Flipkart Smart Phone Discount: ಫ್ಲಿಪ್ ಕಾರ್ಟ್ ನಲ್ಲಿ ಬಂಪರ್ ಆಫರ್, ಕಡಿಮೆ ಬೆಲೆಯಲ್ಲಿ ಸಿಗಲಿದೆ ಮೋಟೋ G73 5G ಸ್ಮಾರ್ಟ್ ಫೋನ್.
Moto G73 5G Smart Phone: ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ (Smart Phone) ಗಳು ಲಗ್ಗೆ ಇಡುತ್ತಿದೆ. ಈಗಾಗಲೇ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಸಾಕಷ್ಟು ಮೊಬೈಲ್ ಫೋನ್ ಗಳನ್ನೂ ಬಿಡುಗಡೆ ಮಾಡಿದ್ದಾರೆ. ಇದೀಗ ಮೊಟೊರೊಲಾ ಮೊಬೈಲ್ ಸಂಸ್ಥೆಯು ತಮ್ಮ ಹೊಸ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ.
ಮೊಟೊರೊಲಾ ಮೊಬೈಲ್ ಸಂಸ್ಥೆಯು ಇದೀಗ G ಸರಣಿಯಲ್ಲಿ ಮೋಟೋ G73 5G ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್ ಫೋನ್ ಕೆಲವು ಆಕರ್ಷಕ ಫೀಚರ್ ಗಳನ್ನೂ ಹೊಂದಿದೆ. ಇನ್ನು ತನ್ನ ಹೊಸ ಹೊಸ ಫೀಚರ್ ನ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.
ಮೋಟೋ G73 5G ಸ್ಮಾರ್ಟ್ ಫೋನ್
ಫ್ಲಿಫ್ ಕಾರ್ಟ್ (Flipkart) ನಲ್ಲಿ ಇಂದು ಫಸ್ಟ್ ಸೆಲ್ ಪ್ರಾರಂಭಿಸಲಾಗಿದೆ. ಮೋಟೋ G73 5G ಇಂದು ಮದ್ಯಾಹ್ನ 12 ಕ್ಕೆ ಫ್ಲಿಪ್ ಕಾರ್ಟ್ ನಲ್ಲಿ ಫಸ್ಟ್ ಡೇ ಸೆಲ್ ಶುರು ಮಾಡಲಿದೆ. ಇನ್ನು ಈ ಸ್ಮಾರ್ಟ್ ಫೋನ್ 120Hz ರಿಫ್ರೆಶ್ ರೇಟ್ ಡಿಸ್ ಪ್ಲೇ ಒಳಗೊಂಡಿದೆ. ಮಿಡಿಯಾಟೆಕ್ ಡೈಮೆನ್ಸಿಟಿ 930 SoC ಪ್ರೊಸೆಸರ್ ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದರೊಂದಿಗೆ ಡ್ಯುಯೆಲ್ ರಿಯರ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ.
ಮೋಟೋ G73 5G ಸ್ಮಾರ್ಟ್ ಫೋನ್ ಬೆಲೆ
ಮೋಟೋ G73 5G ಸ್ಮಾರ್ಟ್ ಫೋನ್ 6 .5 ಇಂಚಿನ ಫುಲ್ HD ಪ್ಲಸ್ ಡಿಸ್ ಪ್ಲೇ ಯನ್ನು ಹೊಂದಿದೆ. ಈ ಫೋನ್ ಡಿಸ್ ಪ್ಲೇ 1080 x2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಷನ್ ಸಾಮರ್ಥ್ಯ ವನ್ನು ಒಳಗೊಂಡಿದೆ.
ಮೋಟೋ G73 5G ಸ್ಮಾರ್ಟ್ ಫೋನ್ 8GB RAM ಮತ್ತು 128 GB ಇಂಟರ್ ಸ್ಟಿರಾಜ್ ಅನ್ನು ಒಳಗೊಂಡಿದೆ. ಭಾರತದಲ್ಲಿ ಮೋಟೋ G73 5G ಸ್ಮಾರ್ಟ್ ಫೋನ್ 18,999 ರೂ. ಬೆಲೆಯನ್ನು ಹೊಂದಿದೆ. ಮಾರ್ಚ್ 16 ರಿಂದ ಈ ಮೋಟೋ G73 5G ಸ್ಮಾರ್ಟ್ ಫೋನ್ ಅನ್ನು ಫ್ಲಿಪ್ ಕಾರ್ಟ್ ನಲ್ಲಿ ಅಂಗಡಿಗಳ ಮೂಲಕ ಖರೀದಿಸಬಹುದು.