Electric SUV: ಒಂದೇ ಚಾರ್ಜ್ 563 Km ಮೈಲೇಜ್ ಕೊಡುತ್ತೆ ಈ SUV, ಭಾರತದಲ್ಲಿ ಈ ಕಾರಿಗೆ ಹೆಚ್ಚಾದ ಬೇಡಿಕೆ.
ಸೆಪ್ಟೆಂಬರ್ ನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ 563 ಕಿಲೋಮೀಟರ್ ಮೈಲೇಜ್ ನೀಡುವ ಎಲೆಕ್ಟ್ರಿಕ್ SUV.
Fisker Ocean Electric SUV:ಭಾರತೀಯ ಮಾರುಕಟ್ಟೆಗೆ ಇದೀಗ ಹೊಸ ಸುಧಾರಿತ ಎಲೆಕ್ಟ್ರಿಕ್ ಕಾರ್ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಾಗಿರುವ ಎಲ್ಲಾ ರೀತಿಯ ಕಾರ್ ಗಳ ಜೊತೆ ಈ ಹೊಸ ಎಸ್ ಯುವಿ ಸ್ಪರ್ಧಿಸಲಿದೆ.
ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಪ್ರಮುಖ ಓಷನ್ ಎಲೆಕ್ಟ್ರಿಕ್ ಹೊಸ ಎಸ್ ಯುವಿನೊಂದಿಗೆ ಮಾರುಕಟ್ಟೆಗೆ ಬರಲಿದೆ. EV ಅನ್ನು ಯುಎಸ್ ಮಾರುಕಟ್ಟೆಗಳಲ್ಲಿ ಟೆಸ್ಲಾ ಮಾಡೆಲ್ y ಗೆ ಪ್ರತಿಸ್ಪರ್ಧಿಸುತ್ತದೆ ಎಂದು ಪರಿಗಣಿಸಲಾಗಿದೆ. ಫಿಸ್ಕರ್ ಎಲೆಕ್ಟ್ರಿಕ್ SUV ಯ ಸೀಮಿತ ಆವೃತ್ತಿಯನ್ನು ಮಾತ್ರ ಮಾರಾಟ ಮಾಡುತ್ತದೆ.
ಫಿಸ್ಕರ್ ಓಷನ್ ಎಲೆಕ್ಟ್ರಿಕ್ SUV
ಈ ವರ್ಷದ ಸೆಪ್ಟೆಂಬರ್ ನಲ್ಲಿ ಫಿಸ್ಕರ್ ಓಷನ್ ಎಲೆಕ್ಟ್ರಿಕ್ SUV ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಈ ಫಿಸ್ಕರ್ ಓಷನ್ ಎಲೆಕ್ಟ್ರಿಕ್ SUV ಮಾರುಕಟ್ಟೆಗೆ ಬಿಡುಗಡೆಯಾಗುವ ಕುರಿತು ಯುಎಸ್ ಮೂಲದ EV ತಯಾರಕರು ಮಾಹಿತಿ ನೀಡಿದ್ದಾರೆ. ಫಿಸ್ಕರ್ ಓಷನ್ ಎಲೆಕ್ಟ್ರಿಕ್ SUV 100 ಯುನಿಟ್ ಗಳನ್ನೂ ಮಾತ್ರ ಆರಂಭಿಕವಾಗಿ ಮಾರಾಟ ಮಾಡುವುದಾಗಿ ಫಿಸ್ಕರ್ ಮಾಹಿತಿ ನೀಡಿದೆ. ಇನ್ನು ಬಿಡುಗಡೆಗೊಳ್ಳಲಿರುವ ಫಿಸ್ಕರ್ ಎಲೆಕ್ಟ್ರಿಕ್ SUV ಯನ್ನು ಓಷನ್ ಎಕ್ಸ್ ಟ್ರಿಮ್ ವಿಗ್ಯಾನ್ ಎಂದು ಕರೆಯಲಾಗುತ್ತದೆ.
ಫಿಸ್ಕರ್ ಓಷನ್ ಎಲೆಕ್ಟ್ರಿಕ್ SUV ಬೆಲೆ
ಈ ಫಿಸ್ಕರ್ ಓಷನ್ ಎಲೆಕ್ಟ್ರಿಕ್ SUV ಯುರೋಪಿಯನ್ ಮಾರುಕಟ್ಟೆಯಲ್ಲಿ 69,950 ಯೋರೋ ಆಗಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ಫಿಸ್ಕರ್ ಓಷನ್ ಎಲೆಕ್ಟ್ರಿಕ್ SUV 31 ಲಕ್ಷಕ್ಕೆ ಲಭ್ಯವಾಗಲಿದೆ ಎನ್ನುವ ಮಾಹಿತಿ ಲಭಿಸಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡಗೊಳ್ಳಲಿರುವ ಈ ಎಸ್ ಯುವಿ ಗಳನ್ನೂ ಆಸ್ಟ್ರಿಯದಲ್ಲಿ ತಯಾರಿಸಲಾಗುತ್ತಿದೆ.
ಒಂದೇ ಚಾರ್ಜ್ ನಲ್ಲಿ 563 ಕಿಲೋಮೀಟರ್ ಮೈಲೇಜ್
ಫಿಸ್ಕರ್ ಓಷನ್ ಎಕ್ಸ್ ಸ್ಟ್ರೀಮ್ ಒಂದೇ ಚಾರ್ಜ್ ನಲ್ಲಿ 563 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಟೆಸ್ಲಾ ಮಾಡೆಲ್ y ಒಂದೇ ಚಾರ್ಜ್ ನಲ್ಲಿ 531 ಕಿಲೋಮೀಟರ್ ವ್ಯಾಪ್ತಿಯನ್ನು ನೀಡಲಿದೆ. ಫಿಸ್ಕರ್ ಎಲೆಕ್ಟ್ರಿಕ್ SUV ನಲ್ಲಿ ವಿವಿಧ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಚಾಲಕರ ಸುರಕ್ಷತೆಗಾಗಿ ವಿವಿದ ಫೀಚರ್ ಗಳನ್ನೂ ಇರಿಸಲಾಗಿದೆ.