Fireworks Ban: ದೀಪಾವಳಿ ಹಬ್ಬಕ್ಕಾಗಿ ರಾಜ್ಯದಲ್ಲಿ ಜಾರಿಗೆ ಬಂದು ಹೊಸ ರೂಲ್ಸ್, ಪಟಾಕಿಗಳಲ್ಲಿ QR ಕೋಡ್ ಕಡ್ಡಾಯ.

ಇನ್ನುಮುಂದೆ ಪಟಾಕಿಗಳಲ್ಲಿ QR ಕೋಡ್ ಸ್ಕ್ಯಾನರ್ ಇರಲಿದೆ.

QR Code Scanner For Green firecrackers: ಸದ್ಯ ರಾಜ್ಯದಲ್ಲಿ ನಡೆತಯುತ್ತಿರುವ ಪಟಾಕಿ ದುರಂತದ ಬಗ್ಗೆ ಸರ್ಕಾರ ಚರ್ಚೆ ನಡೆಸುತ್ತಿದೆ. ಸದ್ಯ ಅತ್ತಿಬೆಲೆ ಪಟಾಕಿ ದುರಂತದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಇದೀಗ ರಾಜ್ಯಾದ್ಯಂತ ಪಟಾಕಿ ಲೈಸೆನ್ಸ್ ದಾರರ ಸ್ಥಳ ಪರಿಶೀಲನೆ ನಡೆಸಿದೆ.

ಪಟಾಕಿ ಅಂಗಡಿಯ ಮಾಲೀಕರು ಪಡೆದ ಲೈಸೆನ್ಸ್ ನಲ್ಲಿ ಯಾವುದೇ ತಪ್ಪಿದ್ದರು ಕೂಡ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ರಾಜ್ಯದ ಮುಖ್ಯಮಂತ್ರಿ Siddaramaiah ಅವರು ಆದೇಶ ಹೊರಡಿಸಿದ್ದಾರೆ. ಇದೀಗ ಕರ್ನಾಟಕದಲ್ಲಿ ಪಟಾಕಿ ಬ್ಯಾನ್ ಆದ ಬೆನ್ನಲ್ಲೇ ಹಸಿರು ಪಟಾಕಿ ಪತ್ತೆಹಚ್ಚುವಿಕೆಗೆ ಹೊಸ ವಿಧಾನವನ್ನು ಕಂಡು ಹಿಡಿಯಲಾಗಿದೆ.

firecrackers ban in karnataka
Image Credit: Original Source

ಇನ್ನುಮುಂದೆ ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶ
ರಾಜ್ಯ ಸರ್ಕಾರ ಇದೀಗ ಪಟಾಕಿ ಬಳಕೆಗೆ ಹೊಸ ನಿಯಮ ಜಾರಿಗೊಳಿಸಿದೆ. ಗಣೇಶ ಹಬ್ಬ, ಮದುವೆ, ರಾಜಕೀಯ ಸಮಾರಂಭಗಳಲ್ಲಿ ಪಟಾಕಿಯನ್ನು ನಿಷೇಧಗೊಳಿಸಲಾಗಿದೆ. ಇನ್ನೇನು ದೀಪಾವಳಿ ಆರಂಭವಾಗಲಿದ್ದು, ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ ಪಟಾಕಿ ಬ್ಯಾನ್ ಎಂದ ಸಿದ್ದರಾಮಯ್ಯ
ಪ್ರತಿಯೊಬ್ಬರೂ, ದೀಪಾವಳಿಯಲ್ಲಿ ಹಸಿರು ಪಟಾಕಿ ಬಳಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಕಡ್ಡಾಯವಾಗಿ ಹಸಿರು ಪಟಾಕಿಯನ್ನೇ ಹೊಡೆಯಬೇಕು, ಇನ್ನಿತರ ಸಮಾರಂಭಗಳಲ್ಲಿ ಪಟಾಕಿ ನಿಷೇಧಗೊಳಿಸಲಾಗುತ್ತದೆ. ರಾಜಕೀಯ ಕಾರ್ಯಕ್ರಮ ,ಗಣೇಶ ಹಬ್ಬ ಹಾಗೂ ಮದುವೆಯಲ್ಲಿ ಪಟಾಕಿ ಸಿಡಿಸುವಂತಿಲ್ಲ. ಪಟಾಕಿ ಸಿಡಿಸುವಾಗ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಮಹತ್ವದ ಆದೇಶ ಹೊರಡಿಸಿದ್ದಾರೆ.

QR Code applicable in firecrackers
Image Credit: jaipurstuff

ಹಸಿರು ಪಟಾಕಿ ಪತ್ತೆಹೆಚ್ಚುವಿಕೆಗೆ ಬಂತು QR Code Scanner
ಇನ್ನು 2018 ರಲ್ಲಿ ಸುಪ್ರೀಂ ಕೋರ್ಟ್ ಪಟಾಕಿಗಳನ್ನು ನಿಷೇದಿಸಿದ್ದು, ದೆಹಲಿಯಲ್ಲಿ NCR ನಲ್ಲಿ ಹಸಿರು ಪಟಾಕಿಗಳನ್ನು ಸಿಡಿಸಲು ಮಾತ್ರ ಅವಕಾಶ ನೀಡಿತ್ತು. ಸದ್ಯ ರಾಜ್ಯದಲ್ಲಿ ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ. ಇದೀಗ ಹಸಿರು ಪಟಾಕಿ ಪತ್ತೆಹೆಚ್ಚುವಿಕೆಗೆ ಸರ್ಕಾರ ಹೊಸ ವಿಧಾನವನ್ನು ಕಂಡು ಹಿಡಿದಿದೆ. ಪಟಾಕಿ ಬಾಕ್ಸ್ ಮೇಲಿರುವ QR Code ಅನ್ನು ಸ್ಕಾನ್ ಮಾಡುವ ಮೂಲಕ ಹಸಿರು ಪಟಾಕಿಯನ್ನು ಸುಲಭವಾಗಿ ಪತ್ತೆಹಚ್ಚಿಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group