Fire boltt: 1999 ರೂಪಾಯಿಯ ಈ ಸ್ಮಾರ್ಟ್ ವಾಚ್ ಖರೀದಿಸಲು ಮಗಿಬಿದ್ದ ಜನರು, ಆಪಲ್ ವಾಚ್ ಗಿಂತ ಇದೆ ಬೆಸ್ಟ್.
ಫೈರ್ ಬೋಲ್ಟ್ ಕಂಪನಿ ಮಾರುಕಟ್ಟೆಯಲ್ಲಿ ಸ್ಟಾರ್ ಲೈಟ್ ಸ್ಮಾರ್ಟ್ ವಾಚ್ ಅನ್ನು ಪರಿಚಯಿಸಿದೆ.
Fireboltt Starlight Smartwatch: ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ಸ್ಮಾರ್ಟ್ ಫೋನ್ ಗಳಷ್ಟೇ ಸ್ಮಾರ್ಟ್ ವಾಚ್ ಗಳು ಕೂಡ ಹೆಚ್ಚು ಬೇಡಿಕೆ ಪಡೆದಿದೆ. ಸ್ಮಾರ್ಟ್ ವಾಚ್ ಗಳ ಬಳಕೆ ಹೆಚ್ಚುತ್ತಿದೆ. ಸ್ಮಾರ್ಟ್ ವಾಚ್ (Smart Watch) ಗಳ ಬೇಡಿಕೆ ಹೆಚ್ಚುತ್ತಿದ್ದು ಸಾಮಾನ್ಯ ವಾಚ್ ಗಳು ಇದೀಗ ಮೂಲೆಗುಂಪಾಗಿದೆ. ಸ್ಮಾರ್ಟ್ ವಾಚ್ ಧರಿಸುವುದು ಇತ್ತೀಚಿಗೆ ಫ್ಯಾಶನ್ ಆಗಿಬಿಟ್ಟಿದೆ. ಜನರು ಕೂಡ ಟ್ರೆಂಡ್ ಗೆ ತಕ್ಕನಂತೆ ಬದಲಾಗುತ್ತ ಇರುತ್ತಾರೆ.
ಹೊಸ ಹೊಸ ಮಾದರಿಯ ಎಲೆಕ್ಟ್ರಾನಿಕ್ ವಸ್ತುಗಳ ಮಾರುಕಟ್ಟೆಗೆ ಬರುತ್ತಿದ್ದಂತೆ ಅದನ್ನು ಬಳಸಲು ಇಷ್ಟಪಡುತ್ತಾರೆ. ಇನ್ನು ಸ್ಮಾರ್ಟ್ ವಾಚ್ ಧರಿಸಲು ಜನರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಇದೀಗ ಮಾರುಕಟ್ಟೆಗೆ ಹೊಸ ಫೈರ್ ಬೋಲ್ಟ್ (Fire bolt) ಬ್ರಾಂಡ್ ಸ್ಮಾರ್ಟ್ ವಾಚ್ ಲಗ್ಗೆ ಇಟ್ಟಿದೆ. ನೀವು ಹೊಸ ಸ್ಮಾರ್ಟ್ ವಾಚ್ ಖರೀದಿಯ ಬಗ್ಗೆ ಯೋಚಿಸುತ್ತಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.
ಫೈರ್ ಬೋಲ್ಟ್ ಸ್ಟಾರ್ ಲೈಟ್ ಸ್ಮಾರ್ಟ್ ವಾಚ್ (Fire boltt Starlight Smartwatch)
ಫೈರ್ ಬೋಲ್ಟ್ ಕಂಪನಿ ಇಲೆಕ್ಟ್ರಾನಿಕ್ ಡಿವೈಸ್ ಪರಿಚಯಿಸುವಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಇದೀಗ ಈ ಕಂಪನಿಯು ಮಾರುಕಟ್ಟೆಯಲ್ಲಿ ಸ್ಟಾರ್ ಲೈಟ್ ಸ್ಮಾರ್ಟ್ ವಾಚ್ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್ ವಾಚ್ ಮೆಟಲ್ ಯುನಿಬಾಡಿಯೊಂದಿಗೆ ಪ್ರೀಮಿಯಂ ಲುಕ್ ಅನ್ನು ಹೊಂದಿದೆ. ಫ್ಯಾಶನ್ ಸ್ಮಾರ್ಟ್ ವಾಚ್ ಬಳಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಟಾರ್ ಲೈಟ್ ಸ್ಮಾರ್ಟ್ ವಾಚ್ ಅಗ್ಗದ ಬೆಲೆಯಲ್ಲಿ ಬಿಡುಗಡೆ ಆಗಿದೆ.
