Flipkart Flight Ticket: ವಿಮಾನದಲ್ಲಿ ಪ್ರಯಾಣಿಸುವ ಆಸೆ ಇರುವವರಿಗೆ ಬಂತು ದೀಪಾವಳಿ ಆಫರ್, ಅತೀ ಕಡಿಮೆ ಸಿಗಲಿದೆ ಟಿಕೆಟ್.

Flipkart Flight Ticket: ವಿಮಾಗಳಲ್ಲಿ ಪ್ರಯಾಣ (Flight Journey) ಮಾಡುವ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಇದ್ದೆ ಇರುತ್ತದೆ. ವಿಮಾನದಲ್ಲಿ ಪ್ರಯಾಣ ಮಾಡುವುದು ಬಹಳ ವೆಚ್ಚದಾಯವಾದ ಕಾರಣ ಜನರು ವಿಮಾನದಲ್ಲಿ ಪ್ರಯಾಣ ಮಾಡಲು ಹಿಂದೇಟು ಹಾಕುತ್ತಾರೆ. ಇನ್ನು ಭಾರತದಲ್ಲಿ ಪ್ರಯಾಣ ಮಾಡಲು ಯಾವುದೇ ರೀತಿಯ ಪಾಸ್ಪೋರ್ಟ್ (pass port) ಬೇಕಾಗಿಲ್ಲ, ಆದರೆ ವಿದೇಶಗಳಿಗೆ ಪ್ರಯಾಣ ಮಾಡಬೇಕು ಅಂದರೆ ಪಾಸ್ಪೋರ್ಟ್ ಕಡ್ಡಾಯವಾಗಿದೆ.

ಹಬ್ಬದ ಸಮಯದಲ್ಲಿ ಹೆಚ್ಚಿನ ಜನರು ತಮ್ಮ ಊರುಗಳಿಗೆ ಹೋಗುತ್ತಾರೆ ಮತ್ತು ಹಬ್ಬದ ಸಮಯದಲ್ಲಿ ಬಸ್ಸುಗಳಲ್ಲಿ ಟಿಕೆಟ್ ದರ ಕೂಡ ಹೆಚ್ಚು ಆಗಿರುತ್ತದೆ. ಸದ್ಯ ಈಗ ದೀಪಾವಳಿ ಆಫರ್ (diwali Offer) ನಡೆಯುತ್ತಿದ್ದು ವಿಮಾನದಲ್ಲಿ ಪ್ರಯಾಣ ಮಾಡುವ ಜನರಿಗೆ ಬಂಪರ್ ಆಫರ್ ಘೋಷಣೆ ಮಾಡಲಾಗಿದೆ. ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂದು ಆಸೆ ಇದ್ದವರಿಗೆ ಈ ಸಮಯದಲ್ಲಿ ಕಡಿಮೆ ಟಿಕೆಟ್ ದರದಲ್ಲಿ ವಿಮಾನದಲ್ಲಿ ಪ್ರಯಾಣ ಮಾಡಬಬಹುದು ಮತ್ತು ಈ ಆಫರ್ ಕೆಲವು ದಿನಗಳು ಮಾತ್ರ ಇರಲಿದೆ.

Flight tickets will be available at a low price on Flipkart
Image Credit: wktv

ದೀಪಾವಳಿ ಹಬ್ಬಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಳ
ದೀಪಾವಳಿ ಸಮಯದಲ್ಲಿ ಸರ್ಕಾರೀ ರಜೆ ಮತ್ತು ದೊಡ್ಡ ದೊಡ್ಡ ಕಂಪನಿಗಳು ತಮ್ಮ ನೌಕರರಿಗೆ ರಜೆಯನ್ನ ನೀಡುವುದರ ಕಾರಣ ಜನರು ತಮ್ಮ ತಮ್ಮ ಊರುಗಳಿಗೆ ಹೋಗುತ್ತಾರೆ ಮತ್ತು ದೀಪಾವಳಿ ಸಮಯದಲ್ಲಿ ಬಸ್ಸುಗಳಲ್ಲಿ ಟಿಕೆಟ್ ಸಿಗುವುದು ಬಹಳ ಕಷ್ಟವಾಗಿದೆ. ದೀಪಾವಳಿ ಸಮಯದಲ್ಲಿ ಬಸ್ಸುಗಳಲ್ಲಿ ಮಾತ್ರವಲ್ಲದೆ ರೈಲುಇಗಳಲ್ಲಿ ಟಿಕೆಟ್ ಸಿಗುವುದು ಬಹಳ ಕಷ್ಟ.

