FD vs SCSS Investment Details: ಹಿರಿಯ ನಾಗರಿಕರು ನಿವೃತ್ತಿಯ ನಂತರ ಪ್ರತಿ ತಿಂಗಳು ಸ್ಥಿರವಾದ ಆದಾಯವನ್ನು ಪಡೆಯಲು ಹಣವನ್ನು ಯಾವ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎಂದು ಯೋಚಿಸುತ್ತಾರೆ. ಇದಕ್ಕಾಗಿ ಭಾರತ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಿರಿಯ ನಾಗರಿಕರಿಗೆ FD ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ ಹೂಡಿಕೆ ಮಾಡಲು ಇರುವ ಆಯ್ಕೆಯಲ್ಲಿ ಎರಡು ಉತ್ತಮವಾದ ಆಯ್ಕೆಯಾಗಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ಬ್ಯಾಂಕ್ FD ಯೋಜನೆ ಇವೆರಡರಲ್ಲಿ ಹಿರಿಯ ನಾಗರಿಕರಿಗೆ ಯಾವುದು ಉತ್ತಮ ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)
ಭಾರತ ಸರ್ಕಾರ ಜಾರಿಗೆ ತಂದ ಪೋಸ್ಟ್ ಆಫೀಸ್ ನ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (Senior Citizens’ Savings Scheme) ಒಂದು ಅತ್ಯುತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಗರಿಷ್ಠ 30 ಲಕ್ಷವರೆಗೆ ಒಂದೇ ಬಾರಿಗೆ ಹೂಡಿಕೆ ಮಾಡಬಹುದು. SCSS ಖಾತೆಯನ್ನು ಯಾವುದೇ ಪೋಸ್ಟ್ ಆಫೀಸ್ ಅಥವಾ ಅಧಿಕೃತ ಬ್ಯಾಂಕ್ ನಲ್ಲಿ ತೆರೆಯಬಹುದು. ಅರ್ಜಿ ಫಾರ್ಮ್ ಭರ್ತಿ ಮಾಡಿ, ಗುರುತಿನ ದಾಖಲೆ (ಆಧಾರ್, ಪಾಸ್ ಪೋರ್ಟ್, ಇತ್ಯಾದಿ), ವಿಳಾಸದ ದಾಖಲೆ ಮತ್ತು ಎರಡು ಪಾಸ್ ಪೋರ್ಟ್ ಗಾತ್ರದ ಭಾವಚಿತ್ರವನ್ನು ನೀಡಬೇಕು. ಕನಿಷ್ಠ 1,000 ರಿಂದ ಖಾತೆ ತೆರೆಯಬಹುದು ಮತ್ತು ಇದನ್ನು ಒಂಟಿ ಅಥವಾ ಜಂಟಿ ಖಾತೆಯಾಗಿ (ಪತಿ/ಪತ್ನಿಯೊಂದಿಗೆ) ತೆರೆಯಬಹುದು. ಈ ಯೋಜನೆಯು ಸರಳ ಮತ್ತು ಸುರಕ್ಷಿತವಾದ ಹೂಡಿಕೆಯ ಆಯ್ಕೆಯಾಗಿದ್ದು, ನಿವೃತ್ತರಿಗೆ ಆರ್ಥಿಕ ಸ್ಥಿರತೆಯನ್ನು ಒದಗಿಸುತ್ತದೆ.
ಸ್ಥಿರ ಠೇವಣಿ ಯೋಜನೆ (Fixed Deposit Scheme)
ಜನರು ತಮ್ಮ ಹಣವನ್ನು ಹೂಡಿಕೆ ಮಾಡಲು ಈಗಾಗಲೇ ಬ್ಯಾಂಕ್ ನಲ್ಲಿ ಹಾಗೆ ಪೋಸ್ಟ್ ಆಫೀಸ್ ನಲ್ಲಿ ಹಲವಾರು FD ಯೋಜನೆಗಳು ಜಾರಿಯಲ್ಲಿದೆ. FD ಯೋಜನೆ ಅಥವಾ ಸ್ಥಿರ ಠೇವಣಿ ಯೋಜನೆಯು ಒಂದು ಹೂಡಿಕೆಯಾಗಿದ್ದು, ಇದರಲ್ಲಿ ನೀವು ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಕಂಪನಿಯಲ್ಲಿ (NBFC) ಸ್ಥಿರ ಅವಧಿಗೆ ಒಂದು ದೊಡ್ಡ ಮೊತ್ತವನ್ನು ಠೇವಣಿ ಇರಿಸಿ ಖಾತರಿಪಡಿಸಿದ ಬಡ್ಡಿದರವನ್ನು ಪಡೆದುಕೊಳ್ಳಬಹುದಾಗಿದೆ. ಇದು ಮಾರುಕಟ್ಟೆಯ ಏರಿಳಿತಗಳಿಲ್ಲದೆ ಉಳಿತಾಯವನ್ನು ಹೆಚ್ಚಿಸಲು ಜನಪ್ರಿಯ ಮಾರ್ಗವಾಗಿದೆ.