ಸ್ಟಾರ್ ಲೈಟ್ ಸ್ಮಾರ್ಟ್ ವಾಚ್ ಫೀಚರ್
ಈ ನೂತನ ವಿನ್ಯಾಸದ ಸ್ಟಾರ್ ಲೈಟ್ ಸ್ಮಾರ್ಟ್ ವಾಚ್ ಹಾರ್ಟ್ ಬೀಟ್ ಮಾನಿಟರ್, SpO2 ಸೆನ್ಸಾರ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್ ವಾಚ್ 2 .1 ಇಂಚಿನ ಡಿಸ್ ಪ್ಲೇ ಹೊಂದಿದೆ. ಇನ್ನು IP68 ರೇಟಿಂಗ್ ಅನ್ನು ಹೊಂದಿದ್ದು ಇದು ಧೂಳು ಮತ್ತು ನೀರಿನಿಂದ ಹೆಚ್ಚಿನ ರಕ್ಷಣೆ ನೀಡುತ್ತದೆ. ಈ ಸ್ಮಾರ್ಟ್‌ವಾಚ್ ಸ್ಟೇನ್‌ಲೆಸ್ ಸ್ಟೀಲ್ ಚಾಸಿಸ್ ಮತ್ತು ಸ್ಟ್ರಾಪ್ ವಸ್ತುಗಳೊಂದಿಗೆ ಸ್ಕ್ವೇರ್ ಡಯಲ್ ಅನ್ನು ಹೊಂದಿದೆ. ಇನ್ನು UI ನ್ಯಾವಿಗೇಶನ್ ಗಾಗಿ ಬಲಭಾಗದಲ್ಲಿ ಭೌತಿಕ ಬಟನ್ ಅನ್ನು ನೀಡಲಾಗಿದೆ.
ಸ್ಟಾರ್ ಲೈಟ್ ಸ್ಮಾರ್ಟ್ ವಾಚ್
ಇನ್ನು ನೀವು ಈ ಸ್ಮಾರ್ಟ್ ವಾಚ್ ನಲ್ಲಿ ಬ್ಲೂಟೂತ್ ಕಾಲಿಂಗ್ ಫೀಚರ್ ಅನ್ನು ಪಡೆಯಬಹುದು. ಈ ಫೀಚರ್ ನ ಮೂಲಕ ನಿಮ್ಮ ಸ್ಮಾರ್ಟ್ ಗೆ ಬರುವ ಕಾಲ್ ಗಳನು ಈ ವಾಚ್ ನ ಮೂಲಕ ಸ್ವೀಕರಿಸಬಹುದು. ಇದಕ್ಕಾಗಿ ಇನ್ ಬಿಲ್ಟ್ ಮೈಕ್ ಮತ್ತು ಫೀಚರ್ ಅನ್ನು ಅಳವಡಿಸಲಾಗಿದೆ. ಇನ್ನು ಈ ಸ್ಟಾರ್ ಲೈಟ್ ಸ್ಮಾರ್ಟ್ ವಾಚ್ ಗೆ ಕಂಪನಿಯು 1,999 ರೂ. ಗಳನ್ನೂ ನಿಗಧಿಪಡಿಸಿದೆ. ಆಗಸ್ಟ್ 23 ರಿಂದ ನೀವು ಫೈರ್ ಬೋಲ್ಟ್ ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸ್ಮಾರ್ಟ್ ವಾಚ್ ಅನ್ನು ಬುಕ್ ಮಾಡಬಹುದು.