಮೂದಿಸಬೇಕು
- ಹಂತ 5 : ಕೊನೆಯಲ್ಲಿ Submit ಮಾಡಿದರೆ ಆಧಾರ್ ಸಂಖ್ಯೆಗೆ ಪಾನ್ ಕಾರ್ಡ್ ಸಂಖ್ಯೆ ಲಿಂಕ್ ಆಗುತ್ತೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