ಬಡ್ಡಿದರಗಳ ಹೋಲಿಕೆ
* ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ವಾರ್ಷಿಕವಾಗಿ 8.2% ಬಡ್ಡಿಯನ್ನು ಪಡೆದುಕೊಳ್ಳಬಹುದಾಗಿದೆ. ಬಡ್ಡಿಯನ್ನು ತ್ರೈಮಾಸಿಕವಾಗಿ ಪಾವತಿಸಲಾಗುತ್ತದೆ. ಯೋಜನೆಯ ಅವಧಿ 5 ವರ್ಷಗಳು, ಮತ್ತು ಅದನ್ನು ಮತ್ತೆ 3 ವರ್ಷಗಳವರೆಗೆ ವಿಸ್ತರಿಸಬಹುದು.
* ಇನ್ನು FD ಯೋಜನೆಯಲ್ಲಿ ಸುಮಾರು 7.5% ಬಡ್ಡಿಯನ್ನು ಪಡೆದುಕೊಳ್ಳಬಹುದಾಗಿದೆ.
ಒಂದು ವರ್ಷದ ಲಾಭ
* SCSS ನಲ್ಲಿ 5 ಲಕ್ಷ ಹಣವನ್ನು 8.2% ಬಡ್ಡಿಗೆ ಹೂಡಿಕೆ ಮಾಡಿದರೆ, 41,000 ರೂಪಾಯಿ ಬಡ್ಡಿಯನ್ನು ಪಡೆದುಕೊಳ್ಳಬಹುದು.
* ಆದರೆ FD ಯೋಜನೆಯಲ್ಲಿ ಮೊದಲ ವರ್ಷಕ್ಕೆ 37,500 ರೂಪಾಯಿ ಬಡ್ಡಿಯನ್ನು ಪಡೆದುಕೊಳ್ಳಬಹುದು.
2 ಮತ್ತು 3ನೇ ವರ್ಷದಲ್ಲಿ
* SCSS ನಲ್ಲಿ ಮೊದಲ ವರ್ಷದ ಒಟ್ಟು ಮೊತ್ತ 5,41,000 ರೂಪಾಯಿ ಆಗಿದೆ. ಇದರ ಮೇಲೆ 8.2% ನಲ್ಲಿ ಮತ್ತೆ 44,362 ರೂ. ಬಡ್ಡಿ ಪಡೆದುಕೊಂಡರೆ ಒಟ್ಟು ಮೊತ್ತ 5,85,362 ರೂಪಾಯಿ ಆಗುತ್ತದೆ ಮತ್ತು ಇದಕ್ಕೆ ಮೂರನೇ ವರ್ಷದ ಬಡ್ಡಿ 48,000 ರೂಪಾಯಿ ಸೇರಿದರೆ 6,33,362 ರೂಪಾಯಿ ಒಟ್ಟು ಮೊತ್ತವಾಗುತ್ತದೆ.
* ಇನ್ನು FD ಯೋಜನೆಯ ಮೊತ್ತ ಎರಡನೇ ವರ್ಷದ ಕೊನೆಗೆ 5,37,500 ರೂಪಾಯಿ ಆಗಿರುತ್ತದೆ.
4 ಮತ್ತು 5 ನೇ ವರ್ಷದಲ್ಲಿ
* ಇನ್ನು SCSS ಮೊತ್ತ 4 ನೇ ವರ್ಷದ ಕೊನೆಗೆ 6,85,000 ರೂಪಾಯಿ ಆಗಿರುತ್ತದೆ ಮತ್ತು 5 ನೇ ವರ್ಷಕ್ಕೆ 52,170 ಬಡ್ಡಿ ಸೇರ್ಪಡೆಯಾಗುತ್ತದೆ, ಇದಾದ ನಂತರ ಒಟ್ಟು ಮೊತ್ತ 7,37,170 ರೂಪಾಯಿ ಆಗುತ್ತದೆ. ಇದರಲ್ಲಿ 2,37,170 ರೂಪಾಯಿ ಬಡ್ಡಿಯಿಂದ ಪಡೆದುಕೊಂಡ ಲಾಭವಾಗಿದೆ. ಉಳಿದ 5 ಲಕ್ಷ ಹೂಡಿಕೆ ಮಾಡಿದ ಮೊತ್ತವಾಗಿದೆ.
ತೆರಿಗೆ ಪ್ರಯೋಜನಗಳು
ಹೂಡಿಕೆ ಮೊತ್ತಕ್ಕೆ ಆದಾಯಕರ ಕಾಯ್ದೆ ಸೆಕ್ಷನ್ 80C ಅಡಿ ₹1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಆದರೆ, ಬಡ್ಡಿ ಆದಾಯಕ್ಕೆ ತೆರಿಗೆ ಅನ್ವಯವಾಗುತ್ತದೆ. ವಾರ್ಷಿಕ ಬಡ್ಡಿ ₹50,000 ಮೀರಿದರೆ TDS ಕಡಿತವಾಗುತ್ತದೆ, ಆದರೆ ಫಾರಂ 15G ಅಥವಾ 15H ಭರ್ತಿ ಮಾಡಿ TDS ತಪ್ಪಿಸಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

