Solaris Smartwatch: ಒಮ್ಮೆ ಚಾರ್ಜ್ ಮಾಡಿದರೆ 9 ದಿನ ಬ್ಯಾಟರಿ ಬ್ಯಾಕ್ ಅಪ್, ಅಗ್ಗದ ಸ್ಮಾರ್ಟ್ ವಾಟಚ್ ಗೆ ಜನರು ಫಿದಾ.
ಕಡಿಮೆ ಬೆಲೆಗೆ ಇನ್ನೊಂದು ಉತ್ತಮ ಬ್ಯಾಟರಿ ಬ್ಯಾಕ್ ಅಪ್ ಸ್ಮಾರ್ಟ್ ವಾಚ್ ಲಾಂಚ್.
Fire Boltt Solaris Smartwatch: ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳಷ್ಟೇ ಸ್ಮಾರ್ಟ್ ವಾಚ್ ಗಳು ಕೂಡ ಹೆಚ್ಚು ಬೇಡಿಕೆ ಪಡೆದಿದೆ ಎನ್ನಬಹುದು. ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. Smartwatch ಗಳ ಬೇಡಿಕೆ ಹೆಚ್ಚುತ್ತಿದ್ದು ಸಾಮಾನ್ಯ ವಾಚ್ ಗಳು ಇದೀಗ ಮೂಲೆಗುಂಪಾಗುತ್ತಿದೆ ಎಂದರೆ ತಪ್ಪಗಲಾರದು. ಸ್ಮಾರ್ಟ್ ವಾಚ್ ಧರಿಸುವುದು ಇತ್ತೀಚಿಗೆ ಟ್ರೆಂಡ್ ಆಗಿಬಿಟ್ಟಿದೆ. ಜನರು ಕೂಡ ಟ್ರೆಂಡ್ ಗೆ ತಕ್ಕನಂತೆ ಬದಲಾಗುತ್ತ ಹೊಸ ಸ್ಮಾರ್ಟ್ ವಾಚ್ ಖರೀದಿಗೆ ಮುಂದಾಗುತ್ತಾರೆ.
ಹೊಸ ಹೊಸ ಮಾದರಿಯ ಎಲೆಕ್ಟ್ರಾನಿಕ್ ವಸ್ತುಗಳ ಮಾರುಕಟ್ಟೆಗೆ ಬರುತ್ತಿದ್ದಂತೆ ಅದನ್ನು ಬಳಸಲು ಇಷ್ಟಪಡುತ್ತಾರೆ. ಇನ್ನು ಸ್ಮಾರ್ಟ್ ವಾಚ್ ಧರಿಸಲು ಜನರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಇದೀಗ ಮಾರುಕಟ್ಟೆಗೆ ಹೊಸ Fire Bolt ಬ್ರಾಂಡ್ ಸ್ಮಾರ್ಟ್ ವಾಚ್ ಲಗ್ಗೆ ಇಟ್ಟಿದೆ. ನೀವು ಹೊಸ ಸ್ಮಾರ್ಟ್ ವಾಚ್ ಖರೀದಿಯ ಬಗ್ಗೆ ಯೋಚಿಸುತ್ತಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.
Fire Bolt Solaris Smartwatch
ಫೈರ್ ಬೋಲ್ಟ್ ಕಂಪನಿ ಇಲೆಕ್ಟ್ರಾನಿಕ್ ಡಿವೈಸ್ ಪರಿಚಯಿಸುವಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಇದೀಗ ಈ ಕಂಪನಿಯು ಮಾರುಕಟ್ಟೆಯಲ್ಲಿ Solaris Smartwatch ಅನ್ನು ಪರಿಚಯಿಸಿದೆ. Amazon ಅಥವಾ Fire Bolt ಕಂಪನಿಯ ಅಧಿಕೃತ Website ಗೆ ಭೇಟಿ ನೀಡುವ ಮೂಲಕ ಸ್ಮಾರ್ಟ್ ವಾಚ್ ಅನ್ನು ಬುಕ್ ಮಾಡಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಈ Solaris Smartwatch ಅಗ್ಗದ ಬೆಲೆಯಲ್ಲಿ ಬಿಡುಗಡೆ ಆಗಿದೆ.
Fire Bolt Solaris Smartwatch Display
ಈ ನೂತನ ವಿನ್ಯಾಸದ Solaris Smartwatch ಹಾರ್ಟ್ ಬೀಟ್ ಮಾನಿಟರ್, SpO2 ಸೆನ್ಸಾರ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್ ವಾಚ್ 1 .78 ಇಂಚಿನ ಡಿಸ್ ಪ್ಲೇ ಹೊಂದಿದೆ. ಇನ್ನು IP68 ರೇಟಿಂಗ್ ಅನ್ನು ಹೊಂದಿದ್ದು ಇದು ಧೂಳು ಮತ್ತು ನೀರಿನಿಂದ ಹೆಚ್ಚಿನ ರಕ್ಷಣೆ ನೀಡುತ್ತದೆ. ಈ ಸ್ಮಾರ್ಟ್‌ವಾಚ್ 100 + ಕ್ಲೌಡ್ ಆಧಾರಿತ ವಾಚ್ ಫೇಸ್ ಆಯ್ಕೆಯನ್ನು ಹೊಂದಿದೆ. ಇನ್ನು ಡಿಸ್ಪ್ಲೇ 368 x 448 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ.
Fire Bolt Solaris Smartwatch Price And Feature
ಇನ್ನು ನೀವು ಈ ಸ್ಮಾರ್ಟ್ ವಾಚ್ ನಲ್ಲಿ ಬ್ಲೂಟೂತ್ ಕಾಲಿಂಗ್ ಫೀಚರ್ ಅನ್ನು ಪಡೆಯಬಹುದು. ಈ ಫೀಚರ್ ನ ಮೂಲಕ ನಿಮ್ಮ ಸ್ಮಾರ್ಟ್ ಫೋನ್ ಗೆ ಬರುವ ಕಾಲ್ ಗಳನ್ನೂ ಈ ವಾಚ್ ನ ಮೂಲಕ ಸ್ವೀಕರಿಸಬಹುದು. ಇದಕ್ಕಾಗಿ ಇನ್ ಬಿಲ್ಟ್ ಮೈಕ್ ಮತ್ತು ಫೀಚರ್ ಅನ್ನು ಅಳವಡಿಸಲಾಗಿದೆ. ಇನ್ನು ಈ Solaris Smartwatch ಗೆ ಕಂಪನಿಯು 2,499 ರೂ. ಗಳನ್ನೂ ನಿಗಧಿಪಡಿಸಿದೆ. ಇನ್ನು Copper Glow, Shadow Black and Sterling Silver ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.