Ads By Google

iPhone 15: ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್: 45 ಸಾವಿರಕ್ಕೂ ಐಫೋನ್ 15 ಲಭ್ಯ!

iPhone 15

Image Source: Mint

Ads By Google

iPhone 15 Offer: ಸಧ್ಯಕ್ಕೆ ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ (Flipkart Republic Day Sale) ನಡೆಯುತ್ತಿದ್ದು, ಈ ವಿಶೇಷ ಸೇಲ್‌ನಲ್ಲಿ 45 ಸಾವಿರಕ್ಕೆ ಐಫೋನ್ 15 (iPhone 15) ಖರೀದಿ ಮಾಡಲು ಅನುವು ಮಾಡಿಕೊಡಲಾಗಿದೆ. ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಆಫರ್ ಬೆಲೆಯಲ್ಲಿ ನೀವು ನೋಡಿರಬಹುದು.

ಆದರೆ, ಅದೆಲ್ಲಾ ಆಫರ್‌ಗಿಂತ ಭಿನ್ನ ಆಫರ್ ಈ ಸೇಲ್‌ನಲ್ಲಿ ಲಭ್ಯ ಇದ್ದು, ಅದರಲ್ಲೂ ಐಫೋನ್‌ಗಳು ಈ ವಿಶೇಷ ಸೇಲ್‌ನಲ್ಲಿ ವಿಶೇಷ ಬೆಲೆಯೊಂದಿಗೆ ಕಾಣಿಸಿಕೊಂಡಿವೆ.ಇದರ ಫೀಚರ್ಸ್ ಏನು ಎಂದು ತಿಳಿದುಕೊಳ್ಳಿ.

Image Credit: Finance

ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ಬಾರಿ ರಿಯಾಯಿತಿ

ಆಪಲ್ ವಂಡರ್‌ಲಸ್ಟ್ ಈವೆಂಟ್‌ನಲ್ಲಿ (Apple Wonderlust Event) ಐಫೋನ್ 15 ಅನ್ನು 79,999 ರೂ.ಗಳ ಬೆಲೆಗೆ ಲಾಂಚ್‌ ಮಾಡಲಾಗಿತ್ತು. ಈ ಫೋನ್ ಬಿಡುಗಡೆಯಾದ ಕೆಲವೇ ತಿಂಗಳುಗಳ ನಂತರ, ಫ್ಲಿಪ್‌ಕಾರ್ಟ್‌ನ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಅಂದರೆ ಸದ್ಯಕ್ಕೆ ಚಾಲ್ತಿಯಲ್ಲಿ ಇರುವ ಸೇಲ್‌ನಲ್ಲಿ 45,000 ರೂ. ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ವೆನಿಲ್ಲಾ ಐಫೋನ್ 15 ರೂಪಾಂತರದ ಬೆಲೆ 66,999 ಆಗಿದ್ದು, ಹೆಚ್ಚುವರಿಯಾಗಿ ಬ್ಯಾಂಕ್ ಕೊಡುಗೆಗಳ ಲಾಭವನ್ನು ಪಡೆಯುವ ಮೂಲಕ ಐಫೋನ್ 15 ಅನ್ನು 63,999 ಬೆಲೆಯಲ್ಲಿ ಖರೀದಿಸಬಹುದು. ಅದಾಗ್ಯೂ ನೀವು ವಿನಿಮಯ ಆಫರ್ ಬಯಸಿದ್ರೆ ಮಾತ್ರ 54,990 ರೂ. ವರೆಗೆ ರಿಯಾಯಿತಿಯನ್ನು ನೀಡಲಾಗುತ್ತದೆ.

Image Credit: Digitaltrends

ಐಫೋನ್‌ 15 ಫೀಚರ್ಸ್‌ ಹೀಗಿದೆ

ಐಫೋನ್ 14 ಪ್ರೊ ನಲ್ಲಿ ಕಂಡು ಬಂದ ಫೀಚರ್ಸ್‌ ಈ ಐಫೋನ್ 15 ನಲ್ಲಿ ಕಾಣಿಸಿಕೊಂಡಿದೆ. ಐಫೋನ್ 15 ಡಿಸ್‌ಪ್ಲೇ ಗಾತ್ರವು ಹಿಂದಿನ ಜನ್‌ನಂತೆಯೇ 6.1 ಇಂಚು ಇದೆಯಾದರೂ ಆಪಲ್ ಗಮನಾರ್ಹವಾಗಿ ಬ್ರೈಟ್‌ನೆಸ್‌ ಅನ್ನು 2000 ನಿಟ್ಸ್‌ಗಳಿಗೆ ಹೆಚ್ಚಿಗೆ ಮಾಡಿದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಐಫೋನ್ 15 ವರ್ಧಿತ ಕ್ಯಾಮೆರಾ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದ್ದು, ಕ್ವಾಡ್ ಪಿಕ್ಸೆಲ್ ಸೆನ್ಸರ್‌ ಆಯ್ಕೆಯೊಂದಿಗೆ 48 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ ಮತ್ತು ಕ್ಷಿಪ್ರ ಆಟೋಫೋಕಸ್‌ಗಾಗಿ 100 % ಫೋಕಸ್ ಪಿಕ್ಸೆಲ್‌ ಆಯ್ಕೆಯನ್ನು ಪಡೆದಿವೆ. ಇದು 24 ಮೆಗಾಪಿಕ್ಸೆಲ್‌ ಸೂಪರ್-ಹೈ-ರೆಸಲ್ಯೂಶನ್ ಡೀಫಾಲ್ಟ್ ಸೆಟ್ಟಿಂಗ್ ಅನ್ನು ಬಳಕೆ ಮಾಡಿಕೊಂಡು ಕೆಲಸ ಮಾಡುತ್ತದೆ.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in