Finance Bank: ಈ ಬ್ಯಾಂಕ್ ನೀಡುತ್ತಿದೆ FD ಹೂಡಿಕೆಯ ಮೇಲೆ ವಿಶೇಷ ಬಡ್ಡಿದರ, ಹೂಡಿಕೆ ಮಾಡಲು ಈ ಬ್ಯಾಂಕ್ ಬೆಸ್ಟ್.
ಈ ಬ್ಯಾಂಕ್ FD ಹೂಡಿಕೆಯಲ್ಲಿ ಉತ್ತಮ ಕೊಡುಗೆಯನ್ನು ನೀಡುತ್ತಿದೆ.
Fincare Small Finance Bank FD Interest: ಇನ್ನು ಕೆಲವು ಬ್ಯಾಂಕ್ ಗಳು ಸೇರಿದಂತೆ ಇನ್ನಿತರ ಹಣಕಾಸು ಸಂಸ್ಥೆಗಳು ಹೂಡಿಕೆ ಮಾಡಲು ಜನರಿಗೆ ಅವಕಾಶವನ್ನು ನೀಡುತ್ತದೆ. ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಅನಾನೂಕೂಲಗಳು ಕೂಡ ಆಗುತ್ತವೆ.
ಜನಸಾಮಾನ್ಯರು ಹೆಚ್ಚಾಗಿ FD ಮಾಡಲು ಬಯಸುತ್ತಾರೆ. ಇದೀಗ ಈ ಪ್ರತಿಷ್ಠಿತ ಬ್ಯಾಂಕ್ ನ FD ಬಡ್ಡಿದರದ ಬಗ್ಗೆ ಮಾಹಿತಿ ತಿಳಿಯೋಣ.
Fincare Small Finance Bank
ಸ್ಥಿರ ಠೇವಣಿಯಲ್ಲಿನ ಹೂಡಿಕೆಯು ಹೂಡಿಕೆದಾರರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಇನ್ನು ವಿವಿಧ ರೀತಿಯ ಎಫ್ ಡಿ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೊದಲು ಅದರ ನಿಯಮಗಳ ಬಗ್ಗೆ ಮಾಹಿತಿ ತಿಳಿಯುವುದು ಉತ್ತಮ. ಇದೀಗ ದೇಶದ ಪ್ರತಿಷ್ಠಿತ ಬ್ಯಾಂಕ್ FD ಹೂಡಿಕೆಯಲ್ಲಿ ಉತ್ತಮ ಕೊಡುಗೆಯನ್ನು ನೀಡುತ್ತಿದೆ. ಸ್ಥಿರ ಠೇವಣಿಯ ಬಡ್ಡಿದರವನ್ನು ಈ ಬ್ಯಾಂಕ್ ಪರಿಷ್ಕರಿಸಿದ್ದು, ಜನಸಾಮಾನ್ಯರು ಈ ಬಗ್ಗೆ ಮಾಹಿತಿ ತಿಳಿಯುವುದು ಉತ್ತಮ.
1000 ದಿನಗಳ FD ಮೇಲೆ 9% ಕ್ಕಿಂತ ಹೆಚ್ಚು ಬಡ್ಡಿ
ಇನ್ನು Fincare Small Finance Bank 2 ಕೋಟಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳ ಬಡ್ಡಿ ದರವನ್ನು ಬ್ಯಾಂಕ್ ಪರಿಷ್ಕರಿಸಿದೆ. ಬ್ಯಾಂಕ್ ಹಿರಿಯ ನಾಗರಿಕರಿಗೆ 1000 ದಿನದ ನಿಶ್ಚಿತ ಠೇವಣಿಗಳ ಮೇಲೆ 9.11% ವರೆಗೆ ಬಡ್ಡಿಯನ್ನು ನೀಡುತ್ತಿದೆ.
