Upendra: ಜೈಲಿಗೆ ಹೋಗುವ ಭೀತಿಯಲ್ಲಿ ನಟ ಉಪೇಂದ್ರ, ಈ ವಿಷಯವಾಗಿ ಉಪೇಂದ್ರ ಮೇಲೆ FIR ದಾಖಲು.

ಉಪೇಂದ್ರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು, ಅರೆಸ್ಟ್ ಆಗ್ತಾರಾ ಉಪೇಂದ್ರ.

Upendra Controversy: ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು ಈ ಹಿಂದೆ ಕಬ್ಜ ಚಿತ್ರದ ಸಲುವಾಗಿ ಬಾರಿ ಸುದ್ದಿಯಾಗಿದ್ದರು. ರಿಯಲ್ ಸ್ಟಾರ್ ನ ಕಬ್ಜ ಮೂವಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಇನ್ನು ರಿಯಲ್ ಸ್ಟಾರ್ ಸಿನಿಮಾ ಜೊತೆಗೆ ಪ್ರಜಾಕಿಯಾದಲ್ಲೂ ಕೂಡ ಬ್ಯುಸಿ ಆಗಿ ಇರುತ್ತಿದ್ದರು. ಸಾಮಾಜಿಕ ಜಾಲಾತಾಣದಲ್ಲಿ ಆಗಾಗ ನಟ ಉಪೇಂದ್ರ ರಾಜಕೀಯ ವಿಷಯವಾಗಿ ಲೈವ್ ನಲ್ಲಿ ಕೆಲವು ವಿಷಯಗಳನ್ನು ಚರ್ಚಿಸುತ್ತಾರೆ.

ಇನ್ನು ಉಪೇಂದ್ರ ಅವರ ಪ್ರಜಕೀಯ ಪಕ್ಷಕ್ಕೆ ಬಾರಿ ಬೆಂಬಲವಿದೆ. ಆದರೆ ಇದೀಗ ಉಪೇಂದ್ರ ಅವರು ಹೊಸ ವಿವಾದದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಪರಿಶಿಷ್ಟರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪ ಉಪೇಂದ್ರ ಅವರ ಮೇಲಿದೆ. ಇತ್ತೀಚಿಗೆ ಉಪೇಂದ್ರ ಅವರು ಹಂಚಿಕೊಂಡಿದ್ದ ವಿಡಿಯೋ ಈ ಅಪವಾದಕ್ಕೆ ಕಾರಣವಾಗಿದೆ.

Register an atrocity case against Upendra
Image Credit: tupaki

ರಿಯಲ್ ಸ್ಟಾರ್ ವಿರುದ್ಧ ಪ್ರಕರಣ ದಾಖಲು
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂಧನ್ ಅವರು ಬೆಂಗಳೂರಿನ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಉಪೇಂದ್ರ ಅವರ ವಿರುದ್ಧ ಅಟ್ರಾಸಿಟಿ ಮೊಕದ್ದಮೆ ಹೂಡಿದ್ದಾರೆ. ಇವರ ಆರೋಪದ ಮೇರೆಗೆ ಉಪೇಂದ್ರ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪರಿಶಿಷ್ಟರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಾರಣ ಉಪೇಂದ್ರ ಅವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಉಪೇಂದ್ರ ಅವರ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು ಅವರ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಲಾಗುತ್ತಿದೆ.

ಉಪೇಂದ್ರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು
ಹಲವು ಸಂಘಟನೆಗಳು ಉಪೇಂದ್ರ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಉಪೇಂದ್ರ ಅವರ ಬಂಧನಕ್ಕೆ ಒತ್ತಾಯ ಮಾಡಲಾಗುತ್ತಿದೆ. ಇನ್ನು ನಟ ಉಪೇಂದ್ರ ಅವರು ತಾವು ನೀಡಿದ ಹೇಳಿಕೆಗೆ ಕ್ಷಮೆ ಕೇಳಿ ಸೋಶಿಯಲ್ ಮೀಡಿಯಾದಲ್ಲಿ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಆದರೂ ಉಪೇಂದ್ರ ಅವರ ಹೇಳಿಕೆ ಆಕ್ಷೇಪಾರ್ಹವಾಗಿದೆ ಎಂದು ಅವರನ್ನು ಬಂಧಿಸುವಂತೆ ಪ್ರತಿಭಟನೆ ಜೋರಾಗಿವೆ.

A case has been registered against actor Upendra
Image Credit: imdb

ಉಪೇಂದ್ರ ಅವರ ಹೇಳಿಕೆ ಕೆಲ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ಅವರ ವಿರುದ್ಧ ಅಟ್ರಾಸಿಟಿ ಕೇಸ್ ಧಾಖಲಿಸಿ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರು ಆರೋಪ ಮಾಡಿದ್ದಾರೆ.

Join Nadunudi News WhatsApp Group

ಅರೆಸ್ಟ್ ಆಗ್ತಾರಾ ಉಪೇಂದ್ರ
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಉಪೇಂದ್ರ ಅವರ ಹೇಳಿಕೆಗೆ ಪರ ವಿರೋಧದ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ವಿಡಿಯೋ ಡಿಲೀಟ್ ಮಾಡಿ ಕ್ಷಮೆ ಯಾಚಿಸಿದ ಮೇಲೆ ಉಪೇಂದ್ರ ಅವರನ್ನು ಬಂಧಿಸುವ ಅಗತ್ಯ ಇಲ್ಲ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಉಪೇಂದ್ರ ಅವರ ಬಂಧನಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಅಟ್ರಾಸಿಟಿ ಕೇಸ್ ದಾಖಲಾಗಿರುವ ಕಾರಣ ಉಪೇಂದ್ರ ಅವರ ಬಂಧನದ ಬಗ್ಗೆ ಕಾನೂನು ಯಾವ ರೀರಿಯ ಕ್ರಮ ಕೈಗೊಳ್ಳುತ್ತದೆ ಎನ್ನುವುದನ್ನು ಕಾದೂ ನೋಡಬೇಕಿದೆ.

Join Nadunudi News WhatsApp Group