Ads By Google

Fixed Deposit: ಬ್ಯಾಂಕ್ ಗ್ರಾಹಕರಿಗೆ ಹೊಸ ವರ್ಷದ ಗಿಫ್ಟ್, ಈ ಐದು ಬ್ಯಾಂಕ್ ಗಳ FD ಬಡ್ಡಿದರ ಹೆಚ್ಚಳ ಮಾಡಿದ ಬ್ಯಾಂಕ್

this banks hikes FD interest rate

Image Credit: Original Source

Ads By Google

Fixed Deposit Interest Rate Hike: ಎಲ್ಲೆಡೆ ಹೊಸ ವರ್ಷದ ಅದ್ದೂರಿ ಆಗಮನವಾಗಿದೆ. ಹೊಸ ವರ್ಷದ ಶುಭಾರಂಭಕ್ಕೆ ಜನರು ಕಾಯುತ್ತಿದ್ದು, ಇಂದಿನಿಂದ 2024 ಹೊಸ ವರ್ಷ ಆರಂಭವಾಗಿದೆ. ಹೊಸ ವರ್ಷದಲ್ಲಿ ಅನೇಕ ಹೊಸ ಹೊಸ ನಿಯಮಗಳು ಜಾರಿಯಾಗಿವೆ. 2023 ರಲ್ಲಿ ಇದ್ದಂತಹ ಅನೇಕ ನಿಯಮಗಳು ಬದಲಾಗಲಿವೆ. ಸದ್ಯ ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆಯನ್ನು ನೀಡಿದೆ.

Image Credit: Live Mint

ಬ್ಯಾಂಕ್ ಗ್ರಾಹಕರಿಗೆ ಹೊಸ ವರ್ಷದ ಗಿಫ್ಟ್
ಹೊಸ ವರ್ಷದಲ್ಲಿ ಆರಂಭದಲ್ಲಿ ಇದೀಗ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ ಹೊರಬಿದ್ದಿದೆ. ದೇಶದ ಪ್ರತಿಷ್ಠಿತ ಐದು ಬ್ಯಾಂಕ್ ಗಳು ತನ್ನ Fixed Deposit Interest ಅನ್ನು ಹೆಚ್ಚಳ ಮಾಡುವ ಮೂಲಕ ಬ್ಯಾಂಕ್ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆಯನ್ನು ನೀಡಿದೆ. ಯಾವ ಯಾವ ಬ್ಯಾಂಕ್ ಗಳು ಬಡ್ಡಿದರವನ್ನು ಹೆಚ್ಚಳ ಮಾಡಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಈ ಐದು ಬ್ಯಾಂಕ್ ಗಳ FD ಬಡ್ಡಿದರ ಹೆಚ್ಚಳ ಮಾಡಿದ ಬ್ಯಾಂಕ್
•Bank Of Baroda
Bank Of Baroda ತನ್ನ FD ದರವನ್ನು 10 ಬೇಸಿಸ್ ಪಾಯಿಂಟ್ ಗಳಿಂದ 125 ಬೇಸಿಸ್ ಪಾಯಿಂಟ್ ಗಳಿಗೆ ಹೆಚ್ಚಳ ಮಾಡಿದೆ. ಡಿಸೆಂಬರ್ 29 ರಿಂದ ಹೊಸ ಬಡ್ಡಿ ದರಗಳು ಜಾರಿಯಾಗಲಿವೆ.

Image Credit: NDTV

•State Bank Of India
State Bank Of India 2 ಕೋಟಿಗಿಂತ ಕಡಿಮೆ ಸ್ಥಿರ ಠೇವಣಿಗಳ ಬಡ್ಡಿ ದರವನ್ನು ಹೆಚ್ಚಿಸಿದೆ. ಡಿಸೆಂಬರ್ 27 ರಿಂದ ಹೊಸ ಬಡ್ಡಿದರಗಳು ಜಾರಿಯಾಗಲಿವೆ.

•Kotak Mahindra Bank
Kotak Mahindra Bank ತನ್ನ FD ದರವನ್ನು ಸಾಮಾನ್ಯ ಗ್ರಾಕರಿಗೆ 2 .75 ರಿಂದ 7 .25 ಬೇಸಿಸ್ ಪಾಯಿಂಟ್ ಹಿರಿಯ ನಾಗರಿಕರಿಗೆ 3 .35 ರಿಂದ 7 .80 ಪ್ರತಿಶತ ಹೆಚ್ಚಳ ಮಾಡಿದೆ.

Image Credit: ndtvprofit

•DCB Bank
DCB ಬ್ಯಾಂಕ್ 2 ಕೋಟಿಗಿಂತ ಕಡಿಮೆ ಸ್ಥಿರ ಠೇವಣಿಗಳ ಬಡ್ಡಿದರವನ್ನು ಹೆಚ್ಚಿಸಿದೆ. ಡಿಸೆಂಬರ್ 13 ರಿಂದ ಹೊಸ ಬಡ್ಡಿದರಗಳು ಜಾರಿಯಾಗಲಿವೆ.

•Federal Bank
Federal Bank 500 ದಿನಗಳ ಅವಧಿಗೆ ಹೂಡಿಕೆ ಮಾಡಿರುವ ಸ್ಥಿರ ಠೇವಣಿಗಳ ಬಡ್ಡಿದರವನ್ನು ಹೆಚ್ಚಿಸಿದೆ. ಡಿಸೆಂಬರ್ 5 ರಿಂದ ಹೊಸ ಬಡ್ಡಿದರಗಳು ಜಾರಿಯಾಗಲಿವೆ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.