ಹಾಗೆಯೆ ಬ್ಯಾಂಕ್ ಸಾಮಾನ್ಯ ಜನರಿಗೆ ಅದೇ ಅವಧಿಯ ಸ್ಥಿರ ಠೇವಣಿಗಳ ಮೇಲೆ ಶೇಕಡಾ 8.51 ಬಡ್ಡಿಯನ್ನು ನೀಡುತ್ತಿದೆ. Fincare Small Finance Bank ಸಾಮಾನ್ಯ ಗ್ರಾಹಕರಿಗೆ 7 ದಿನಗಳಿಂದ 10 ವರ್ಷಗಳವರೆಗೆ ಸ್ಥಿರ ಠೇವಣಿಗಳ ಮೇಲೆ 3% ರಿಂದ 8.51% ವರೆಗೆ ಬಡ್ಡಿಯನ್ನು ನೀಡುತ್ತಿದೆ. ಇನ್ನು ಈ ಬ್ಯಾಂಕ್ ಹಿರಿಯ ನಾಗರಿಕರಿಗೆ ಶೇಕಡಾ 3.60 ರಿಂದ 9.11 ರವರೆಗೆ ಬಡ್ಡಿಯನ್ನು ನೀಡುತ್ತಿದೆ.
ಅವಧಿಗಳಿಗೆ ಅನುಗುಣವಾಗಿ ಬ್ಯಾಂಕ್ FD ಬಡ್ಡಿದರ
* ಬ್ಯಾಂಕ್ 7 ದಿನಗಳಿಂದ 14 ದಿನಗಳ FD ಗಳ ಮೇಲೆ 3% ಬಡ್ಡಿಯನ್ನು ನೀಡುತ್ತದೆ. ಆದರೆ, ಸ್ಮಾಲ್ ಫೈನಾನ್ಸ್ ಬ್ಯಾಂಕ್ 15 ದಿನಗಳಿಂದ 30 ದಿನಗಳವರೆಗೆ ಸ್ಥಿರ ಠೇವಣಿಗಳ ಮೇಲೆ 4.50% ಬಡ್ಡಿಯನ್ನು ನೀಡುತ್ತದೆ.
*ಬ್ಯಾಂಕ್ 31 ದಿನಗಳಿಂದ 45 ದಿನಗಳ ಎಫ್ ಡಿಗಳಿಗೆ 4.75% ಬಡ್ಡಿಯನ್ನು ಮತ್ತು 46 ದಿನಗಳಿಂದ 90 ದಿನಗಳ ಎಫ್‌ಡಿಗಳಿಗೆ 5.25% ಬಡ್ಡಿಯನ್ನು ನೀಡುತ್ತದೆ.
* ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 91 ದಿನಗಳಿಂದ 180 ದಿನಗಳವರೆಗೆ FD ಗಳ ಮೇಲೆ 5.75% ಬಡ್ಡಿಯನ್ನು ನೀಡುತ್ತದೆ. ಹಾಗೆಯೆ ಬ್ಯಾಂಕ್ 181 ದಿನಗಳಿಂದ 365 ದಿನಗಳವರೆಗೆ ಸ್ಥಿರ ಠೇವಣಿಗಳ ಮೇಲೆ 6.50% ನೀಡುತ್ತದೆ.
*ಬ್ಯಾಂಕ್ 12 ತಿಂಗಳಿಂದ 15 ತಿಂಗಳ ಸ್ಥಿರ ಠೇವಣಿಗಳ ಮೇಲೆ 7.50% ಬಡ್ಡಿಯನ್ನು ನೀಡುತ್ತದೆ. ಅದೇ ಸಮಯದಲ್ಲಿ, ಬ್ಯಾಂಕ್ 15 ತಿಂಗಳು ಮತ್ತು 1 ದಿನದಿಂದ 499 ದಿನಗಳವರೆಗೆ ಸ್ಥಿರ ಠೇವಣಿಗಳ ಮೇಲೆ ಶೇಕಡಾ 7.75 ರ ಬಡ್ಡಿಯನ್ನು ನೀಡುತ್ತಿದೆ. ಬ್ಯಾಂಕ್ 500 ದಿನಗಳ FD ಮೇಲೆ 8.11% ಬಡ್ಡಿಯನ್ನು ನೀಡುತ್ತಿದೆ.