ಖಾಸಗಿ ಬಸ್ಸುಗಳ ಟಿಕೆಟ್ ದರ ಹೆಚ್ಚಳ
ಹಬ್ಬದ ಸಮಯದಲ್ಲಿ ಊರುಗಳಿಗೆ ಹೋಗುವುದು ಅನಿವಾರ್ಯ ಆಗಿದೆ ಮತ್ತು ಊರುಗಳಿಗೆ ಹೋಗುವುದು ಅನಿವಾರ್ಯ ಆದಕಾರಣ ಖಾಸಗಿ ಬಸ್ಸುಗಳು ತಮ್ಮ ಟಿಕೆಟ್ ದರವನ್ನ ಹೆಚ್ಚಳ ಮಾಡಿದ್ದು ಪ್ರಯಾಣಿಕರ ಜೇಬಿಗೆ ಕತ್ತರಿಯನ್ನ ಹಾಕಿದೆ. ಸದ್ಯ ಖಾಸಗಿ ಬಸ್ಸುಗಳು ತಮ್ಮ ಟಿಕೆಟ್ ದರವನ್ನ ದುಪ್ಪಟ್ಟು ಮಾಡಿದ್ದು ಇದು ಕೆಲವು ಪ್ರಯಾಣಿಕರ ಕೋಪಕ್ಕೆ ಕೂಡ ಕಾರಣವಾಗಿದೆ.

Flight tickets can be booked on Flipkart
Image Credit: cnbctv18

ಫ್ಲಿಪ್ಕಾರ್ಟ್ ನಲ್ಲಿ ವಿಮಾನದ ಟಿಕೆಟ್ ಮೇಲೆ ಭಾರಿ ಡಿಸ್ಕೌಂಟ್
ಹೌದು ಫ್ಲಿಪ್ಕಾರ್ಟ್ ನಲ್ಲಿ ವಿಮಾಗಳ ಟಿಕೆಟ್ ಬುಕ್ ಮಾಡಿದರೆ ದೊಡ್ಡ ಮಟ್ಟದ ಆಫರ್ ಘೋಷಣೆ ಮಾಡಲಾಗಿದೆ. ಫ್ಲಿಪ್ಕಾರ್ಟ್ ನಲ್ಲಿ ದೀಪಾವಳಿ ಆಫರ್ ಘೋಷಣೆ ಆಗಿದ್ದು ಫ್ಲಿಪ್ಕಾರ್ಟ್ ನಲ್ಲಿ ವಿಮಾನಗಳ ಟಿಕೆಟ್ ಬುಕಿಂಗ್ ಮಾಡಿದರೆ ಶೇಕಡಾ 30 ರಷ್ಟು ರಿಯಾಯಿತಿಯನ್ನ ಪಡೆದುಕೊಳ್ಳಬಹುದು.

Join Nadunudi News WhatsApp Group

ಕೆಲವು ದಿನಗಳು ಮಾತ್ರ ಇರಲಿದೆ ಈ ಆಫರ್
ಈ ಆಫರ್ ಈಗಾಗಲೇ ಆರಂಭ ಆಗಿದ್ದು ಇದೆ 23 ನೇ ತಾರೀಕಿಗೆ ಈ ಆಫರ್ ಮುಕ್ತಾಯ ಕೂಡ ಆಗಲಿದೆ. ಈ ಸಮಯದಲ್ಲಿ ಫ್ಲಿಪ್ಕಾರ್ಟ್ ನಲ್ಲಿ ವಿಮಾಗಳ ಟಿಕೆಟ್ ಬುಕ್ ಮಾಡಿದರೆ ಶೇಕಡಾ 15 ರಿಂದ 30 ರಷ್ಟು ಕಡಿಮೆ ದರದಲ್ಲಿ ಟಿಕೆಟ್ ಬುಕ್ ಮಾಡಬಹುದು.

If you book a flight ticket on Flipkart, you will get a discount
Image Credit: economictimes.indiatimes

ಫ್ಲಿಪ್ಕಾರ್ಟ್ ನಲ್ಲಿ ಇದೆ ಹಲವು ಆಫರ್
ಮೊಬೈಲ್ ಅಥವಾ ಸ್ಮಾರ್ಟ್ ಫೋನ್ ನಲ್ಲಿ ಫ್ಲಿಪ್ಕಾರ್ಟ್ ಅಪ್ಲಿಕೇಶನ್ ತೆರೆದು ಅದರಲ್ಲಿ ಕೆಲವು ಆಫರ್ ಗಳ ಆಯ್ಕೆ ಇರುತ್ತದೆ ಮತ್ತು ಆ ಆಫರ್ ಗಳಲ್ಲಿ ಯಾವ ಆಫರ್ ನಿಮಗೆ ಸೂಕ್ತ ಅನಿಸುತ್ತದೆಯೋ ಅದರಲ್ಲಿ ಟಿಕೆಟ್ ಬುಕ್ ಮಾಡಿದರೆ ನೀವು ಆಫರ್ ಗಳನ್ನ ಪಡೆದುಕೊಳ್ಳಬಹುದು.

ಬಸ್ಸಿಗಿಂತ ವಿಮಾನದ ದರ ಕಡಿಮೆ
ಬಸ್ಸುಗಳಲ್ಲಿ ಟಿಕೆಟ್ ದರ ಹೆಚ್ಚಾಗಿದ್ದು ಬಸ್ಸಿಗೆ ಅಷ್ಟು ಹಣವನ್ನ ನೀಡಿ ಪ್ರಯಾಣ ಮಾಡುವ ಬದಲು ವಿಮಾನದಲ್ಲಿ ಪ್ರಯಾಣ ಮಾಡುವುದು ಉತ್ತಮ ಅನ್ನುವುದು ಹಲವು ಜನರ ಅಭಿಪ್ರಾಯ ಆಗಿದೆ.

Join Nadunudi News WhatsApp Group