Flipkart Offer: ಫ್ಲಿಪ್ಕಾರ್ಟ್ ನಲ್ಲಿ ಇಂದಿನಿಂದ ಧಮಾಕ ಸೇಲ್ ಆರಂಭ, ಈ ವಸ್ತುಗಳ ಮೇಲೆ ಭರ್ಜರಿ 80% ಡಿಸ್ಕೌಂಟ್.

ಫ್ಲಿಪ್ಕಾರ್ಟ್ ನಲ್ಲಿ ಇಂದಿನಿಂದ ಧಮಾಕ ಸೇಲ್ ಆರಂಭ ಆಗಿದೆ.

Flipkart Bachat Dhamaal Offer: ಇತ್ತೀಚಿಗೆ ಜನಪ್ರಿಯ ಇ – ಕಾಮರ್ಸ್ ಕಂಪನಿಗಳು ಗ್ರಾಹಕರಿಗೆ ಹೆಚ್ಚು ಹೆಚ್ಚು ರಿಯಾಯಿತಿಯನ್ನು ನೀಡುತ್ತಿದೆ. ಅದರಲ್ಲೂ Flipkart ಹೆಚ್ಚಿನ ಆಫರ್ ನೀಡುವ ಮೂಲಕ ಗ್ರಾಹಕರ ಹಣವನ್ನು ಉಳಿಸುತ್ತಿದೆ. ಗ್ರಾಹಕರು ಫ್ಲಿಪ್ ಕಾರ್ಟ್ ಆಫರ್ ನ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ಇನ್ನೂ ಆಗಸ್ಟ್ 15 ರಂದು ಫ್ಲಿಪ್ ಕಾರ್ಟ್ ಬಿಗ್ ಇಂಡಿಪೆಂಡೆನ್ಸ್ ಡೇ ಆಫರ್ ಅನ್ನು ನೀಡಿತ್ತು. ಇದೀಗ ಈ ಆಫರ್ ನ ಬೆನ್ನಲ್ಲೇ ಕಂಪನಿಯು ಬಿಗ್ ಬಚತ್ ಧಮಲ್ ಸೇಲ್ ಅನ್ನು ನೀಡುತ್ತಿದೆ. ಈ ಬಿಗ್ ಸೇಲ್ ನಲ್ಲಿ ಗ್ರಾಹಕರು ಎಲ್ಲಾ ರೀತಿಯ ವಸ್ತುಗಳ ಮೇಲೆ ರಿಯಾಯಿತಿಯನ್ನು ಪಡೆಯಬಹುದು.

Flipkart Bachat Dhamaal Offer
Image Source: Gadgets360

ಫ್ಲಿಪ್ಕಾರ್ಟ್ ನಲ್ಲಿ ಇಂದಿನಿಂದ ಧಮಾಕ ಸೇಲ್ ಆರಂಭ
ಫ್ಲಿಪ್ಕಾರ್ಟ್ ಇದೀಗ ಗ್ರಾಹಕರಿಗಾಗಿ ಬಿಗ್ ಬಚತ್ ಧಮಲ್ ಸೇಲ್ (Flipkart  Bachat Dhamaal Offer) ನಲ್ಲಿ ಭರ್ಜರಿ 80 ಪ್ರತಿಶತದಷ್ಟು ರಿಯಾಯಿತಿಯನ್ನು ಘೋಷಿಸಿದೆ. ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್​ನಲ್ಲಿ ಫ್ಯಾಷನ್, ಮೇಕಪ್ ಐಟಮ್, ಮನೆ-ಕಿಚನ್, ಅಲಂಕಾರ ಮತ್ತು ಪೀಠೋಪಕರಣಗಳು, ಮೊಬೈಲ್‌ಗಳು, ಎಲೆಕ್ಟ್ರಾನಿಕ್ಸ್, ಟಿವಿ ಉಪಕರಣಗಳ ಮೇಲೆ ದೊಡ್ಡ ರಿಯಾಯಿತಿಗಳನ್ನು ಘೋಷಿಸಿದೆ. ಬ್ರಾಂಡೆಡ್ ಪ್ರೊಡಕ್ಟ್ ಗಳ ಮೇಲೆ ವಿಶೇಷ ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಈ ವಸ್ತುಗಳ ಮೇಲೆ ಭರ್ಜರಿ 80% ಡಿಸ್ಕೌಂಟ್
ನೀವು ಗೃಹ ಬಳಕೆಯ ವಸ್ತುಗ ಮೇಲೆ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. ಕೇವಲ 499, 699, 799, 999 ರೂ. ಗಳಲ್ಲಿ ಗೃಹ ಅಲಂಕಾರಿಕ ವಸ್ತುಗಳು ಹಾಗೂ ಇನ್ನಿತರ ಡ್ರೆಸ್ ಗಳನ್ನೂ ಖರೀದಿಸಬಹುದಾಗಿದೆ. ಗೃಹಪಯೋಗಿ ವಸ್ತುಗಳ ಮೇಲೆ ಶೇ. 70, ವಾಷಿಂಗ್ ಮೆಷಿನ್ ಗೆ ಶೇ, 60 ರಷ್ಟು ರಿಯಾಯಿತಿ ಲಭ್ಯವಿದೆ.

Flipkart Bachat Dhamaal Offer
Imagee Source: Mint

ಬ್ಯೂಟಿ ಪ್ರೊಡಕ್ಟ್ ಗಳ ಖರೀದಿಯ ಮೇಲೆ 60% ಹಾಗೆಯೆ ದಿನಸಿ ಪದಾರ್ಥಗಳ ಮೇಲೆ ಶೇ. 70 ಹಾಗೆ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ ಶೇ. 75 ರಷ್ಟು ರಿಯಾಯಿತಿ ಲಭ್ಯವಿದೆ. ಇನ್ನೂ ಫ್ಲಿಪ್ ಕಾರ್ಟ್ ಈ ಆಫರ್ ಅನ್ನು ಸೆಪ್ಟೆಂಬರ್ 3 ರ ವರೆಗೆ ಮಾತ್ರ ಇರಿಸಿದೆ. ಇನ್ನೂ ಎರಡು ದಿನಗಳು ಮಾತ್ರ ಈ ಆಫರ್ ಲಭ್ಯವಾಗಲಿದೆ. ನೀವು ಫ್ಲಿಪ್ ಕಾರ್ಟ್ ನ ಬಿಗ್ ಬಚತ್ ಧಮಲ್ ಸೇಲ್ ನ ಆಫರ್ ಅನ್ನು ಬಳಸಿಕೊಂಡು ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group