Petrol Bunk: ಪೆಟ್ರೋಲ್ ಬಂಕ್ ನಲ್ಲಿ ಬೆಂಕಿ ದುರಂತ, 18 ವರ್ಷದ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ.
ಪೆಟ್ರೋಲ್ ಹಾಕಿಸಿಕೊಳ್ಳುವ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಯುವತಿ ಜೀವನನ್ನ ಕಳೆದುಕೊಂಡಿದ್ದಾಳೆ.
Petrol Bunk Accident: ಪೆಟ್ರೋಲ್ ಬಂಕ್ (Petrol Bunk) ನಲ್ಲಿ ಭೀಕರ ದುರಂತ ಒಂದು ನಡೆದಿದೆ. ಈ ಘಟನೆಯಲ್ಲಿ ಯುವತಿಯೊಬ್ಬಳು ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬಡವನಹಳ್ಳಿ ಗ್ರಾಮದ ಪೆಟ್ರೋಲ್ ಬಂಕ್ ನಲ್ಲಿ ಕ್ಯಾನ್ ಗೆ ಪೆಟ್ರೋಲ್ ತುಂಬಿಸುವಾಗ ಬೆಂಕಿ ಹೊತ್ತಿಕೊಂಡು ಒಬ್ಬ ಯುವತಿ ಒಬ್ಬಳು ಸಾವನ್ನಪ್ಪಿದ್ದಾಳೆ. ಇನ್ನೊಬ್ಬ ಮಹಿಳೆಗೆ ಗಂಭೀರ ಗಾಯವಾಗಿದೆ.
ಪೆಟ್ರೋಲ್ ಬಂಕ್ ನಲ್ಲಿ ನಡೆದ ದುರಂತ
ದ್ವಿಚಕ್ರ ವಾಹನದ ಮೇಲೆ ಕ್ಯಾನ್ ಇಟ್ಟು ಪೆಟ್ರೋಲ್ ತುಂಬಿಸುವಾಗ ಈ ಅನಾಹುತ ನಡೆದಿದೆ. ಮೃತ ದುರ್ದೈವಿಯನ್ನು 18 ವರ್ಷದ ಭವ್ಯ ಎಂದು ಗುರುತಿಸಲಾಗಿದೆ. ಬಂಕ್ ಗೆ ಬೆಂಕಿ ಹೊತ್ತಿಕೊಂಡ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು ಕ್ಷಣಮಾತ್ರದಲ್ಲಿ ಬೆಂಕಿಯು ಯುವತಿಯನ್ನು ಆವರಿಸಿದೆ.
ರತ್ನಮ್ಮ ಗಂಭೀರವಾಗಿ ಗಾಯಗೊಂಡ ಮಾಹಿಳೆಯಾಗಿದ್ದು ಮಗಳು ಭವ್ಯಳೊಂದಿಗೆ ಪೆಟ್ರೋಲ್ ಬ್ಯಾಂಕಿಗೆ ಬಂದಿದ್ದರು, ಪೆಟ್ರೋಲ್ ಬ್ಯಾಂಕ್ ನಲ್ಲಿ ಪೆಟ್ರೋಲ್ ತುಂಬಿಸುವಾಗ ಅನಾಹುತ ನಡೆದು ಮಗಳ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಪೆಟ್ರೋಲ್ ಬಂಕ್ ನಲ್ಲಿ ನಡೆದ ದುರಂತದಿಂದ 18 ವರ್ಷದ ಯುವತಿ ಸಾವು
18 ವರ್ಷದ ಹುಡುಗಿ ಭವ್ಯಾನನ್ನು ಬೆಂಕಿ ಹೊತ್ತಿಕೊಂಡ ಕೂಡಲೇ ಶಿರಾ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯುವತಿ ಪಾತ್ರೆಯಲ್ಲಿ ನಿಧನ ಹೊಂದಿದ್ದಾಳೆ.